ರಾಶಿಗಳಿಗೆ ಅದೃಷ್ಟ ತರುವಂತಹ ರತ್ನಗಳು

By Web DeskFirst Published Sep 21, 2018, 4:46 PM IST
Highlights

ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೇ ಪ್ರಾಮುಖ್ಯತೆಯನ್ನು ರತ್ನಗಳಿಗೆ ನೀಡಲಾಗಿದೆ.

ರತ್ನಗಳಲ್ಲಿ ಮೂರು ಶ್ರೇಣಿಗಳಿವೆ.

  • ಪ್ರಾಣಿ ಜನ್ಯ ರತ್ನ
  • ವನಸ್ಪತಿ ರತ್ನ
  • ಖನಿಜ ಜನ್ಯರತ್ನ

ಸಾಮಾನ್ಯವಾಗಿ ಇವುಗಳು ಮಾನವ ಸಮೂಹದ ಮೇಲೆ ಬಹಳ ಉಪಯುಕ್ತ ಪರಿಣಾಮ ಬೀರುತ್ತದೆ. ರತ್ನಗಳ ಧಾರಣೆಯಿಂದ ನಮಗೆ ಶಾಂತಿ, ಆರೋಗ್ಯ, ಆಯುಷ್ಯ ಅಭಿವೃದಿಯನ್ನು ಖಂಡಿತವಾಗಿ ಪಡೆಯಬಹುದು, ಆದರೆ ಧರಿಸುವ ವಿಧಾನ ಅತಿ ಮುಖ್ಯ. ನಮ್ಮ ಜನ್ಮ ಲಗ್ನ ಹಾಗೂ ರಾಶಿಯನ್ನು ಸರಿಯಾಗಿ ತಿಳಿದು ಅದರಂತೆ ಧರಿಸಿದರೆ ಖಂಡಿತವಾಗಿಯೂ ಇದರ ಉಪಯೋಗವನ್ನು ಪಡೆಯಬಹುದು. ಇನ್ನೊಂದು ಮುಖ್ಯ ವಿಷಯವೇನೆಂದರೆ, ಯಾವ ರತ್ನವನ್ನು ಯಾವ ಬೆರಳಿಗೆ ಧರಿಸಬೇಕೆಂಬುದು ಸಹ ಮುಖ್ಯ,

ಅದೇ ರೀತಿ ಧಾತುಗಳು (ಲೋಹ) ಆ ರತ್ನಕ್ಕೆ ಸಂಬಂಧಿಸಿದ ಗ್ರಹಗಳ ಮಂತ್ರವನ್ನು ಪ್ರತಿದಿನ ಕನಿಷ್ಠ 9 ಬಾರಿಯಾದರೂ ಪಠಿಸುವುದರಿಂದ ಇನ್ನೂ ಹೆಚ್ಚಿನ ಫಲ ಪಡೆಯಬಹುದು.

ಮೇಷ ರಾಶಿಗೆ ಕುಜ ಅಧಿಪತಿಯಾಗಿದ್ದು, ಈ ರಾಶಿಯವರು ಹವಳ ಅಥವಾ ಪುಷ್ಯರಾಗ ಧರಿಸಬೇಕು. ತಾಮ್ರ ಅಥವಾ ಚಿನ್ನದಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಬೇಕು.

ವೃಷಭ ರಾಶಿಗೆ ಅಧಿಪತಿ ಶುಕ್ರ. ಇವರು ವಜ್ರ ನೀಲವನ್ನು ಚಿನ್ನ, ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಮಧ್ಯ ಅಥವಾ ಕಿರುಬೆರಳಿಗೆ ಧರಿಸಿಕೊಳ್ಳಬೇಕು.

ಮಿಥುನ ರಾಶಿಗೆ ಅಧಿಪತಿ ಬುಧ. ಇವರು ಪಚ್ಛೆ (ತಿಳಿಹಳದಿ) ನೀಲವನ್ನು ಕಂಚು, ಬಂಗಾರ ಅಥವಾ ಬೆಳ್ಳಿಯಲ್ಲಿ ಕಿರು ಬೆರಳಿಗೆ ಧರಿಸಬೇಕು.

ಕಟಕ ರಾಶಿಗೆ ಅಧಿಪತಿ ಚಂದ್ರ. ಇವರು ಮುತ್ತು ಅಥವಾ ಪುಷ್ಯರಾಗವನ್ನು ಬೆಳ್ಳಿ, ಚಿನ್ನದಲ್ಲಿ ತೋರು ಅವಾ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.

ಸಿಂಹ ರಾಶಿಗೆ ಅಧಿಪತಿ ರವಿ. ಇವರು ಮಾಣಿಕ್ಯ, ಹವಳ ಅಥವಾ ಪುಷ್ಪರಾಗವನ್ನು ತಾಮ್ರ, ಬೆಳ್ಳಿ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.

ಕನ್ಯಾ ರಾಶಿಗೆ ಅಧಿಪತಿ ಬುಧ. ಇವರು ಪಚ್ಚೆ, ವಜ್ರ ಅಥವಾ ಬಂಗಾರವನ್ನು ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಕಿರುಬೆರಳಿಗೆ ಧರಿಸಿಕೊಳ್ಳಬೇಕು.

ತುಲಾ ರಾಶಿಗೆ ಅಧಿಪತಿ ಶುಕ್ರ. ಇವರು ವಜ್ರ ಪಚ್ಚೆಯನ್ನು ಬಂಗಾರ, ಕಂಚು ಅಥವಾ ಬೆಳ್ಳಿಯಲ್ಲಿ ಮಧ್ಯ ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು. ವೃಶ್ಚಿಕ ರಾಶಿಗೆ ಅಧಿಪತಿ ಕುಜ. ಇವರು ಹವಳ ಅಥವಾ ಮಾಣಿಕ್ಯವನ್ನು ತಾಮ್ರ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಬೇಕು.

ಧನು ರಾಶಿಗೆ ಅಧಿಪತಿ ಗುರು. ಪುಷ್ಯರಾಗ, ಮಾಣಿಕ್ಯ ಅಥವಾ ಹವಳವನ್ನು ಇವರು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂನಲ್ಲಿ ತೋರುಬೆರಳಿಗೆ ಧರಿಸಿಕೊಳ್ಳಬೇಕು.

ಮಕರ ರಾಶಿಗೆ ಅಧಿಪತಿ ಶನಿ. ಇವರು ನೀಲ ಅಥವಾ ಪಚ್ಚೆಯನ್ನು ಬೆಳ್ಳಿಯಲ್ಲಿ ಮಧ್ಯದ ಬೆರಳಿಗೆ ಧರಿಸಬೇಕು.

ಕುಂಭ ರಾಶಿಗೆ ಶನಿ ಅಧಪತಿ. ನೀಲ, ವಜ್ರ ಅಥವಾ ಪಚ್ಚೆಯನ್ನು ಬೆಳ್ಳಿ, ಕಬ್ಬಿಣ ಅಥವಾ ಬಂಗಾರದಲ್ಲಿ ಮಧ್ಯದ ಬೆರಳಿಗೆ ಧರಿಸಿಕೊಳ್ಳಬೇಕು.

ಮೀನ ರಾಶಿಯವರಿಗೆ ಅಧಿಪತಿ ಗುರು. ಪುಷ್ಯರಾಗ, ಹವಳ ಅಥವಾ ಮಾಣಿಕ್ಯವನ್ನು ಬಂಗಾರ ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ತೋರು ಬೆರಳು ಧರಿಸಿಕೊಳ್ಳಬೇಕು.

click me!
Last Updated Sep 21, 2018, 4:46 PM IST
click me!