
ನವದೆಹಲಿ (ಅ.6): ತನ್ನ ನೆಚ್ಚಿನ ಸೆಲೆಬ್ರಿಟಿ ಪ್ರತಿ ತಿಂಗಳೂ ತನ್ನ ಕೂದಲಿಗೆ ಬಣ್ಣ ಹಚ್ಚುತ್ತಿರುದನ್ನೇ ಪಾಲನೆ ಮಾಡುತ್ತಿದ್ದ ಚೀನಾದ 20 ವರ್ಷದ ಮಹಿಳೆಯೊಬ್ಬಳು ತಾನೂ ಕೂಡ ಪ್ರತಿ ತಿಂಗಳು ತನ್ನ ಕೂದಲಿಗೆ ವಿಭಿನ್ನ ಬಣ್ಣ ಹಚ್ಚುತ್ತಿದ್ದಳು. ಇದರಿಂದಾಗಿ ಆಕೆ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಹೆನಾನ್ ಟಿವಿ ವರದಿ ಮಾಡಿದೆ. ಹುವಾ ಎಂದು ಗುರುತಿಸಲ್ಪಟ್ಟ ಮಹಿಳೆಗೆ ಕಾಲುಗಳಲ್ಲಿ ಕೆಂಪು ಕಲೆಗಳು, ಕೀಲು ನೋವು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆ ಬಳಿಕ ಝೆಂಗ್‌ಝೌ ಪೀಪಲ್ಸ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಆಕೆಗೆ ಮೂತ್ರಪಿಂಡದ ಸಮಸ್ಯೆ ಇರುವುದು ಗೊತ್ತಾಗಿದೆ.
ಆಕೆಯ ವೈದ್ಯ ಡಾ. ಟಾವೊ ಚೆನ್ಯಾಂಗ್ ಅವರ ಪ್ರಕಾರ, ತಾನು ಫಾಲೋ ಮಾಡುತ್ತಿದ್ದ ಸೆಲೆಬ್ರಿಟಿ ತನ್ನ ಕೂದಲಿನ ಬಣ್ಣ ಬದಲಾಯಿಸಿದಾಗಲೆಲ್ಲಾ, ಹುವಾ ಕೂಡ ತನ್ನ ಕೂದಲಿನ ಬಣ್ಣ ಬದಲಾಯಿಸುತ್ತಿದ್ದಳು. ಪ್ರತಿ ತಿಂಗಳು ಕೂಡ ಆಕೆ ಈ ರೀತಿ ಮಾಡುತ್ತಿದ್ದರು. ಆದರೆ, ಆಕೆಯ ನೆಚ್ಚಿನ ಸೆಲೆಬ್ರಿಟಿ ಯಾರು ಅನ್ನೋದನ್ನ ತಿಳಿಸಲಾಗಿತ್ತು. ಆದರೆ, ಸೋಶಿಯಲ್ ಮೀಡಿಯಾ ಯೂಸರ್‌ಗಳು, ಇವರು ಕೆ-ಪಾಪ್ ಐಡಲ್‌ಗಳು ಆಗಿರಬಹುದು ಎನ್ನಲಾಗಿದೆ. ಪ್ರತಿ ಬಾರಿ ತಮ್ಮ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಈ ತಾರೆಯರು ತಮ್ಮ ಕೂದಲಿನ ಬಣ್ಣ ಬದಲಾಯಿಸುತ್ತಾರೆ.
