ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆ ಮದ್ದು

First Published Jun 20, 2018, 6:42 PM IST
Highlights

ಮುಖ ಹಾಗೂ ತ್ವಚೆಯ ಸೌಂದರ್ಯ ಕಾಪಾಡಲು ಹೆಣ್ಣು ಮಕ್ಕಳು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ನೂರಾರು ರುಪಾಯಿ ಕೊಟ್ಟು ಫೇಸ್‌ವಾಷ್, ಕ್ರೀಂ ಹಾಗೂ ಇನ್ನಿತರೆ ಸೌಂದರ್ಯ ವರ್ಧಕಗಳನ್ನು ಕೊಳ್ಳುತ್ತಾರೆ. ಇದರಿಂದ ದುಡ್ಡೂ ವೇಸ್ಟ್, ತ್ವಚೆ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲವೆಂಬ ಗ್ಯಾರಂಟಿಯೂ ಇಲ್ಲ. ಬದಲಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇಲ್ಲಿವೆ ಸಿಂಪಲ್ ಮದ್ದು. ಏನವು?

ತ್ವಚೆ ಚೆಂದವಿದ್ದಷ್ಟು ಸೌಂದರ್ಯ ಹೆಚ್ಚುತ್ತದೆ. ಆದರೆ, ಸುಖಾ ಸುಮ್ಮನೆ ಸಾವಿರಾರು ರು. ಖರ್ಚು ಮಾಡಿ, ಏನೇನೋ ಸೌಂದರ್ಯ ವರ್ಧಕಗಳನ್ನು ಬಳಸೋ ಬದಲು ಮನೆಯಲ್ಲಿಯೇ ಅನೇಕ ಸಿಂಪಲ್ ಮದ್ದುಗಳಿವೆ. ಇವುಗಳನ್ನು ಟ್ರೈ ಮಾಡಿ ನೋಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಸೌಂದರ್ಯವೂ ಹೆಚ್ಚುತ್ತದೆ.

- ಮುಖವನ್ನು ಮೃದುವಾಗಿಸಲು ನಾಲ್ಕೈದು ಚಮಚ ನಿಂಬೆರಸ, ಸ್ವಲ್ಪ ಅರಿಶಿನ, ಒಂದು ಟೀ ಚಮಚ ಸೌತೆಕಾಯಿ ರಸವನ್ನು ಚೆನ್ನಾಗಿ ಬೆರೆಸಿ, ಮುಖ, ಕುತ್ತಿಗೆಗೆ‌  ಹಚ್ಚಿ ಸ್ನಾನ ಮಾಡಿದಲ್ಲಿ ತ್ವಚೆ ಕೋಮಲವಾಗಿರುತ್ತದೆ. 
- ಮುಖದ ಜಿಡ್ಡು ಹೋಗಲಾಡಿಸಲು, ಗಂಧವನ್ನು ಪ್ರತಿ ರಾತ್ರಿ ಹಚ್ಚಿ, ಮುಂಜಾನೆ ತೊಳೆದುಕೊಂಡರೆ ಜಿಡ್ಡು ಕಡಿಮೆಯಾಗುತ್ತದೆ.
- ಖರ್ಜೂರದ ಸಿಪ್ಪೆ ತೆಗೆದು ಒಣಗಿಸಿ ಪುಡಿ ಮಾಡಿ ‌ನೀರಿನೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖ ತೊಳೆದುಕೊಂಡರೆ ಸುಕ್ಕುಗಳು ಮಾಯವಾಗುತ್ತದೆ.
- ಅಂಗಾಲುಗಳ ಬಿರುಕು ಹೋಗಲಾಡಿಸಲು ಬಳಸಿದ ನಿಂಬೆಹಣ್ಣಿನ ಸಿಪ್ಪೆಗಳನ್ನು ಬಿರುಕುಗಳ ಮೇಲೆ ಉಜ್ಜುತ್ತಿದ್ದರೆ ಕ್ರಮೇಣ ಬಿರುಕುಗಳು ಮಾಯವಾಗುತ್ತವೆ.
- ಟೊಮ್ಯಾಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ರಂಧ್ರಗಳು ನಿವಾರಣೆಯಾಗುತ್ತವೆ.
- ದ್ರಾಕ್ಷಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳಪಾಗುತ್ತದೆ. 
- ಚಳಿಗಾಲದಲ್ಲಿ ಚರ್ಮ ರಕ್ಷಣೆಗಾಗಿ ಬೆಣ್ಣೆ ಅಥವಾ ಕೆನೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಕಡಲೆಹಿಟ್ಟು ಅಥವಾ ಸೀಗೆಕಾಯಿಯಿಂದ ಮುಖ ತೊಳೆದರೆ ಚರ್ಮ ಮೃದುವಾಗಿರುತ್ತದೆ. 
- ಬಿಲ್ವದ ಹಣ್ಣಿನ ಸೇವನೆಯಿಂದ ಹಸಿವು, ಜೀರ್ಣ ಶಕ್ತಿ ವೃದ್ಧಿಸುತ್ತದೆ. 
- ನೀರಿನಲ್ಲಿ ಪುಡಿ ಮಾಡಿ ಮೊಡವೆಗಳಿಗೆ ಹಚ್ಚಿದರೆ, ಮೊಡವೆಗಳು ನಿವಾರಣೆಯಾಗುತ್ತವೆ.

click me!