ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತು ಹಲವು ವಿನೂತನ ಮತ್ತು ಪ್ರಾಯೋಗಿಕ ಹಾಗೂ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದೆ. ಇದೀಗ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಒಂದಾದ ಶೌಚಾಲಯ ವ್ಯವಸ್ಥೆಗೆ ಪೂರಕವಾಗಿ ಎಸೆದ ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯವನ್ನು ಬಳಸಿಕೊಂಡು ಶಾಲೆಯಲ್ಲಿ ಬಾಲಕರಿಗಾಗಿ ಸರಿಯಾದ ಶೌಚಾಲಯ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ‘ಸುಲಭ್ ಶೌಚಾಲಯ’ ನಿರ್ಮಾಣ ಕಾರ್ಯಕ್ಕೆ ಶಾಲೆ ಚಾಲನೆ ನೀಡಿದೆ.
ಮಡಿಕೇರಿ(ನ.13): ಸರ್ಕಾರಿ ಶಾಲೆಗಳಲ್ಲಿ ಸೌಕರ‌್ಯಗಳಿಗಿಂತ ಕೊರತೆಗಳೆ ಸಾಕಷ್ಟಿದ್ದು ಇದರಲ್ಲಿ ಹೆಚ್ಚಾಗಿ ಶಾಲೆಗಳಲ್ಲಿ ಬಾಲಕರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದ್ದರೂ ವ್ಯವಸ್ಥಿತವಾಗಿರುವುದಿಲ್ಲ. ಹಾಗೂ ಶೌಚಾಲಯದ ವ್ಯವಸ್ಥೆ ಇರುವ ಶಾಲೆಗಳಲ್ಲಿ ಶೌಚಾಲಯದ ಸುಃಸ್ಥಿತಿಯ ನಿರ್ವಹಣೆ ಇರುವುದಿಲ್ಲ. ಸ್ವಚ್ಛ ಭಾರತ ಅಭಿಯಾನ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿದ್ದರೂ ವ್ಯವಸ್ಥಿತ ಶೌಚಾಲಯದ ಕೊರತೆ ತುಂಬಾ ಇದೆ.
ಸಹ ಶಿಕ್ಷಕ ಸತೀಶ್ ನೇತೃತ್ವ:
ಇದೀಗ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಿ. ಎಸ್. ಸತೀಶ್ ಅವರು ಆರೋಗ್ಯ ಮತ್ತು ನೈರ್ಮಲ್ಯ ಪಾಠಕ್ಕೆ ಸಂಬಂಧಿಸಿದಂತೆ ತಮ್ಮ ಶಾಲೆಯಲ್ಲಿ ಬಾಲಕರಿಗೆ ವ್ಯವಸ್ಥಿತ ಶೌಚಾಲಯದ ವ್ಯವಸ್ಥೆ ನೀಗಿಸಲು ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯ ಬಳಸಿ ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ಅದುವೆ ಸುಲಭ್ ಶೌಚಾಲಯ. ಹೊಸ ರೀತಿಯ ಯೋಜನಾ ಕಾರ್ಯ ನೀಡುವುದರ ಮೂಲಕ ವೆಚ್ಚ ರಹಿತ ಹೊಸ ರೀತಿಯ ಯೂರಿನ್ ಕಮೋಡ್‌ಗಳನ್ನು ಪರಿಚಯಿಸಿದ್ದಾರೆ.
ಶಾಲೆಯಲ್ಲಿ ಬಾಲಕರಿಗಾಗಿ ನಿರ್ಮಿಸಿದ್ದ ಶೌಚಾಲಯಕ್ಕೆ ವ್ಯವಸ್ಥಿತ ವಿಲೇವಾರಿ ಇರದೆ ಶೌಚಾಲಯದಲ್ಲಿ ಕಮೋಡ್‌ಗಳಿಲ್ಲದೆ ವಿದ್ಯಾರ್ಥಿಗಳು ಶೌಚಾಲಯ ಬಳಸುವಾಗ ಕಾಲು, ಕೈಗೆ ಶುಚಿತ್ವ ಮತ್ತು ಬಾಲಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು ಹಾಗೂ ಶೌಚಾಲಯ ಸುತ್ತಮುತ್ತ ವಾಸನೆಯಿಂದ ಕೂಡಿದ್ದು ಶಾಲೆಯ ಎಲ್ಲ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿತ್ತು.
