ಕಲ್ಲೊಟ್ಟು ಗ್ರಾಮದ ಕೃಷಿಕರೊಬ್ಬರ ಸಾಧನೆ

By Kannadaprabha NewsFirst Published Jul 31, 2018, 3:31 PM IST
Highlights

ಶಿರ್ವದ ಸಮೀಪದ ಕಲ್ಲೊಟ್ಟು ಎಂಬ ಕುಗ್ರಾಮದಲ್ಲಿ ರಾಘವೇಂದ್ರ ನಾಯಕ್ ಅವರ 3 ಎಕ್ರೆ ಕೃಷಿ ಭೂಮಿ ಇದೆ.

ಭತ್ತ ಕೃಷಿಯಲ್ಲಿ ಸಾಧನೆ:

ಫಲವತ್ತಾದ ಭೂಮಿಯಲ್ಲಿ ಭತ್ತ, ತರಕಾರಿ, ಮಲ್ಲಿಗೆ, ತೆಂಗು, ಬಾಳೆ ಗಿಡಗಳು ಹುಲುಸಾಗಿ ಬೆಳೆದಿದ್ದು, ಉತ್ತಮ ಇಳುವರಿ ಪಡೆದ ತೃಪ್ತಿ ಈ ರೈತರ ಮುಖದಲ್ಲಿದೆ. ಕಳೆದ ವರ್ಷ ನಾಯಕ್ ಅವರು ಭದ್ರಾ ತಳಿ (ಎಂ.ಓ ೪) ಭತ್ತ ಕೃಷಿ ಮಾಡಿದ್ದರು. ಒಂದೆಕರೆಯಲ್ಲಿ ೩ ಕ್ವಿಂಟಾಲ್ ಇಳುವರಿ ಪಡೆದು ಜಿಲ್ಲೆಯಲ್ಲಿಯೇ ಪ್ರಥಮ ಬಹುಮಾನ ಪುರಸ್ಕೃತರಾಗಿದ್ದರು.ಈ ತಳಿ ರೋಗ ನಿರೋಧಕವಾಗಿದ್ದು, ಬಂಪರ್ ಇಳುವರಿ ಪಡೆಯಬಹುದಾಗಿದೆ.

ಗುಳ್ಳ ಬದನೆ ಹೀಗೆ ಬೆಳೀತಾರೆ!:

ಇವರ ಕೃಷಿಯಲ್ಲಿ ಎರಡನೆಯ ಬೆಳೆಯಾಗಿ ಗುಳ್ಳ ಬದನೆಯಿದೆ. ಎಕರೆಗೆ ೨೦೦ಕೆ.ಜಿ. ಸುಣ್ಣ ಹಾಕಿ ಉಳುಮೆ ಮಾಡುತ್ತಾರೆ/ ನಾಲ್ಕು ಅಡಿ ಅಂತರವಿರಿಸಿ ಏರಿ ಅಥವಾ ದಿಣ್ಣೆ ಮಾಡುತ್ತಾರೆ. ಗಿಡದಿಂದ ಗಿಡಕ್ಕೆ ೩ ಅಡಿ ಅಂತರದಲ್ಲಿ ನಾಟಿ ಮಾಡುತ್ತಾರೆ. ಮೊದಲಿಗೆ ಕಹಿ ಬೇವಿನ ಹಿಂಡಿ, ಸುಡುಮಣ್ಣು, ಕಾಂಪೊಸ್ಟ್ ಗೊಬ್ಬರ ಒದಗಿಸುತ್ತಾರೆ. ನಾಟಿ ಮಾಡಿದ ೧೫ ದಿವಸದ ಪೂರೈಕೆಯ ನಂತರ ಕಹಿ ಬೇವಿನ ಎಣ್ಣೆಯನ್ನು ಸಿಂಪಡಿಸುತ್ತಾರೆ.

