ಬಟ್ಟೆಗಳ ಮೇಲಿನ ಪರ್ಫ್ಯೂಮ್ ಕಲೆಗಳನ್ನು ತೆಗೆಯೋದು ಹೇಗೆ? ಈ ರೀತಿ ಸ್ಪ್ರೇ ಮಾಡ್ಕೊಳ್ಳಿ

Published : Sep 13, 2026, 11:12 AM IST
Cleaning Hacks

ಸಾರಾಂಶ

Perfume Stain Removal: ಪರ್ಫ್ಯೂಮ್ ಬಳಕೆಯಿಂದ ಬಟ್ಟೆಗಳ ಮೇಲೆ ಉಂಟಾಗುವ ಕಲೆಗಳು ಸಾಮಾನ್ಯ. ಈ ಲೇಖನವು ಕಲೆಗಳನ್ನು ತಡೆಯುವ ಮತ್ತು ತೆಗೆದುಹಾಕುವ ಸರಳ ವಿಧಾನಗಳನ್ನು ವಿವರಿಸುತ್ತದೆ.

ಇಂದು ಬಹುತೇಕ ಜನರು ಪರ್ಫ್ಯೂಮ್ ಬಳಕೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ನಿಮಗೆ ಸಾವಿರಾರು ಕಂಪನಿಗಳ ಪರ್ಫ್ಯೂಮ್‌ಗಳು ಸಿಗುತ್ತವೆ. ಆದರೆ ಕೆಲವೊಮ್ಮೆ ಪರ್ಫ್ಯೂಮ್ ಮಾಡಿದ ನಂತರ ಇದರ ಕಲೆಗಳು ಬಟ್ಟೆಗಳ ಮೇಲೆ ಹಾಗೆ ಉಳಿಯುತ್ತವೆ. ಎಷ್ಟೇ ಉಜ್ಜಿ ವಾಶ್ ಮಾಡಿದರೂ ಕೆಲಗಳು ಮಾತ್ರ ಹಾಗೆಯೇ ಇರುತ್ತವೆ. ಆಲ್ಕೋಹಾಲ್, ಸಾರಭೂತ ತೈಲಗಳು, ಸಂಶ್ಲೇಷಿತ ಸುಗಂಧ ದ್ರವ್ಯಗಳೊಂದಿಗೆ ಪರ್ಫ್ಯೂಮ್ ರೆಡಿಯಾಗಿರುತ್ತದೆ. ಪರ್ಫ್ಯೂಮ್ ಬಳಕೆ ಸೇರಿದಂತೆ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಮುಂಜಾಗ್ರತ ಕ್ರಮ ತೆಗೆದುಕೊಂಡರೂ ಕೆಲವೊಮ್ಮೆ ಕಲೆಗಳು ಬಟ್ಟೆ ಮೇಲೆ ಉಳಿಯುತ್ತದೆ. ಈ ಕಲೆಗಳನ್ನು ತೆಗೆಯೋದು ಹೇಗೆ ಎಂದು ನೋಡೋಣ ಬನ್ನಿ.

1.ನೇರವಾಗಿ ದೇಹದ ಮೇಲೆ ಪರ್ಫ್ಯೂಮ್ ಸಿಂಪಡಿಸಿ

ನೇರವಾಗಿ ದೇಹದ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಬಹುದು. ಇದರಿಂದ ಬಟ್ಟೆ ಮೇಲೆ ನೇರವಾಗಿ ಪರ್ಫ್ಯೂಮ್ ಬೀಳೋದು ಕಡಿಮೆಯಾಗುತ್ತದೆ. ಕೆಲವರು ಪರ್ಫ್ಯೂಮ್ ಅಂದ ಕೂಡಲೇ ಅದನ್ನು ಇಡೀ ದೇಹಕ್ಕೆ ಹಾಕಿಕೊಳ್ಳುತ್ತಾರೆ. ಪರ್ಫ್ಯೂಮ್‌ನ್ನು ಸರಿಯಾಗಿ ಕತ್ತಿನ ಎರಡು ಬದಿ, ಕೈಗಳ ಮಣಿಕಟ್ಟು ಮತ್ತು ಕಿವಿಗಳ ಹಿಂಭಾಗದಲ್ಲಿ ಹಾಕಿಕೊಳ್ಳಬೇಕು. ಹೀಗೆ ಸ್ಪ್ರೇ ಮಾಡಿಕೊಂಡ ನಂತರ ಪರ್ಫ್ಯೂಮ್ ಒಣಗಲು 10 ರಿಂದ ಸೆಕೆಂಡ್ ಸಾಕು. ಪರ್ಫ್ಯೂಮ್ ಒಣಗಿದ ಬಳಿಕ ಶರ್ಟ್ ಧರಿಸಿದ್ರೆ ಕಲೆಗಳು ಉಂಟಾಗಲ್ಲ.

