ಕಲಿಯುಗದಲ್ಲೂ ಅವತರಿಸಿ ಬಂದ ವಿನಾಯಕ

By Kannadaprabha NewsFirst Published Sep 13, 2018, 9:41 AM IST
Highlights

ದ್ವೈಮಾತೃರಾಯ ನಮಃ ಎಂದು ಅರ್ಥಾತ್ ಗಣಪತಿಗೆ ಇಬ್ಬರು ತಾಯಂದಿರು ಎಂದು ಸೂಚಿಸುತ್ತದೆ, ತಕ್ಷಣಕ್ಕೆ ಇದರ ಅರ್ಥದ ಹಿಂದೆ ಹೋದರೆ ಗಣಪತಿಗೆ ಶಿವನ ಪತ್ನಿ ಪಾರ್ವತಿ ಒಬ್ಬ ತಾಯಿಯಾದರೆ ಮತ್ತೊಬ್ಬ ಮಾತೃ ಸ್ವರೂಪಿಯಾಗಿ ಗಂಗೆ ಕಂಡು ಬರುತ್ತಾಳೆ. 

ಪಾರ್ವತಿ ಶರೀರದಿಂದ ತೆಗೆದ ಬೆವರು ಮಿಶ್ರಿತ ಕೊಳೆಯಿಂದ ಹುಟ್ಟಿದವನು ಗಣಪ. ಗೌರಿ ಗಣೇಶ ಪರಿಶುದ್ಧವಾದ ವಾತ್ಸಲ್ಯ ಬಾಂಧವ್ಯ ತಾಯಿ ಮಗನ ಕಲ್ಪನೆ ಸಂಬಂಧ ಸೂಚಿಸಿ ಹೇಳುವುದಾದರೆ ಪಾರ್ವತಿ ಗಣಪತಿ ಹೊರತು ಪಡಿಸಿದರೆ ಇನ್ಯಾವ ಸೂಕ್ತ ಉದಾಹರಣೆಯೂ ಸಿಗುವುದಿಲ್ಲ.

