ಸಿಗರೇಟ್ ಸೇದೋದು ಬಿಡ್ಬೇಕಾ? ಟ್ರೈ ಮಾಡಿ ಈ ಮದ್ದನ್ನು...

By Web DeskFirst Published Dec 2, 2018, 3:48 PM IST
Highlights

ಸುಲಭವಾಗಿ ಅಂಟಿಕೊಳ್ಳುವ ಧೂಮಪಾನವನ್ನು ಬಿಡುವುದು ಮಾತ್ರ ಕಷ್ಟ. ಆದರೆ, ಮನಸ್ಸಿದ್ದರೆ ಮಾರ್ಗವೆಂಬಂತೆ ಕೆಲವು ಪ್ರಯತ್ನಗಳಿಂದ ಎಂಥದ್ದೇ ಚಟವನ್ನು ಬೇಕಾದರೂ ದೂರ ಮಾಡಬಹುದು. ಅಷ್ಟೇ ಅಲ್ಲ ಇದಕ್ಕೆ ಮನೆ ಮದ್ದೂ ಇದೆ. ಏನವು?
 

ಅಬ್ಬಾ ಧೂಮಪಾನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಅಷ್ಟಿಷ್ಟಲ್ಲ. ಹೃದ್ರೋಗ, ಶ್ವಾಸಕೋಶದ ಮೇಲೆ ಅಪಾರ ಹಾನಿಯನ್ನುಂಟು ಮಾಡುವ ಈ ಚಟ ಕ್ಯಾನ್ಸರ್‌ನಂಥ ಮಾರಕ ರೋಗಕ್ಕೂ ಕಾರಣವಾಗಬಲ್ಲದು. ಆದರೆ, ಅಂಟಿಸಿಕೊಂಡ ಚಟವನ್ನು ಬಿಡುವುದು ಅಷ್ಟು ಸುಲಭವಲ್ಲ. ಆದರೆ, ಮನೆಯಲ್ಲಿಯೇ ಸಿಗೋ ಈ ಆಹಾರ ವಸ್ತುಗಳನ್ನು ಸೇವಿಸಿ, ಟ್ರೈ ಮಾಡಿ ನೋಡಿ. 

ಆತಂಕ, ಒತ್ತಡ ಹೆಚ್ಚಿದಾಗಲೆಲ್ಲ ತಂಬಾಕು ಸೇವಿಸಬೇಕು ಎನಿಸುತ್ತದೆ. ಈ ಸೇವನೆಯಿಂದಲೇ ಇನ್ನೊಂದು ರೀತಿಯ ಸಮಸ್ಯೆ ಕಾಡಲು ಆರಂಭವಾಗುತ್ತದೆ. ಹಾಗಾಗಿ ಮನೆಯಲ್ಲಿ ಸಿಗೋ ಕೆಲವು ಪದಾರ್ಥಗಳ ಬಳಕೆಯಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಇಲ್ಲವೇ ಸಿಗರೇಟ್, ಬೀಡಿಯಲ್ಲಿರುವ ನಿಕೋಟಿನ್ ಅಂಶದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿ, ಹೊಗೆ ಎಳೆಯಬೇಕೆಂಬ ಬಯಕೆಯನ್ನೇ ಕಡಿಮೆ ಮಾಡಬಲ್ಲದು. ಮನಸ್ಸು ಮಾಡಿದರೆ ಯಾವುದು ಸಾಧ್ಯವಿಲ್ಲ ಹೇಳಿ?

ನೀರು
ದಿನಕ್ಕೆ 8-10 ಗ್ಲಾಸ್ ನೀರು ಕುಡಿದರೆ ಆರೋಗ್ಯವಾಗಿರಬಹುದಾಗಿದ್ದು, ದೇಹದ ಇಮ್ಯೂನಿಟಿ ಹೆಚ್ಚಾಗುತ್ತದೆ. ಧೂಮಪಾನ ಮಾಡಲು ಮನಸ್ಸು ರಚ್ಚೆ ಹಿಡಿದಾಗ 1-2 ಗ್ಲಾಸ್ ನೀರು ಕುಡಿದು ಬಿಡಿ. ಸಿಗರೇಟ್ ಸೇದುವ ಕ್ರೇವಿಂಗ್ ತಾನಾಗಿಯೇ ಕಡಿಮೆಯಾಗುತ್ತದೆ.

ವಲೇರಿಯನ್ ರೂಟ್ 
ಈ ಬೇರು ನಿಕೋಟಿನ್ ಅಂಶದ ಮೇಲೆ ಪ್ರಭಾವ ಬೀರಬಲ್ಲದು. ಯಾವುದೇ ತೊಂದರೆ ಇಲ್ಲದೆ, ಕಾಫಿ, ಟೀಯೊಂದಿಗೂ ಈ ಬೇರನ್ನು ಬೆರೆಸಿ, ಸೇವಿಸಬಹುದು. ಇದರಿಂದ ಆತಂಕ, ಒತ್ತಡ ಕಡಿಮೆಯಾಗಿ, ಸಿಗರೇಟ್ ಸೇದಬೇಕೆಂಬ ಚಪಲವೂ ಕಡಿಮೆಯಾಗುತ್ತದೆ. 

ಮೂಲಂಗಿ 
ಮೂಲಂಗಿ ರಸ ಮತ್ತು ಜೇನು ತುಪ್ಪ ಬೆರೆಸಿ ಆಗಾಗ ಕುಡಿಯುತ್ತಿರಿ.

ಓಟ್ಸ್
ದೇಹದಲ್ಲಿರುವ ಕೆಟ್ಟ ಅಂಶವನ್ನು ದೂರ ಮಾಡಲು ಓಟ್ಸ್ ಸೇವಿಸುತ್ತಾರೆ. 1 ಚಮಚ ಓಟ್ 2 ಕಪ್ ನೀರಿನಲ್ಲಿ ಕುದಿಸಿ ಕುಡಿದರೆ ಧೂಮಪಾನದಿಂದ ದೂರ ಆಗಲು ಸಾಧ್ಯ.

ಜೇನು ತುಪ್ಪ
ತಂಬಾಕು ಸೇವಿಸಬೇಕೆಂದೆನಿಸಿದಾಗ, ಒಂದು ಚಮಚ ಜೇನು ತುಪ್ಪ ಸೇವಿಸಿದರೆ ಒಳ್ಳೆಯದು. 

click me!