2.ಬಟ್ಟೆ ಮೇಲೆ ಸ್ಪ್ರೇ

ಇನ್ನು ಕೆಲವರು ದೇಹಕ್ಕೆ ನೇರವಾಗಿ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ಇವುಗಳಲ್ಲಿ ಬಳಕೆಯಾಗಿರುವ ರಾಸಾಯಾನಿಕ ದೇಹಕ್ಕೆ ತಾಗಿದ್ರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗುವ ಭಯವಿರುತ್ತದೆ. ಈ ಸಮಯದಲ್ಲಿ ಒಂದೇ ಕಡೆ ಅತಿಯಾಗಿ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಬೇಡಿ. ಒಂದೇ ಭಾಗದಲ್ಲಿ ಹೆಚ್ಚು ಸುಗಂಧ ದ್ರವ್ಯ ಬಿದ್ರೆ ಕಲೆಗಳಾಗಬಹುದು. ಆರೇಳು ಇಂಚಿನಷ್ಟು ದೂರಿನಿಂದ ಬಟ್ಟೆ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳೋದು ಉತ್ತಮ.

3.ಕ್ಲೀನಿಂಗ್

ಕೆಲವೊಮ್ಮೆ ಸುಗಂಧದ್ರವ್ಯ ಬಟ್ಟೆಯ ಮೇಲೆ ಹೆಚ್ಚು ಬಿದ್ರೆ, ಅದನ್ನು ಒಣಗಲು ಬಿಡಬೇಡಿ. ಕೂಡಲೇ ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಸುಗಂಧ್ರವ್ಯ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ. ಇದರಿಂದ ಸುಗಂಧದ್ರವ್ಯದಲ್ಲಿನ ಕೆಮಿಕಲ್ ಬಟ್ಟೆಗೆ ಅಂಟಿಕೊಳ್ಳೋದಿಲ್ಲ. ಈ ಸಮಯದಲ್ಲಿ ಕಲೆ ಮೇಲೆ ಹೆಚ್ಚು ಭಾರ ಹಾಕಿ ಉಜ್ಜಬೇಡಿ.

4.ಬೇಬಿ ಸೋಪ್

ಪರ್ಫ್ಯೂಮ್ ಕಲೆ ಒಣಗಿದ್ರೆ ಅದನ್ನು ಬೇಬಿ ಸೋಪ್ ಅಥವಾ ಶ್ಯಾಂಪೂ ಬಳಿಸಿ. ಕಲೆ ಮೇಲೆ ಸೋಪ್/ಶ್ಯಾಂಪೂವಿನಿಂದ ನಿಧಾನವಾಗಿ ಉಜ್ಜಿ ತಣ್ಣೀರಿನಲ್ಲಿ ತೊಳೆದ್ರೆ ಕಲೆಗಳು ಹೋಗುತ್ತವೆ. ಸೋಪ್ ಹಚ್ಚಿದ ಬಳಿಕ 10 ರಿಂದ 15 ನಿಮಿಷದ ಬಳಿಕವಷ್ಟೇ ನೀರಿನಿಂದ ತೊಳೆಯಬೇಕು.

5.ವಿನೇಗರ್

ಕೆಲವೊಮ್ಮೆ ಕಲೆಗಳು ಉಂಟಾಗಿರೋದು ತಕ್ಷಣವೇ ಗಮನಕ್ಕೆ ಬಂದಿರಲ್ಲ. ಕಲೆ ಬಿಸಿಲು-ಗಾಳಿಗೆ ಒಡ್ಡಿ ಸಂಪೂರ್ಣವಾಗಿ ಒಣಗಿದ್ರೆ ವಿನೇಗರ್ ಬಳಸಬಹುದು. ಕಲೆ ಮೇಲೆ ವಿನೇಗರ್ ಹಾಕಿ ಮೃದುವಾಗಿ ಉಜ್ಜಿ, 10 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದ್ರೆ ಕಲೆಗಳು ಹೋಗುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Baba Vanga Prediction: ವೃಷಭ ಮತ್ತು ಸಿಂಹ ಸೇರಿದಂತೆ ಈ 5 ರಾಶಿಗೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಲಾಟರಿ
Cotton Blouse: ಆಫೀಸ್ ಹಾಗೂ ದಿನಬಳಕೆಗೆ ಸೂಪರ್ ಆಗಿರೋ ಟ್ರೆಂಡಿ ಕಾಟನ್ ಬ್ಲೌಸ್ ಡಿಸೈನ್ಸ್!