ಅಯೋಧ್ಯೆ ತೀರ್ಪು ಮಡಿಕೇರಿಯ ಕಟುಂಬವೊಂದಕ್ಕೆ ಸಂತಸದ ಜೊತೆ ಸಾಂತ್ವನವನ್ನೂ ನೀಡಿದೆ. ಅಯೋಧ್ಯೆ ವಿವಾದದ ಸಂದರ್ಭ ತಮ್ಮನನ್ನು ಕಳೆದುಕೊಂಡ ಮಡಿಕೇರಿಯ ವ್ಯಕ್ತಿಯೊಬ್ಬರು ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಮಡಿಕೇರಿ(ನ.10): ಅಯೋಧ್ಯೆ ತೀರ್ಪು ಮಡಿಕೇರಿಯ ಕಟುಂಬವೊಂದಕ್ಕೆ ಸಂತಸದ ಜೊತೆ ಸಾಂತ್ವನವನ್ನೂ ನೀಡಿದೆ. ಅಯೋಧ್ಯೆ ವಿವಾದದ ಸಂದರ್ಭ ಅಣ್ಣನನ್ನು ಕಳೆದುಕೊಂಡ ಮಡಿಕೇರಿಯ ವ್ಯಕ್ತಿಯೊಬ್ಬರು ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ಜಾಗದ ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಮಡಿಕೇ ರಿಯ ನೊಂದ ಕುಟುಂಬವೊಂದಕ್ಕೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ. ಹೌದು. 1990ರಲ್ಲಿ ಸಾಕಷ್ಟು ಕರಸೇವಕರು ಕೊಡಗು ಜಿಲ್ಲೆಯಿಂದ ಅಯೋಧ್ಯೆಗೆ ತೆರಳಿದ್ದರು. ಅದರಲ್ಲಿ ಮಡಿಕೇರಿಯ ಪ್ರಭಾಕರ್ ಪೈ ಕೂಡ ಒಬ್ಬರಾಗಿದ್ದರು.
ಆದರೆ, ಎಲ್ಲಾ ಕರಸೇವಕರು ಹಿಂದಕ್ಕೆ ಬಂದರೆ ಪ್ರಭಾಕರ್ ಪೈ ಮಾತ್ರ ವಾಪಾಸ್ಸಾಗಿಲ್ಲ. ಮಧ್ಯಪ್ರದೇಶದಲ್ಲಿ ನಡೆದ ಗಲಭೆಯಲ್ಲಿ ಅ. 30ರಂದು ಅವರು ರೈಲಿನಿಂದ ಬಿದ್ದು ಮೃತರಾಗಿದ್ದರು.
ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು
ಈ ತೀರ್ಪಿನಿಂದ ಸಂತಸಗೊಂಡಿರುವ ಮೃತರ ಸಹೋದರ ಸತೀಶ್ ಪೈ ಅವರು ಸಾರ್ವಜನಿಕರಿಗೆ ಸಿಹಿ ಹಂಚಿದ್ದಾರೆ. ಈ ದಿನಕ್ಕಾಗಿ ನಾನು 29 ವರ್ಷಗಳ ಕಾಲ ಕಾಯುತ್ತಿದ್ದೆ. ಇಂದು ಅಣ್ಣನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!