
ಮದುವೆಯಾಗಿ ಏಳು ತಿಂಗಳು ಕಳೆಯಿತು. ನಾನು ಮೊದಲಿನಿಂದಲೂ ತುಂಬಾ ಸ್ವತಂತ್ರವಾಗಿ ಬೆಳೆದವಳು. ಈಗ ಅತ್ತೆಯ ಮಡಿವಂತಿಕೆಯನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ. ಈವಾಗ ಆಷಾಢ ಮಾಸದ ಕಾರಣ ಅಮ್ಮನ ಮನೆಗೆ ಬಂದಿದ್ದೇನೆ.
ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದೇನೆ. ಆದರೆ ಮತ್ತೆ ಗಂಡನ ಮನೆಗೆ ಹೋಗಿ ಅತ್ತೆಯ ಉಪಟಳಗಳನ್ನು ಸಹಿಸಿಕೊಳ್ಳಬೇಕು ಎನ್ನುವುದನ್ನು ನೆನಪಿಸಿಕೊಂಡರೆ ಅಳು ಬರುತ್ತೆ. ಗಂಡನಿಗೆ ಇದನ್ನು ಹೇಳಿದರೆ ಎಲ್ಲವನ್ನೂ ಸಹಿಸಿಕೋ ಎನ್ನುತ್ತಾರೆ. ಯಾರಿಗೇ ಹೇಳಿದರೂ ಹೀಗೇ ಉತ್ತರ ಕೊಡುತ್ತಾರೆ. ನನಗೆ ಸಮಾಧಾನಕ್ಕಿಂತ ಸಮಸ್ಯೆಗೆ ಪರಿಹಾರ ಬೇಕು. ಏನಾದರೂ ಪರಿಹಾರ ಹೇಳಿ.
- ಸುಗುಣ(ಹೆಸರು ಬದಲಿಸಲಾಗಿದೆ) ಉಡುಪಿ
ನಿಮ್ಮ ಸಲಹೆ ಸೂಚನೆಗಳನ್ನು suvarnanewsindia@gmail.comಗೆ ಕಳುಹಿಸಿ....