ಸಾವಿನ ನಂತರದ ಪ್ರಪಂಚ ಹೇಗಿದೆ? 3 ಬಾರಿ ಸತ್ತು-ಬದುಕಿ ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ!

Published : Jan 24, 2026, 04:21 PM IST
soul leaving body dhanishta panchami in tamil

ಸಾರಾಂಶ

'ಜನರನ್ನು ನೋಡಿದಾಗ ನನಗೆ ಅವರ ದೇಹದ ಒಳಗಿನ ಅಂಗಾಂಗಗಳು ಕಾಣಿಸುತ್ತಿದ್ದವು. ನಾನು ಹತ್ತಿರ ಹೋದಾಗ ಬಲ್ಸ್‌ಗಳು ಒಡೆದು ಹೋಗುತ್ತಿದ್ದವು' ಎಂದು ಅವರು ಹೇಳಿದ್ದಾರೆ. 2024ರ ನವೆಂಬರ್‌ನಲ್ಲಿ ಮತ್ತೆ ಎರಡು ಬಾರಿ ಹೃದಯಾಘಾತವಾಗಿದೆ. ಆಗಲೂ ಅವರಿಗೆ ಇದೇ ರೀತಿಯ ಅನುಭವ ಆಗಿದೆಯಂತೆ.

ಸಾವಿನ ನಂತರದ ಬದುಕು

ಮನುಷ್ಯನ ಸಾವಿನ ನಂತರದ ಬದುಕು (Life after Death) ಅಥವಾ ಆತ್ಮದ ಅಸ್ತಿತ್ವದ ಬಗ್ಗೆ ಶತಮಾನಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ನಿಖರ ಉತ್ತರ ಎಂಬುದು ಇಲ್ಲ ಎನ್ನಲಾಗಿದ್ದರೂ ಹಲವರು ಈ ಬಗೆಗಿನ ತಮ್ಮ ಅನುಭವ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಅಮೆರಿಕದ ಮೇರಿಲ್ಯಾಂಡ್‌ನ 80 ವರ್ಷದ ಪಾಸ್ಟರ್ ನಾರ್ಮಾ ಎಡ್ವರ್ಡ್ಸ್ ಎಂಬುವವರು ಮರಣದ ನಂತರದ ಪ್ರಪಂಚ ಹೇಗಿರುತ್ತದೆ ಎಂಬುದನ್ನು ಸ್ವತಃ ಅನುಭವಿಸಿ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ.

ಪಾಸ್ಟರ್ ನಾರ್ಮಾ ಎಡ್ವರ್ಡ್ಸ್ ಒಮ್ಮೆ ಅಲ್ಲ, ಬರೋಬ್ಬರಿ ಮೂರು ಬಾರಿ ವೈದ್ಯಕೀಯವಾಗಿ ಮೃತಪಟ್ಟು (Clinically Dead) ಎಂದು ಘೋಷಿಸಲಾಗಿತ್ತು. ಆದರೆ ಪ್ರತಿ ಬಾರಿಯೂ ಅವರು ಅಚ್ಚರಿಯ ರೀತಿಯಲ್ಲಿ ಮತ್ತೆ ಬದುಕಿ ಬಂದಿದ್ದಾರೆ. ನಾರ್ಮಾ ಅವರ ಈ ಅತೀಂದ್ರಿಯ ಅನುಭವಗಳು ಮೊದಲ ಬಾರಿಗೆ ಶುರುವಾಗಿದ್ದು ಅವರಿಗೆ 20 ವರ್ಷವಿದ್ದಾಗ ಎನ್ನಲಾಗಿದೆ.

