
ಥೈರಾಯ್ಡ್ ಪರೀಕ್ಷೆ:
ಬದಲಾದ ಲೈಸ್ಟೈಲ್‌ನಿಂದ ಹೆಚ್ಚುತ್ತಿರುವ ಸಮಸ್ಯೆ. ತೂಕ ಹೆಚ್ಚಾಗುವುದು, ಕೂದಲು ಉದುರುವಿಕೆ, ಉಗುರು ಒಡೆಯುವುದು ಇತ್ಯಾದಿ ಥೈರಾಯ್ಡ್ ಅಥವಾ ಹೈಪೋಥೈರಾಯ್ಡಿಸಂ ನ ಲಕ್ಷಣ. ಈ ಗ್ರಂಥಿಯ 3, 4 ಮತ್ತು ಖಏ ಹಾರ್ಮೋನುಗಳನ್ನು ಸ್ರವಿಸುತ್ತವೆ. ಅವುಗಳು ಮೆಟಬಾಲಿಸಂನ್ನು ನಿಯಂತ್ರಿಸುತ್ತದೆ. ಇದರಿಂದ ಸಾಕಷ್ಟು ದೈಹಿಕ, ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಥೈರಾಯ್ಡ್ ಇರುವುದು ಬೇಗ ಗೊತ್ತಾದಷ್ಟು ಚಿಕಿತ್ಸೆ ಹೆಚ್ಚು ಪರಿಣಾಮಕಾರಿ.
ಸಂಪೂರ್ಣ ಸ್ತನ ಪರೀಕ್ಷೆ ಮತ್ತು ಮಮೊಗ್ರಮ್:
40ರ ಹರೆಯದ ಸೀಗೆ ಸ್ತನ ಪರೀಕ್ಷೆ ಅನಿವಾರ್ಯ. ಇದನ್ನು ಮನೆಯಲ್ಲೂ ಮಾಡಬಹುದು. ಸೀರೋಗ ತಜ್ಞರಿಂದ ವಾರ್ಷಿಕವಾಗಿ ಪರೀಕ್ಷೆ ಮಾಡಿಸಬಹುದು. ಮಮೊಗ್ರಮ್ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ. ಇದರಲ್ಲಿ ಸ್ತನಗಳ ನಿಖರ ಎಕ್ಸರೇ ಚಿತ್ರವನ್ನುಪಡೆಯಬಹುದು, ಅಸಹಜತೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು. ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲಿ ನಿವಾರಿಸುವುದು ಕಷ್ಟವಲ್ಲ.
ಬೋನ್ ಮಿನರಲ್ ಸಾಂದ್ರತೆ ಪರೀಕ್ಷೆ:
ಮಹಿಳೆಯು ಆಸ್ಟಿಯೊ ಪೆರೋಸಿಸ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೆಂಗಸಿನಲ್ಲಿ ಮೂಳೆ ಆರೋಗ್ಯಕ್ಕೆ ಸಂಬಂಸಿದ ‘ಈಸ್ಟ್ರೋಜನ್’ ಹಾರ್ಮೋನ್ ಕುಸಿತ ಇದಕ್ಕೆ ಕಾರಣ. ಆಸ್ಟಿಯೊಪೊರೋಸಿಸ್‌ಗೆ ಮುಖ್ಯ ಕಾರಣ ವಯಸ್ಸು. ಎಲುಬುಗಳ ಸ್ಥಿತಿ ಕ್ಷೀಣಿಸುವ ಹಂತವಾಗಿದ್ದು, ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುವುದು ಇದರ ಪ್ರಮುಖ ಲಕ್ಷಣ. ಹೀಗಾಗಿ, 40 ರ ಬಳಿಕ ಎಲ್ಲಾ ಮಹಿಳೆಯರು ಜೀವಸತ್ವ ಡಿ, ಸೀರಮ್ ಕ್ಯಾಲ್ಸಿಯಂ, ಪ್ಯಾರಾ ಥೈರಾಯ್ಡ್ ಮತ್ತು ಇತರ ಮೂಳೆ ಹಾರ್ಮೋನ್ ಪರೀಕ್ಷೆ ಮಾಡಿಸಬೇಕು.