ಕೂದಲಿಗೆ ಹಾಕುವ ಬಣ್ಣವು ಮೂತ್ರಪಿಂಡ ಮತ್ತು ಉಸಿರಾಟದ ವೈಫಲ್ಯಕ್ಕೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಟಾವೊ ಹೇಳಿದ್ದಾರೆ. ಅನೇಕ ಬಣ್ಣಗಳು ಸೀಸ ಮತ್ತು ಪಾದರಸವನ್ನು ಹೊಂದಿರುತ್ತವೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಅವರು ಹೇಳಿದರು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಉಲ್ಲೇಖಿಸಿದ ಆನ್‌ಲೈನ್ ಕಾಮೆಂಟ್‌ಗಳು, ಸೆಲೆಬ್ರಿಟಿ ಟ್ರೆಂಡ್‌ಗಳ ಮೇಲಿನ ಗೀಳನ್ನು ಟೀಕಿಸಿವೆ. "ನಮ್ಮ ಆರೋಗ್ಯವನ್ನು ಬೆಲೆ ತೆತ್ತು ಯಾವುದೇ ಸ್ಟಾರ್‌ಗಳನ್ನು ಫಾಲೋ ಮಾಡಲು ಯೋಗ್ಯವಾಗಿಲ್ಲ" ಎಂದು ಒಬ್ಬ ಯೂಸರ್ ಬರೆದಿದ್ದಾರೆ. ಮತ್ತೊಬ್ಬರು, "ಸ್ಟಾರ್‌ಅನ್ನು ಫಾಲೋ ಮಾಡಲು ಅವಳು ತನ್ನ ಕೂದಲಿಗೆ ಬಣ್ಣ ಹಾಕಿದ್ದರೆ, ಅದು ಬಹುಶಃ ಬ್ಲೀಚ್ ಮತ್ತು ಡೈ ಆಗಿರಬಹುದು, ಇದು ಅವಳ ಕೂದಲಿಗೆ ಬಣ್ಣ ಹಾಕುವುದಕ್ಕಿಂತ ಹೆಚ್ಚು ಹಾನಿಕಾರಕವಾಗಿದೆ" ಎಂದು ಬರೆದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಅಮೆರಿಕದ ಮಾಜಿ ಕೇಶ ವಿನ್ಯಾಸಕಿಯೊಬ್ಬರು ಸೌಂದರ್ಯ ದೈತ್ಯ ಲೋರಿಯಲ್ ಮತ್ತು ಇತರ 10 ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡಿದರು, ಕೂದಲಿನ ಬಣ್ಣಗಳಲ್ಲಿನ ಕ್ಯಾನ್ಸರ್ ಜನಕ ರಾಸಾಯನಿಕಗಳಿಗೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಅವರಿಗೆ ಮೂತ್ರಕೋಶದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿದ್ದರು.
ದಶಕಗಳ ಕಾಲ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದ ಹೆಕ್ಟರ್ ಕಾರ್ವೆರಾ ಅವರಿಗೆ 2023 ರಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಈ ವೇಳೆ ಅವರ ವೈದ್ಯರು ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದರು. ಜೀವನೋಪಾಯಕ್ಕಾಗಿ ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಕೇಶ ವಿನ್ಯಾಸಕಿ ಎಂದಿದ್ದೆ. ಅದಕ್ಕೆ ಆಕೆ, ನೀವು ಕೇಶ ವಿನ್ಯಾಸಕಿ ಆಗಿರುವುದನ್ನು ನಿಮಗೆ ಆಗಿರುವ ಸಮಸ್ಯೆಯೇ ತಿಳಿಸುತ್ತಿದೆ ಎಂದಿದ್ದರು.
ಲಾಸ್ ಏಂಜಲೀಸ್‌ನಲ್ಲಿ ವಕೀಲ ಅಲೆನ್ ಸ್ಮಿತ್ ಸಲ್ಲಿಸಿದ ಮೊಕದ್ದಮೆಯಲ್ಲಿ, ಕಾರ್ವೆರಾ ಕ್ಯಾನ್ಸರ್ "ಕೂದಲು ಬಣ್ಣ ಉತ್ಪನ್ನಗಳ ಅಸಮಂಜಸ ಅಪಾಯಕಾರಿ ಮತ್ತು ದೋಷಯುಕ್ತ ಸ್ವಭಾವದ ನೇರ ಮತ್ತು ಸಮೀಪದ ಪರಿಣಾಮ" ಎಂದು ಹೇಳಲಾಗಿದೆ. ಕಂಪನಿಗಳು ತಮ್ಮ ಉತ್ಪನ್ನಗಳ ಸಂಶೋಧನೆ, ಅಭಿವೃದ್ಧಿ ಮತ್ತು ಪ್ಯಾಕೇಜಿಂಗ್‌ನಲ್ಲಿ "ತಪ್ಪು ಮತ್ತು ನಿರ್ಲಕ್ಷ್ಯದ ನಡವಳಿಕೆ" ಹೊಂದಿವೆ ಎಂದು ಆರೋಪಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.