ಸರ್ಕಾರ ಇನ್ನೂ ಕೋಮಾದಲ್ಲೇ ಇದೆ, ಟೇಕ್ ಅಫ್ ಆಗಿಲ್ಲ: ಖಾದರ್ ಟೀಕೆ
ಈ ಸಮಸ್ಯೆ ನೀಗಿಸಲು ಶಾಲೆಯ ಶಿಕ್ಷಕರ ಜೊತೆಗೂಡಿ ವಿದ್ಯಾರ್ಥಿಗಳು ಅತೀ ಕಡಿಮೆ ವೆಚ್ಚದಲ್ಲಿ, ಎಸೆದ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಬಳಸಿ ಯೂರಿನ್ ಕಮೋಡ್ ಮಾದರಿಯಲ್ಲಿ ಅದನ್ನು ಕತ್ತರಿಸಿ ಅದಕ್ಕೆ ಪಿವಿಸಿ ಪೈಪ್ ಅಳವಡಿಸಿ ವ್ಯವಸ್ಥಿತವಾಗಿ ಶೌಚ ವಿಲೇವಾರಿ ಮಾಡಿದ್ದಾರೆ. ಇದಕ್ಕೆ ಫಿನಾಯಿಲ್ ವ್ಯವಸ್ಥೆ ಮಾಡಿದ್ದು ಈ ಮೂಲಕ ಸ್ವಚ್ಛ ಭಾರತ್ ಅಭಿಯಾನಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ.
ಕಮೋಡ್ ರಚನೆ ಹೇಗೆ?:
ಅಡುಗೆ ಎಣ್ಣೆಯ 5 ಲೀಟರಿನ ಸಿಲಿಂಡರ್ ಆಕೃತಿಯ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ತೆಗೆದುಕೊಂಡು ತಳಭಾಗವನ್ನು ಮೇಲ್ಮುಖವಾಗಿ ಮಾಡಿಕೊಂಡು ಕಮೋಡ್ ಮಾದರಿಯಲ್ಲಿ ಕತ್ತರಿಸಲಾಗುವುದು. ಮೇಲ್ಭಾಗದಲ್ಲಿ ನೀರು ಮತ್ತು ಫಿನೈಲ್ ಸಾಗಿಸಲು ಹಾಗೂ ತಳ ಭಾಗದಲ್ಲಿ ಯೂರಿನ್, ಶೌಚ ವಿಲೇವಾರಿಯಾಗಲು 2 ಇಂಚಿನ ಪೈಪ್‌ಗಳನ್ನು ಅಳವಡಿಸಿ ಪ್ರತಿ ಕಮೋಡ್‌ಗಳಿಗೆ ಟ್ಯಾಗ್ ಮಾಡಲಾಗಿದೆ. ತಳ ಭಾಗದಲ್ಲಿರುವ 2 ಇಂಚಿನ ಪೈಪ್‌ಗೆ ನೇರವಾಗಿ ಸಂಪರ್ಕ ಕಲ್ಪಿಸಿ ಶೌಚ ಒಂದೆಡೆ ನಿಲ್ಲದೆ ವ್ಯವಸ್ಥಿತವಾಗಿ ಸಾಗುವಂತೆ ಮಾಡಲಾಗಿದೆ.
ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ
ಪಕ್ಕದಲ್ಲಿ 10 ಲೀಟರ್ ಸಾಮರ್ಥ್ಯದ ನೀರಿನ ಪ್ಲಾಸ್ಟಿಕ್ ಕ್ಯಾನೊಂದನ್ನು ಕಮೋಡ್ ಶುಚಿಗೊಳಿಸಲು ಅಳವಡಿಸಲಾಗಿದೆ. ವಾಲ್ವ್‌ಗೇಟ್ ಆನ್ ಮಾಡಿದರೆ ಎಲ್ಲ ಕಮೋಡ್‌ಗಳು ತೊಳೆದುಹೋಗುತ್ತವೆ. ಇದೀಗ ಶಾಲೆಯ ಬಾಲಕರು ಸುಲಭ್ ವಿಧಾನದ ಶೌಚಾಲಯವನ್ನು ಬಳಸುತ್ತಿದ್ದು ವಿದ್ಯಾರ್ಥಿಗಳು ಪ್ರತಿದಿನ ನೀರಿನೊಂದಿಗೆ ಫಿನಾಯಿಲ್ ಮಿಶ್ರಮಾಡಿ ಇದಕ್ಕೆ ಹಾಕುತ್ತಾರೆ. ಈ ಮೂಲಕ ಕಮೋಡ್‌ಗಳಿಗೆ ನಿಧಾನವಾಗಿ ಹನಿಹನಿಯಾಗಿ ಬೆಳಗ್ಗೆಯಿಂದ ಸಂಜೆವರೆಗೂ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ, ಸಿಬ್ಬಂದಿ, ಗ್ರಾ.ಪಂ.ಯವರು ಗ್ರಾಮಸ್ಥರು ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.