ಸಿಸಿ ಕ್ಯಾಮರಾದಲ್ಲಿ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಬೆಳಕಿನ ಆಕೃತಿಯೊಂದು ಓಡಾಡಿದ ದೃಶ್ಯ ಸೆರೆಯಾಗಿದ್ದು, ಅದು ಒಂದು ಬಟ್ಟಲಿನ ಆಕೃತಿಯು ಉರಿಯುವ ಬೆಳಕಿನಂತೆ ಮೇಲ್ಮುಖವಾಗಿ ಚಲಿಸಿದೆ. ದೃಶ್ಯ ನೋಡಿದ ಜನ ಆತಂಕಕ್ಕೊಳಗಾಗಿದ್ದಾರೆ.
ಮಡಿಕೇರಿ(ನ.11): ಅನುಮಾನ ಮೂಡಿಸುವಂತಹ ಅಗೋಚರ ಶಕ್ತಿಯ ಬೆಳಕೊಂದು ಶನಿವಾರ ರಾತ್ರಿ ಗೋಚರವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ಮೂಲಕ ಜನರಲ್ಲಿ ಆತಂಕವನ್ನು ಸೃಷ್ಟಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ.
ನಗರದ ಕೊಯಮತ್ತೂರು ಆಗ್ರೋ ಡೀಸೆಲ್ಸ್ ಗೋಡೌನ್‌ನ ಸಿಸಿ ಕ್ಯಾಮರಾದಲ್ಲಿ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಬೆಳಕಿನ ಆಕೃತಿಯೊಂದು ಓಡಾಡಿದ ದೃಶ್ಯ ಸೆರೆಯಾಗಿದ್ದು, ಅದು ಒಂದು ಬಟ್ಟಲಿನ ಆಕೃತಿಯು ಉರಿಯುವ ಬೆಳಕಿನಂತೆ ಮೇಲ್ಮುಖವಾಗಿ ಚಲಿಸಿದೆ.
undefined
ಕೊಡಗಿನಲ್ಲಿ ಅರೆಬಿಕಾ ಕಾಫಿ ಕೊಯ್ಲು ಆರಂಭ
ನೆಲದಿಂದ ಮೇಲ್ಭಾಗದ ಗೋಡೆಯವರೆಗೆ ಸಾಗಿ ನಿಂತ ಬೆಳಕಿನ ಆಕೃತಿಯ ದೃಶ್ಯವನ್ನು ಕಂಡ ಕೆಲವರು ಅಗೋಚರ ಶಕ್ತಿಯೇ ಬೆಳಕಿನ ಮಾದರಿಯಲ್ಲಿ ಕಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಕಂಡು ಗೋಡೌನ್ ಸಿಬ್ಬಂದಿ ಭಯಭೀತರಾಗಿದ್ದು, ಅದು ನೆಗೆಟಿವ್ ಎನಜಿ ಆಗಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಈರುಳ್ಳಿ: ಗದಗದಲ್ಲಿ ಕ್ವಿಂ.ಗೆ 200, ಮಂಗಳೂರಲ್ಲಿ ಕೆಜಿಗೆ 70..!