ಬಸಳೆಯಲ್ಲಿ ಹೊಸ ಪ್ರಯೋಗ:

ಮಳೆಗಾಲದಲ್ಲೂ ೪ ಅಡಿ ಎತ್ತರದ ಚಪ್ಪರ ಮಾಡಿ ನೆಟ್ಟ ಬಸಳೆಯನ್ನು ಚಪ್ಪರಕ್ಕೆ ಹಾಯ ಬಿಟ್ಟಿದ್ದಾರೆ. ಗದ್ದೆಯ ಸುತ್ತಾ ಕೆಂಪುಗೆಣಸು ಬೆಳೆಯಿಸಿದ್ದಾರೆ. ಮೇನಲ್ಲಿ ಹಾಲು ಬೆಂಡೆ, ಸೌತೆ ಬೃಹತ್ತಾಗಿ ಬೆಳೆಯಿಸಿ ಉತ್ತಮ ಇಳುವರಿ ಪಡೆದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಉದ್ದದ ಬೆಂಡೆ:

ಬೆಂಡೆಯ ಬೀಜ ಬಿತ್ತಿ ಆರೈಕೆ ಮಾಡಿದ್ದಾರೆ. ಗಿಡದಲ್ಲಿ ಬಂದ ಬೆಂಡೆಕಾಯಿ ನೋಡಿ ಅಚ್ಚರಿ ಪಡುವ ಸರದಿ ಇವರದು. ಬರೋಬ್ಬರಿ ೧೨ಸೆ.ಮೀ. ಉದ್ದದ ಬೆಂಡೆಕಾಯಿಯಾಗಿದ್ದು, ಅದಕ್ಕೆ ‘ಶಿರ್ವ ಬೆಂಡೆ’ ಎಂದೇ ನಾಮಕರಣ ಮಾಡಿದ್ದಾರೆ. ಈ ತಳಿ ಎಲ್ಲೂ ಕಂಡು ಬಂದಿಲ್ಲ ಎನ್ನುತ್ತಾರೆ ರಾಘವೇಂದ್ರ.

ಸಂಪೂರ್ಣ ಸಾವಯವ:

ಭತ್ತ ಹಾಗೂ ತರಕಾರಿ ಬೆಳೆಗೆ ರೋಗ ನಿರೋಧಕವಾಗಿ ಕಹಿ ಬೇವಿನ ಹಿಂಡಿ ಮತ್ತು ಜೀವಸಾರ ಘಟಕದ ಸ್ಲರಿಯನ್ನು ಪೂರೈಸುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿ, ನಂಜುರೋಗ ನಿವಾರಣೆಯಾಗುತ್ತದೆ. ಚೆನ್ನಾಗಿ ಬಲಿತ ಕಾಯಿಗಳನ್ನು ಗಿಡದಲ್ಲಿಯೇ ಇರಿಸಿ, ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಕ್ಕಳ ನೆರವಿನೊಂದಿಗೆ ಬೀಜ ಶೇಖರಿಸಿಡುವುದು ಇವರ ಹವ್ಯಾಸ. ತೋಟ ನೋಡಲು ಬರುವವರಿಗೆ, ಶಾಲಾ ಮಕ್ಕಳಿಗೆ, ಹಿತೈಷಿಗಳಿಗೆ ಈ ಬೀಜ ನೀಡಿ ಬೆಳೆಯಲು ಪ್ರೋತ್ಸಾಹಿಸುತ್ತಾರೆ. ಸಂಪೂರ್ಣ ಸಾವಯವಕ್ಕಾಗಿ ಹೈನುಗಾರಿಕೆ ಇದೆ. ಮೇವನ್ನೂ ತಾವೇ ಬೆಳೆಯುತ್ತಾರೆ. ಇವರು ‘ಉದಯೋನ್ಮುಖ ರೈತ’ ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಜಲಮರುಪೂರಣ ಮಾಡಿದ ಕಾರಣ ಕೃಷಿಗೆ ನೀರೂ ಸಮೃದ್ಧವಾಗಿ

click me!