ಗಣಪತಿ ವಿಘ್ನೇಶ್ವರನಾದ
ಗಣಪತಿಯಲ್ಲಿ ೨ ವಿಶೇಷವಾದ ಶಕ್ತಿಗಳಿವೆ, ಜೀವನದಲ್ಲಿ ನಾವು ಎದುರಿಸಬಹುದಾದಂತ ಸಮಸ್ಯೆಗಳನ್ನು ವಿಘ್ನ ರೂಪದಲ್ಲಿ ನೀಡುವ ನಕರಾತ್ಮಕ ಶಕ್ತಿ, ಇನ್ನೊಂದು ರೀತಿಯಲ್ಲಿ ಬರಬಹುದಾದ ವಿಘ್ನಗಳನ್ನು ಈತನೇ ಸಕರಾತ್ಮವಾಗಿ ನಿವಾರಣೆ ಮಾಡುವಂತಹ ದ್ವಿಗುಣ ಶಕ್ತಿ. ಗಣಪತಿಗೆ ಹೇಳುವಂತೆ ಸ್ತುತಿ ಹರ್ಷಿ ತಾಯ ನಮಃ ಎಂಬಂತೆ ಸರ್ವ ಪ್ರಥಮವಾಗಿ ಗಣಪತಿಯನ್ನು ಸ್ತುತಿಸಿ ಆತನ ಮಹಿಮೆಗಳನ್ನು ಹೊಗಳಿದರೆ ಗಣಪ ಹರ್ಷಿತನಾಗಿ ನಮಗೆ ಬರುವ ವಿಘ್ನಗಳನ್ನೆಲ್ಲಾ ನಿವಾರಣೆ ಮಾಡಿ ವಿಘ್ನೇಶ್ವರನಾಗಿ ನಮ್ಮನ್ನು ಸಲಹುತ್ತಾನೆ.
ಓಂಕಾರ ಸ್ವರೂಪಿಯ ಹಿಂದಿನ ಜನ್ಮ
ಇದು ಗಣಪತಿಯ ಆಸಕ್ತಿಕರ ಮತ್ತು ಕುತೂಹಲ ವಿಷಯ, ಗಣಪತಿಯ ಅಷ್ಟೋತ್ತರದಲ್ಲಿ ದ್ವೈಮಾತೃರಾಯ ನಮಃ ಎಂದು ಅರ್ಥಾತ್ ಗಣಪತಿಗೆ ಇಬ್ಬರು ತಾಯಂದಿರು ಎಂದು ಸೂಚಿಸುತ್ತದೆ, ತಕ್ಷಣಕ್ಕೆ ಇದರ ಅರ್ಥದ ಹಿಂದೆ ಹೋದರೆ ಗಣಪತಿಗೆ ಶಿವನ ಪತ್ನಿ ಪಾರ್ವತಿ ಒಬ್ಬ ತಾಯಿಯಾದರೆ ಮತ್ತೊಬ್ಬ ತಾಯಿ ಗಂಗೆ. ವರೇಣ್ಯ ಎಂಬ ರಾಜನಿಗೆ ಪುಷ್ಪಕಮಾಲಾ ಎಂಬ ಪತ್ನಿ ಇರುತ್ತಾಳೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಹುಟ್ಟದ ಮಗು ಅರ್ಧ ಮನುಷ್ಯ ರೂಪಿಯಂತಹ ಕೈ ಕಾಲುಗಳನ್ನು ಹೊಂದಿ ಆನೆ ಮುಖವನ್ನು ಪಡೆದಿರುತ್ತದೆ. ಮಗುವಿನ ಈ ವಿರೂಪವನ್ನು ಕಂಡ ರಾಣಿ ಪುಷ್ಪಕಮಾಲ ಮಗುವನ್ನು ತ್ಯಜಿಸುವ ಕೆಟ್ಟ ನಿರ್ಧಾರಕ್ಕೆ ಬಂದು ಮಗುವನ್ನು ಸರೋವರ ವೊಂದರಲ್ಲಿ ತೇಲಿ ಬಿಡುತ್ತಾಳೆ. ಸರೋವರದಲ್ಲಿ ತೇಲಿ ಹೋಗುತ್ತಿದ್ದ ಮಗುವಿನ ಕೂಗು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪಾರ್ಶ್ವ ನೆಂಬ ಋಷಿಗೆ ಕೇಳಿಸುತ್ತದೆ. ಕೂಗು ಕೇಳಿ ಬರುತ್ತಿದ್ದ ದಿಕ್ಕಿನೆಡೆಗೆ ಹೋಗಿ ಮಗುವನ್ನು ರಕ್ಷಿಸಿ ತನ್ನ ಆಶ್ರಮಕ್ಕೆ ಕೊಂಡೊಯ್ಯುತ್ತಾನೆ. ಆಶ್ರಮದಲ್ಲಿ ತನ್ನ ಪತ್ನಿ ದೀಪ ವತ್ಸಲೆಗೆ ನಡೆದ ಘಟನೆ ಬಗ್ಗೆ ತಿಳಿಸಿ ಮಗುವನ್ನು ಸಾಕಲು ತಿಳಿಸುತ್ತಾನೆ. ಪತಿಗೆ ಸಿಕ್ಕ ಮಗುವನ್ನು ದೀಪ ವತ್ಸಲೆ ಅತ್ಯಂತ ಮಮತೆ ವಾತ್ಸಲ್ಯದಿಂದ ಬೆಳೆಸುತ್ತಾಳೆ. ಮುಂದೆ ಪಾರ್ವತಿಗೆ ಮಗನಾಗಿ ಅದೇ ರೂಪದಲ್ಲಿ ಗಣಪತಿಯ ಜನ್ಮ ವಾಗುತ್ತದೆ. ಹೀಗೆ ಗಣಪತಿಯ ಮೊದಲ ತಾಯಿಯಾಗಿ ದೀಪವತ್ಸಲೆ ಹಾಗು ಎರಡನೆ ತಾಯಿಯಾಗಿ ಪಾರ್ವತಿ ಎಂದು ಹೇಳಲಾಗುತ್ತದೆ. 
 

click me!