
ಮೇಷ
ಉದ್ಯೋಗದ ಹಲವು ದಾರಿಗಳು ನಿಮ್ಮ
ಮುಂದಿವೆ. ಯೋಚಿಸಿ ಕ್ರಮ ಕೈಗೊಳ್ಳಿರಿ.
ಪ್ರತಿಭೆ ಬೆಳೆಸಿಕೊಳ್ಳುವತ್ತ ಕೂಡ ಗಮನಹರಿಸಿ.
ವೃಷಭ
ಬಂಧುಗಳ ಸಹಕಾರದಿಂದ ಹೊಸ ವ್ಯಾಪಾರ
ವನ್ನು ಆರಂಭಿಸಲಿದ್ದೀರಿ. ಕೌಟುಂಬಿಕವಾಗಿ
ನೆಮ್ಮದಿಯ ವಾತಾವರಣ ಏರ್ಪಡಲಿದೆ.
ಮಿಥುನ
ಆಡಳಿತಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಇಂದು
ಉತ್ತಮ ಫಲ ಸಿಗಲಿದೆ. ಕೃಷಿ ಉತ್ಪನ್ನಗಳಿಂದ
ಹೆಚ್ಚಿನ ಆದಾಯವು ಪ್ರಾಪ್ತವಾಗಲಿದೆ.
ಕಟಕ
ಹಾಡುಗಾರಿಕೆಯನ್ನು ಮುಂದುವರಿಸಿ. ಈ
ನಿಮ್ಮ ಪ್ರತಿಭೆಗೆ ಸರಿಯಾದ ಬೆಲೆ ಸಿಗಲಿದೆ.
ಇಂದು ಅದಕ್ಕೆ ಉತ್ತಮ ವೇದಿಕೆ ಸಿಗಲಿದೆ.
ಸಿಂಹ
ಚಾಲಕರಿಗೆ ನಿರಂತರ ಪ್ರಯಾಣ, ದಣಿವು.
ಕಷ್ಟದ ದಿನಗಳಲ್ಲಿ ನಿಮ್ಮ ಸಹಾಯಕ್ಕೆ ಹಳೆಯ
ಗೆಳೆಯರು ಬಂದು ಸಹಾಯ ಮಾಡಲಿದ್ದಾರೆ.
ಕನ್ಯಾ
ಮರೆಗುಳಿತನವು ಈ ದಿನ ಭಾರಿ ಹೊಡೆತ
ಕೊಡಲಿದೆ. ನಿಮ್ಮದಲ್ಲದ ತಪ್ಪಿಗೂ ಬೆಲೆಯನ್ನು
ತೆರಬೇಕಾದ ಪರಿಸ್ಥಿತಿ ಬರಲಿದೆ. ಜೋಪಾನ.
ತುಲಾ
ಹೊಸ ಯೋಜನೆಗಳನ್ನು ರೂಪಿಸಲು ಹಾಗೂ
ಸಾಕಾರಗೊಳಿಸಲು ಇದು ಸಕಾಲವಾಗಿದೆ.
ತುಲಾ ಉದ್ಯೋಗಾಕಾಕ್ಷಿಗಳಿಗೆ ಸಂತಸದ ದಿನವಾಗಿದೆ.
ವೃಶ್ಚಿಕ
ನಿಮ್ಮ ಮನಸ್ಸು ಚಂಚಲ ಚಿತ್ತವಾಗಿದೆ. ಹೊಸ
ವಿಚಾರಗಳನ್ನು ಮಾಡದೇ ಸುಮ್ಮನೆ ಕೂರು
ವಂತಾಗಿದೆ. ಧ್ಯಾನವನ್ನು ಮಾಡಿದರೆ ಒಳಿತು. ಧನುಸ್ಸು
ಧನಸ್ಸು
ದ್ವಿಚಕ್ರ ವಾಹನ ಮಾರಾಟದಿಂದ ಅಧಿಕ ಲಾಭ
ವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯಿದೆ.
ಆರೋಗ್ಯದತ್ತ ಗಮನಹರಿಸುವುದೂ ಸೂಕ್ತ.
ಮಕರ
ಬಣ್ಣದ ಬಗ್ಗೆ ಆಸಕ್ತಿ ಜಾಸ್ತಿಯಿರುವ ನೀವು
ಯಾವ್ಯಾವ ದಿನ ಯಾವ ಬಣ್ಣದ ಧಿರಿಸು
ಧರಿಸಿದರೆ ಒಳಿತೆಂದು ಯೋಚಿಸದಿರಿ.
ಕುಂಭ
ಅತ್ತೆ-ಸೊಸೆಯ ಇಬ್ಬರ ನಡುವೆ ಜಗಳವೇ
ಇಲ್ಲ. ಮನೆಯ ವಾತಾವರಣದಲ್ಲಿ ನೆಮ್ಮದಿ
ಸಿಗಲಿದೆ. ಒಂದೇ ಚಾನೆಲ್ ಅನ್ನು ನೋಡಿರಿ.
ಮೀನ
ಖರ್ಚಿನ ಮೇಲೆ ಹಿಡಿತವಿರಲಿ. ರೈತರಿಗೆ
ಒಳ್ಳೆಯ ಸಮಯ. ದೂರದಲ್ಲಿರುವ ಮಕ್ಕಳು
ಹತ್ತಿರವಾಗುತ್ತಾರೆ. ಮೊಮ್ಮಕ್ಕಳಿಂದ ಸಂತಸ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.