ಯಾವ ಬಗೆಯ ನಡಿಗೆ ನಿಮ್ಮದು?

By Kannadaprabha NewsFirst Published Jul 30, 2018, 2:54 PM IST
Highlights

ನಡೆಯೋದು ಅಂದರೆ ನಡೆಯೋದಷ್ಟೇ, ಅದರಲ್ಲೂ ವೆರೈಟಿ ಇರುತ್ತಾ, ಒಬ್ಬೊಬ್ಬರೂ ಒಂದೊಂದು ಥರ ನಡೀತಾರೆ, ಅದರಲ್ಲೇನು ಸ್ಪೆಷಲ್ ಅಂತ ಕೇಳಬಹುದು. ಇಲ್ಲಿ ಆ ವಿಶೇಷತೆ ಬಗ್ಗೆ ಡೀಟೈಲ್ಸ್ ಇದೆ. ಸಣ್ಣ ಪುಟ್ಟ ಸೂಕ್ಷ್ಮವಿವರಗಳೂ ನಿಮ್ಮ ವ್ಯಕ್ತಿತ್ವ ಎಂಥಾದ್ದು ಅಂತ ಹೇಳುತ್ತವೆ. ನಡೆಯುವ ರೀತಿ, ಮಲಗುವ ಭಂಗಿ ಮೊದಲಾದವು ಕೆಲವು ವಿಶೇಷತೆಗಳನ್ನು ಹೇಳುತ್ತವೆ. ಅಂದಹಾಗೆ ನಿಮ್ಮ ನಡಿಗೆ ರೀತಿ ಯಾವ ಬಗೆಯದ್ದು?

ವೇಗವಾಗಿ ನಡೆಯುವವರು

ವೇಗವಾಗಿ ನಡೆಯುವವರನ್ನು ಕಂಡರೆ, ಬಹುಶಃ ಎಲ್ಲೋ ಆಫೀಸ್‌ಗೆ ಲೇಟ್ ಆಗ್ತಾ ಇರಬಹುದು, ಅದಕ್ಕೆ ಅಷ್ಟು ಫಾಸ್ಟಾಗಿ ನಡೀತಿದ್ದಾರೆ ಅಂದುಕೊಳ್ಳಬಹುದು. ಆದರೆ ವಾಸ್ತವದಲ್ಲಿ ಅವರು ಲೇಟಾಯ್ತು ಅಂತ ಹಾಗೆ ನಡೆಯಲ್ಲ. ಅವರ ನಡಿಗೆಯೇ ಹಾಗಿರುತ್ತೆ. ಸಾಮಾನ್ಯವಾಗಿ ಇಂಥವರಲ್ಲಿ ಎನರ್ಜಿ ಲೆವೆಲ್ ಹೆಚ್ಚಿರುತ್ತೆ. ಬಹಳ ಆತ್ಮವಿಶ್ವಾಸದಿಂದಿರುತ್ತಾರೆ. ಉತ್ಸಾಹ, ಕ್ರೀಡಾಸ್ಫೂರ್ತಿಯ ಹುಮ್ಮಸ್ಸಿನ ವ್ಯಕ್ತಿತ್ವದವರಾಗಿರುತ್ತಾರೆ.

ಆಮೆ ನಡಿಗೆ

ಸಾವಧಾನದ ಮನಸ್ಥಿತಿಯವರ ನಡಿಗೆ ನಿಧಾನ ಗತಿಯಲ್ಲಿರುತ್ತದೆ. ಯಾವತ್ತೂ ಸಮಚಿತ್ತ ಕಳೆದುಕೊಳ್ಳದವರು. ಉದ್ವೇಗವಿಲ್ಲದೇ ಕೂಲ್ ಆಗಿರುವ ಈ ಬಗೆಯ ನಡಿಗೆಯವರು ತುಸು ಸಂಕೋಚ ಪ್ರವೃತ್ತಿಯವರೂ ಆಗಿರುತ್ತಾರೆ. ಕೆಲಸ ಬಗ್ಗೆ ಗೊಂದಲ ಕಡಿಮೆ. ಬಹಳ ಯೋಚಿಸಿ ಕಾರ್ಯಪ್ರವೃತ್ತರಾಗುವವರು. ಲೈಫ್‌ನಲ್ಲಿ ರಿಸ್ಕ್ ತೆಗೆದುಕೊಳ್ಳೋದು ಕಡಿಮೆ.

ಧುಮುಗುಡುವ ನಡಿಗೆ

ಫ್ರಸ್ಟ್ರೇಶನ್ ಹೆಚ್ಚಾಗಿರುವವ ನಡಿಗೆ ಇದು. ಸಣ್ಣ ಪುಟ್ಟದಕ್ಕೂ ಕಿರಿಕಿರಿ ಪಡುವ ಜನ. ಖುಷಿಯಾಗಿರುವುದು ಕಡಿಮೆ. ಉಳಿದವರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. ನೀವು ತ್ರೀ ಈಡಿಯೆಟ್ಸ್ ಸಿನಿಮಾ ನೋಡಿದರೆ ಅದರಲ್ಲಿ ಬರುವ ‘ವೈರಸ್’ ಪ್ರಿನ್ಸಿಪಾಲ್‌ರ ನಡಿಗೆಯನ್ನು ನೆನಪಿಸಿಕೊಳ್ಳಿ. ಇದೂ ಆ ಬಗೆಯ ನಡಿಗೆ.

ಅಂಜುಬುರುಕ ನಡಿಗೆ

ಹೀಗೆ ನಡೆಯುವವರಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ತಲೆ ತಗ್ಗಿಸಿ ಸದ್ದಿಲ್ಲದೇ ಸಣ್ಣ ಗಾಬರಿಯಲ್ಲಿ ನಡೆಯುತ್ತಾರೆ. ಕೀಳರಿಮೆ ಇವರ ವ್ಯಕ್ತಿತ್ವದಲ್ಲಿರುತ್ತದೆ. 

click me!