ಹೈಸ್ಕೂಲ್‌ನಲ್ಲೇ ಸಿಗರೇಟು ಸೇದಲು ಕಲಿತರು ಮಾಜಿ ಮುಖ್ಯಮಂತ್ರಿಗಳು !

By Web DeskFirst Published Nov 14, 2018, 1:29 PM IST
Highlights

ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

ಅಪ್ಪ ನನ್ನ ಶಾಲೆಗೆ ಸೇರಿಸಿದರಲಿಲ್ಲ. ಮನೆ ದೇವರು ಸಿದ್ಧರಾಮಯ್ಯನಿಗೆ ವೀರ ಮಕ್ಕಳ ಕುಣಿತ ಅಂತಿತ್ತು. ನನಗೆ ಆ ನೃತ್ಯ ಕಲಿಸಲು ಅಪ್ಪ ಅಲ್ಲಿಗೆ ಕಳಿಸಿದರು. ಆಮೇಲೆ ಆ ನೃತ್ಯ ಕಲಿಸುತ್ತಿದ್ದ ಮೇಷ್ಟ್ರೇ ನಮಗೆಲ್ಲ ಮರಳಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಓದು, ಬರಹ ಕಲಿಸಿದರು.

ಕಂತ್ರಿ ನಾಯಿಯೋ, ಜಾತಿ ನಾಯಿಯೋ ತಿಳಿಯುವುದು ಹೇಗೆ? ತೇಜಸ್ವಿ ಹೇಳ್ತಾರೆ ನೋಡಿ

ಮುಂದೆ ಐದನೇ ಕ್ಲಾಸ್‌ಗೇ ನೇರ ಶಾಲೆ ಪ್ರವೇಶ ಆಯ್ತು. ಆಗ ಆಟಗಳಲ್ಲಿ ನನಗೆ ಬಹಳ ಆಸಕ್ತಿ ಯಾವ ಆಟಕ್ಕೆ ಸೇರಿಸಿಕೊಳ್ಳದಿದ್ದರೂ ಜಗಳ ಮಾಡುತ್ತಿದ್ದೆ. ಸೇರೋದು ಮಾತ್ರ ಆಡಿದ್ದು ಅಷ್ಟರಲ್ಲೇ ಇದೆ. ಮುಂದೆ ಹೈಸ್ಕೂಲ್‌ಗೆ ಬಂದಾಗ ರಜೆಯಲ್ಲಿ ಹೊಲದಲ್ಲಿ ಉಳುಮೆ ಮಾಡ್ತಿದ್ದೆ, ಎಮ್ಮೆ ಮೇಯಿಸಲಿಕ್ಕೆ ಹೋಗ್ತಿದೆ. ಆಗ ಒಮ್ಮೆ ಹುಡುಗರು ನನಗೆ ಬೀಡಿ ಸೇದಲು ಹೇಳಿದರು, ಮೊದ ಮೊದಲು ಅಷ್ಟಾಗಿ ಸೇರಲಿಲ್ಲ. ಆಮೇಲೆ ಅಭ್ಯಾಸ ಆಗಿಬಿಟ್ಟಿತು. ಕಾಲೇಜಿಗೆ ಬಂದ ಮೇಲೆ ಪ್ರಮೋಶನ್, ಆಗ ಸಿಗರೇಟ್ ಸೇದಲು ಕಲಿತೆ. 

ಬೇಕೆಂದಾಗ ಅನಂತಮೂರ್ತಿಗೆ ಜ್ವರ ಬರ್ತಿಂತಂತೆ; ಅದೇಗೆ ಗೊತ್ತಾ?

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳು 

 

click me!