ಹೃದಯಾಘಾತದಿಂದ ಅವರು ಕುಸಿದು ಬಿದ್ದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದರು. ಆ ಸಮಯದಲ್ಲಿ ತಮ್ಮ ದೇಹದಿಂದ ಆತ್ಮ ಬೇರ್ಪಟ್ಟು, ಆಪರೇಷನ್ ಥಿಯೇಟರ್‌ನ ಮೇಲ್ಮಾವಣಿಯಿಂದ ತಮ್ಮದೇ ದೇಹವನ್ನು ತಾವೇ ನೋಡುತ್ತಿದ್ದ ಅನುಭವವಾಯಿತು ಎಂದು ನಾರ್ಮಾ ವಿವರಿಸಿದ್ದಾರೆ.

ಬೆಳಕಿನ ಸುರಂಗ ಮತ್ತು ಬದುಕಿನ ವಿಮರ್ಶೆ:

 ನಾರ್ಮಾ ಹೇಳುವ ಪ್ರಕಾರ, ಅವರು ಅತಿ ವೇಗವಾಗಿ ಕತ್ತಲೆಯ ಸುರಂಗವೊಂದರಲ್ಲಿ ಸಾಗಿ ಕೊನೆಯಲ್ಲಿ ವರ್ಣನಾತೀತವಾದ ಬಿಳಿ ಬೆಳಕನ್ನು ಕಂಡರಂತೆ. ಅಲ್ಲಿ ಅವರ ಜೀವನದ ಸಂಪೂರ್ಣ ವಿವರಗಳನ್ನು ತೋರಿಸುವ ಬೃಹತ್ ಪರದೆಯೊಂದು ಕಾಣಿಸಿತು. 'ನೀವು ಹುಟ್ಟುವಾಗ ನಿಮಗಾಗಿ ರೂಪಿಸಲಾದ ಜೀವನ, ನೀವು ಬದುಕಿದ ಜೀವನ ಮತ್ತು ಅದರ ಫಲಿತಾಂಶ" ಎಂಬ ಮೂರು ವಿಭಾಗಗಳಲ್ಲಿ ಅವರ ಬದುಕು ಅಲ್ಲಿ ಪ್ರದರ್ಶನವಾಯಿತು. ಆದರೆ ಪ್ರತಿ ಬಾರಿಯೂ ಅಲ್ಲಿ “ನಿಮ್ಮ ಉದ್ದೇಶ ಇನ್ನು ಈಡೇರಿಲ್ಲ" ಎಂಬ ಸಂದೇಶ ಬರುತ್ತಿತ್ತು ಎನ್ನುತ್ತಾರೆ ಅವರು.

ಇನ್ನೂ ಒಂದು ಶಾಕಿಂಗ್ ಸಂಗತಿ:

ಹೌದು ಅದೊಂದು ಅಚ್ಚರಿಯ ಸಂಗತಿಯನ್ನು ಹೇಳಿದ್ದಾರೆ ಪಾಸ್ಟರ್ ನಾರ್ಮಾ ಎಡ್ವರ್ಡ್ಸ್... 'ನಾನು ಅಲ್ಲಿ ನನ್ನ ಮೃತ ಸೋದರತ್ತೆಯನ್ನು ಭೇಟಿಯಾದೆ. ಅಲ್ಲಿ ನನಗೊಂದು ಸ್ಪಷ್ಟ ಸಂದೇಶ ಸಿಕ್ಕಿತು.. 'ಜೀವನವು ಶಾಶ್ವತ, ಸಾವು ಕೇವಲ ಒಂದು ಹಂತವಷ್ಟೇ ಹೊರತು ಅಂತ್ಯವಲ್ಲ. ಮರಳಿ ದೇಹಕ್ಕೆ ಪ್ರವೇಶಿಸುವಾಗ ಒಂದು ಇಡೀ ಗ್ಯಾಲಕ್ಸಿಯನ್ನು ಸಣ್ಣ ಚಹಾದ ಕಪ್‌ಗೆ ತುರುಕಿದಷ್ಟು ನೋವಿನ ಅನುಭವವಾಯಿತು' ಎಂದು ಅವರು ತಮ್ಮ ಸಾವು-ಬದುಕಿನ ಹೋರಾಟದ ಅನುಭವವನ್ನು ನೆನಪಿಸಿಕೊಂಡು ಹೇಳಿದ್ದಾರೆ.

