ಹಳೆಯ ಆ ಕಾರಣದಿಂದ ಹಾಸಿಗೆಯಲ್ಲಿ ಪತ್ನಿಯೆದುರು ನಿತ್ಯವೂ ಸೋಲುತ್ತಿದ್ದೇನೆಯೇ ?

By Web Desk  |  First Published Aug 13, 2018, 8:05 PM IST

ಮಂಚದ ಮೇಲೆ ಪತ್ನಿ ಎದುರು ರತಿಕ್ರೀಡೆಯಲ್ಲಿ ಸೋಲುತ್ತಿದ್ದ ಒಬ್ಬರಿಗೆ ಲೈಂಗಿಕ ತಜ್ಞರು ನೀಡಿದ ಉತ್ತರವಿದು ?


ಮಂಚದ ಮೇಲೆ ಪತ್ನಿ ಎದುರು ರತಿಕ್ರೀಡೆಯಲ್ಲಿ ಸೋಲುತ್ತಿದ್ದ ಒಬ್ಬರಿಗೆ ಲೈಂಗಿಕ ತಜ್ಞರು ನೀಡಿದ ಉತ್ತರವಿದು ?

1] ಹಾಸಿಗೆಗೆ ಬಂದ ತಕ್ಷಣ ಪತ್ನಿಯೊಂದಿಗೆ ಒಂದಷ್ಟು ಸಮಯ ಹೊರಳಾಡಿದ ಕೂಡಲೆ ಇಲ್ಲವೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಒಂದು ಕ್ಷಣದಲ್ಲೇ ಸ್ಖಲನವಾಗಿ ಬಿಡುತ್ತದೆ. ಇದರಿಂದ ನಾನು ಸುಖ ಪಡುತ್ತಿಲ್ಲ ಪತ್ನಿಗೂ ಖುಷಿ ನೀಡಲಾಗುತ್ತಲ್ಲ. ಇದಕ್ಕೆ ಹಿಂದೆ ನಾನು ನಿತ್ಯವೂ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು ಕಾರಣವೇ ?       

ವೈದ್ಯರ ಉತ್ತರ : ಅತೀ ಹೆಚ್ಚಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಕಾರಣ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ ಎಂಬುವುದು ಶುದ್ಧ ಸುಳ್ಳು ಹಾಗೂ ಮೂಢನಂಬಿಕೆ. ಇದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸಿದ ಕಟ್ಟುಕತೆಯಲ್ಲದೆ ಮತ್ತೇನಿಲ್ಲ. ಶೀಘ್ರಸ್ಖಲನಕ್ಕೆ ಬೇರೆಯೇ ಕಾರಣಗಳಿರುತ್ತವೆ. ದೈಹಿಕ ಹಾಗೂ ಮಾನಸಿಕವಾಗಿ ನೀವು ಕುಗ್ಗಿದ್ದರೂ ಶೀಘ್ರಸ್ಖಲನಕ್ಕೆ ಕಾರಣವಾಗಬಹುದು. ಈ ಸಮಸ್ಯೆಗೆ ಮಾನಸಿಕ ವೈದ್ಯರು ಅಥವಾ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.  

click me!