ಪೆಲ್ವಿಕ್ ಮತ್ತು ಪ್ಯಾಪ್ ಸ್ಮೀಯರ್ ಟೆಸ್ಟ್:
ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ, ನೀವು ಏಕ್ಖೃಯ ಪತ್ತೆಗೆ ಸಂಪೂರ್ಣ ಶ್ರೇಣಿಯ ಪರೀಕ್ಷೆ ಮತ್ತು ಪ್ಯಾಪ್ ಸ್ಮಿಯರ್ ಟೆಸ್ಟ್ ಅಗತ್ಯ. ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳನ್ನು ಪತ್ತೆ ಹಚ್ಚುವ ಪ್ಯಾರಾ ಪರೀಕ್ಷೆಯು ಗರ್ಭಕಂಠದ ಕೋಶಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಹುಡುಕಿ ತಿಳಿಸುತ್ತದೆ. ಪೆಲ್ವಿಕ್ ಪರೀಕ್ಷೆಯು ಗರ್ಭಕಂಠ, ಗರ್ಭಾಶಯ, ಅಂಡಾಶಯ ಮತ್ತು ಕೆಳ ಹೊಟ್ಟೆಯ ಲೊಪಿಯನ್ ಟ್ಯೂಬ್ ಮತ್ತು ಓವರೀಸನ್ನು ಪರೀಕ್ಷಿಸಲು ಸಹಕಾರಿ. ಅಂಡಾಶಯದ ಕ್ಯಾನ್ಸರ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಈ ಪರೀಕ್ಷೆಯು ಬಹುಮುಖ್ಯವಾಗಿದೆ. ಆರಂಭದಲ್ಲಿ ಪತ್ತೆಯಾದರೆ, ಗರ್ಭಕಂಠದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು.
ಚರ್ಮದ ತಪಾಸಣೆ:
ಇವಿಷ್ಟು ವರ್ಷಗಳ ಬದುಕಿನ ಪಯಣದ ಬಳಿಕ ಚರ್ಮವು ಹೆಚ್ಚು ಆರೋಗ್ಯಕರವಾಗಿರುವುದಿಲ್ಲ. ಸಮಯ ಕಳೆದಂತೆ, ಮೆಲನೊಮ ಮತ್ತು ಚರ್ಮದ ಕ್ಯಾನ್ಸರ್ ಹೆಚ್ಚುವ ಸಾಧ್ಯತೆಯಿದೆ. 18 ವರ್ಷಕ್ಕಿಂತ ಮೊದಲೇ ಸನ್ ಬನ್ಗೆರ್ ಒಳಗಾದವರು ಅಥವಾ ಅನುವಂಶಿಕವಾಗಿ ಮೆಲನೋಮ ಹೊಂದಿರುವ ಕುಟುಂಬದ ಸದಸ್ಯರಿದ್ದರೆ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಅನಿಯಮಿತ, ಅಸಹಜ, ದೊಡ್ಡ, ಅಥವಾ ಬಣ್ಣವನ್ನು ಹೊಂದಿರುವ ಮಚ್ಚೆಗಳನ್ನು ಹುಡುಕುವ ಮೂಲಕ ಸ್ವಯಂ ಪರೀಕ್ಷೆಯನ್ನು ಮಾಡಬಹುದು. ಸ್ಕ್ರೀನಿಂಗ್ ಮಾಡಿಸಬಹುದು. ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ: ಮಧುಮೇಹ ಮತ್ತು ಕೊಲೆಸ್ಟ್ರಾಲ್ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಿ.
ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ:
ಮಧುಮೇಹ ಮತ್ತು ಕೊಲೆಸ್ಟ್ರಾಲ್ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.