ಅತಿಮಾನುಷ ಶಕ್ತಿಗಳ ಅನುಭವ:

ನಾರ್ಮಾ ಅವರು ಮರಳಿ ಬದುಕಿದ ನಂತರ ಅವರ ಇಂದ್ರಿಯಗಳು ತೀಕ್ಷ್ಯಗೊಂಡವಂತೆ. 'ಜನರನ್ನು ನೋಡಿದಾಗ ನನಗೆ ಅವರ ದೇಹದ ಒಳಗಿನ ಅಂಗಾಂಗಗಳು ಕಾಣಿಸುತ್ತಿದ್ದವು. ನಾನು ಹತ್ತಿರ ಹೋದಾಗ ಬಲ್ಸ್‌ಗಳು ಒಡೆದು ಹೋಗುತ್ತಿದ್ದವು' ಎಂದು ಅವರು ಹೇಳಿದ್ದಾರೆ. 2024ರ ನವೆಂಬರ್‌ನಲ್ಲಿ ಮತ್ತೆ ಎರಡು ಬಾರಿ ಹೃದಯಾಘಾತವಾದಾಗಲೂ ಅವರು ಇಂತದ್ದೇ ಅನುಭವಗಳನ್ನು ಕಂಡಿದ್ದಾರೆ ಎನ್ನಲಾಗಿದೆ.

ಪ್ರತಿ ಬಾರಿಯೂ ದೇವದೂತರಂತೆ ಅನ್ನಿಸುವ ಕೆಲವರು ಬಂದು 'ನಿಮ್ಮ ಭೂಮಿಯ ಮೇಲಿನ ಕೆಲಸ ಇನ್ನು ಮುಗಿದಿಲ್ಲ" ಎಂದು ಹೇಳಿ ಮರಳಿ ಕಳುಹಿಸುತ್ತಿದ್ದರು. ಆದರೆ, ನನಗಿನ್ನೂ ಎಷ್ಟು ದಿನ ಇದೆ ಈ ಭೂಮಿಯ ಮೇಲಿನ ಬದುಕು ಎಂಬ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ' ಎಂದಿದ್ದಾರೆ ಪಾಸ್ಟರ್ ನಾರ್ಮಾ ಎಡ್ವರ್ಡ್ಸ್.

ಪ್ರಸ್ತುತ ನಾರ್ಮಾ ಅವರು ವೃದ್ಧರಿಗೆ ಮತ್ತು ಸಾವಿನ ದವಡೆಯಲ್ಲಿರುವವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. 'ಸಾವಿನ ಬಗ್ಗೆ ಭಯಪಡುವ ಅಗತ್ಯವಿಲ್ಲ, ಅದು ಕೇವಲ ಒಂದು ಬದಲಾವಣೆಯಷ್ಟೇ' ಎಂಬುದು ಅವರ ಅನುಭವದಿಂದ ಬಂದ ಅಚಲವಾದ ನಂಬಿಕೆ. ನಾರ್ಮಾ ಅವರ ಈ ಮಾತುಗಳು ಪ್ಯಾರಾನಾರ್ಮಲ್ ಮತ್ತು ಅತೀಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವವರಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಒಟ್ಟಿನಲ್ಲಿ, ಸಾವಿನ ನಂತರ ಜೀವನವಿದೆ, ಜೀವನಕ್ಕೆ ಸಾವಿದೆ ಎಂಬುದಂತೂ ಸತ್ಯ ಎನ್ನಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಿಸಲು ಈ 7 ಆಹಾರ ತಪ್ಪದೇ ಸೇವಿಸಿ!
ಗಂಡು ಕಾಳಿಂಗ ಸರ್ಪ ಏಕಪತ್ನಿ ವ್ರತಸ್ಥನಾ? ಮಿಲನದ ನಂತರ ಸಂಗಾತಿಯನ್ನೇ ತಿನ್ನುತ್ತಾ?