ರೋಜ್ ರೋಸ್ ವಾಟರ್ ಹಚ್ಚಿದ್ರೆ ಹೆಚ್ಚುತ್ತೆ ಸೌಂದರ್ಯ

By Web Desk  |  First Published Sep 14, 2018, 4:47 PM IST

ಕ್ಲೆನ್ಸಿಂಗ್ ಮಿಲ್ಕ್‌ನಂತೆ ರೋಸ್ ವಾಟರ್ ಕಾರ್ಯ ನಿರ್ವಹಿಸುತ್ತದೆ. ಕಡಿಮೆ ಬೆಲೆಯಲ್ಲಿ ಸಿಗೋ ಇದು, ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು. ಏನಿದರ ಉಪಯೋಗ?


ಗುಲಾಬಿ ದಳ ಬಳಸಿ ಮಾಡುವ ರೋಸ್ ವಾಟರ್‌ನಿಂದ ತ್ವಚೆ ಸೌಂದರ್ಯ ಹೆಚ್ಚುತ್ತದೆ. ತುರಿಕೆ, ಗುಳ್ಳೆಯಂಥ ತ್ವಚೆಯ ಸಮಸ್ಯೆಗಳಿಗೂ ರಾಮಬಾಣವಾಗಬಲ್ಲದು. ಇದು ಏಕೆ ಒಳ್ಳೆಯದು?

  • ತ್ವಚೆ ಟೋನರ್: ಟೋನರ್ ರೀತಿಯಲ್ಲಿ ಬಳಸುವುದರಿಂದ ಮುಖದ ತೈಲಾಂಶ ಸುಸ್ಥಿಗೆ ತಂದು, ಧೂಳನ್ನು ದೂರ ಮಾಡುತ್ತದೆ. 
  • ತೇವಾಂಶ ಕಾಪಾಡುತ್ತದೆ: ಒಣ ಚರ್ಮ ಹೊಂದಿದ್ದರೆ, ಹತ್ತಿಯಲ್ಲಿ ರೋಸ್ ವಾಟರ್ ಅದ್ದಿ, ಮುಖಕ್ಕೆ ಸಂಪೂರ್ಣವಾಗಿ ಹಚ್ಚಬೇಕು ಇದರಿಂದ ಮುಖ ಫ್ರೆಷ್ ಎನಿಸುತ್ತದೆ. ಅಲ್ಲದೇ ರಿಲ್ಯಾಕ್ಸ್ ಆಗುತ್ತದೆ. 
  • ಮೇಕಪ್ ತೆಗೆಯಲು: ಕೊಬ್ಬರಿ ಎಣ್ಣಿಗೆ 2 ರಿಂದ 3 ಹನಿ ಸೇರಿಸಿದರೆ, ಸುಲಭ ರೀತಿಯಲ್ಲಿ ಮುಖದ ಮೇಕಪ್ ತೆಗೆಯಬಹುದು.
  • ಊದಿಕೊಂಡ ಕಣ್ಣಿಗೆ: ಸ್ವಲ್ಪ ರೋಸ್ ವಾಟರ್ ಅನ್ನು ಫ್ರಿಡ್ಜ್‌ನಲ್ಲಿದ್ದು, ಕೆಲವು ಸಮಯದ ನಂತರ ಊದಿರುವ ಕಣ್ಣಿನ ಮೇಲಿಟ್ಟರೆ, ಊತ ಕಡಿಮೆಯಾಗುತ್ತದೆ. 
  • ಮೊಡವೆಗೆ ಮದ್ದು: ರೋಸ್ ವಾಟರ್ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಮೊಡವೆ ಇರುವ ಜಾಗಕ್ಕೆ ಹಚ್ಚಿ ಅದನ್ನು 20 ನಿಮಿಷದ ನಂತರ ತೊಳೆಯಬೇಕು. ಇದು ಮುಖದ ಕಾಂತಿ ಹೆಚ್ಚಿಸುತ್ತದೆ. 
click me!