ಅಬ್ಬಾ ಈ ಮನುಷ್ಯ 60 ವರ್ಷಗಳಿಂದ ಸ್ನಾನವೇ ಮಾಡಿಲ್ವಂತೆ..!!

Published : Dec 07, 2019, 12:37 PM IST
ಅಬ್ಬಾ ಈ ಮನುಷ್ಯ 60 ವರ್ಷಗಳಿಂದ ಸ್ನಾನವೇ ಮಾಡಿಲ್ವಂತೆ..!!

ಸಾರಾಂಶ

ಪ್ರತಿಯೊಬ್ಬ ಮನುಷ್ಯನೂ ಶುಚಿತ್ವದ ಕಡೆ ಗಮನ ಕೊಡಲೇಬೇಕು. ಅದರಲ್ಲೂ ಮುಖ್ಯವಾಗಿ ಸ್ನಾನ, ನಮ್ಮನ್ನ ದಿನವಿಡಿ ಫ್ರೆಶ್ ಆಗಿ ಇರುವಂತೆ ಮಾಡುತ್ತದೆ. ಆದ್ರೆ ಇಲ್ಲೊಬ್ಬ ಭೂಪ ಸುಮಾರು 60 ವರ್ಷಗಳಿಂದ ಸ್ನಾನವೇ ಮಾಡಿಲ್ಲ ಅಂದರೆ ನೀವು ನಂಬ್ತೀರಾ? ನಂಬಲೇಬೇಕು. ಹೌದು. ಇರಾನ್ ದೇಶದ ಎಮೋ ಹಾಜಿ ಎಂಬಾತನ ಕಥೆ ಇದು. ಈ ಪುಣ್ಯಾತ್ಮ ಆರು ದಶಕಗಳಿಂದ ತನ್ನ ದೇಹಕ್ಕೆ ನೀರನ್ನ ತಾಗಿಸಿಯೇ ಇಲ್ವಂತೆ.! 

ಒಂದು ದಿನ ಸ್ನಾನ ಮಾಡದೆ ಹಾಗೆ ಇದ್ರೆ ನಮಗೆ ನೆಮ್ಮದಿ ಇರಲ್ಲ. ಆ ದಿನ ಲವಲವಿಕೆಯೇ ಇರಲ್ಲ. ಆದರೆ 60 ವರ್ಷಗಳಿಂದ ಸ್ನಾನವೇ ಮಾಡಿಲ್ಲ ಅಂದ್ರೆ ಏನಪ್ಪಾ ಕಥೆ ಅಂತ ನೀವ್ ಅಂದುಕೊಂಡಿರಬಹುದು. ಆದರೆ, ಇರಾನ್ ದೇಶದ ಈ ಎಮೋ ಹಾಜಿಯ ಜೀವನ ಶೈಲಿ ಅಚ್ಚರಿ ಜೊತೆಗೆ ವಾಕರಿಕೆ ಬರುವಂತಿದೆ. ಯಾಕಂದ್ರೆ ಈತ ಬರೋಬ್ಬರಿ  60 ವರ್ಷಗಳಿಂದ ಸ್ನಾನವೇ ಮಾಡದ ವಿಶ್ವದ ಅತ್ಯಂತ ಕೊಳಕು ಮನುಷ್ಯ!  

ಅಪಾಯಕಾರಿ ಅಂಟಾರ್ಟಿಕ ಸಾಗರದಲ್ಲಿ ಈಜಬಹುದೇ? ಈ ಸಾಧಕನನ್ನೇ ಕೇಳಿ!

ಈಗ 81 ವರ್ಷ ವಯಸ್ಸಾಗಿರುವ ಈತನಿಗೆ ಯಾಕಪ್ಪಾ ನೀನು ಇಷ್ಟು ವರ್ಷ ಸ್ನಾನ ಮಾಡಿಲ್ಲ ಅಂತ ಕೇಳಿದ್ರೆ, ಈತ ಹೇಳೋದು ಒಂದೇ ಉತ್ತರ. ಸ್ನಾನ ಮಾಡಿದ್ರೆ ಆರೋಗ್ಯ ಕೆಡುತ್ತೆ ಅನ್ನೋದು. ಇಷ್ಟೆ ಅಲ್ಲ ಈತ ದಿನನಿತ್ಯ ಹೊಟ್ಟೆಗೆ ಏನ್ ತಿಂತಾನೆ ಅಂತ ಕೇಳಿದ್ರೆ ನೀವು ಭಯಪಡೋದು ಗ್ಯಾರಂಟಿ! ಇರಾನ್ ನ ಹೈವೆ ರಸ್ತೆ ಬದಿಯಲ್ಲಿ ವಾಸಿಸುವ ಈತ ತಿನ್ನೋದು ಸತ್ತ, ಕೊಳೆತ ಪ್ರಾಣಿಗಳ ಹಸಿ ಮಾಂಸ.  ರಸ್ತೆಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತ ಪ್ರಾಣಿಗಳ ಮಾಂಸವೇ ಈತನ ನಿತ್ಯ ಆಹಾರ! 

ಮೋದಿ ಕ್ಷೇತ್ರ ಎಂಬ ಕಾರಣದಿಂದಲ್ಲ, ಇಷ್ಟೆಲ್ಲಾ ನೋಡುವುದಿದೆ ವಾರಣಾಸಿಯಲ್ಲಿ!

ಮತ್ತೊಂದು ವಿಷ್ಯ ಅಂದ್ರೆ ಈತನಿಗೆ ಸಿಗರೇಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಜನರ ಬಳಿ ಸಿಗರೇಟ್ ಕೇಳಿ ಸೇದುವ ಈತನಿಗೆ ಕೆಲವೊಮ್ಮ ಸಿಗರೇಟ್ ಸಿಗೋದು ಕಷ್ಟ. ಈ ವೇಳೆ ಈ ಎಮೋ ಹಾಜಿ ಮಾಡೋದು ಇನ್ನೂ  ವಿಚಿತ್ರ. ಈತ ದನ, ಕುದುರೆ, ಒಂಟೆಯ ಒಣಗಿದ ಸೆಗಣಿಯನ್ನೇ ಪುಡಿ ಮಾಡಿ ಸಿಗರೇಟಿನ ರೀತಿ ಮಾಡಿಕೊಂಡು ಸೇದುತ್ತಾನಂತೆ. 

ಇಷ್ಟೆಲ್ಲ ಕೊಳಕಾಗಿದ್ರೂ ಈತನ ಆ ಒಂದು ಜೀವನ ಶೈಲಿ ಮಾತ್ರ ಆತನ ಆರೋಗ್ಯ ಕಾಪಾಡುವಂತೆ ಮಾಡಿದೆ. ಅದೇನೆಂದರೆ, ದೇಹಕ್ಕೆ ನೀರು ತಾಗಿಸದೇ ಇದ್ರೂ ನೀರನ್ನ ಮಾತ್ರ ಹೆಚ್ಚು ಕುಡಿತಾನಂತೆ ಈ ಎಮೋ ಹಾಜಿ!

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?