ಪರಿಸರ ಪ್ರೇಮ ಬಾಯಲ್ಲಿ ಮಾತ್ರವಲ್ಲ, ಪ್ರವೃತ್ತಿಯಲ್ಲಿರಲಿ ಎಂದು ತೋರಿಸಿದ ಆಟೋ ಚಾಲಕ

By Kannadaprabha News  |  First Published Nov 11, 2019, 1:56 PM IST

ಕಾಡು ಬೆಳೆಸಿ, ನಾಡು ಉಳಿಸಿ, ಹಸಿರೇ ನಮ್ಮ ಉಸಿರು.. ಹೀಗಂದು ಹೇಳಿಕೊಂಡು ಸುತ್ತಾಡುವ ಜನರಿಗೇನೂ ಕಡಿಮೆ ಇಲ್ಲ. ಇಂಥವರಿಂದ ಪರಿಸರಕ್ಕೆ ಯಾವ ಉಪಯೋಗವು ಇಲ್ಲ. ಪರಿಸರವಾದ ಅನ್ನೊದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿರುವುದೇ ಹೆಚ್ಚು. ಅಂಥವರಿಗೆಲ್ಲಾ ಮಾದರಿ ಗಣೇಶ್ ಕಡಗದಾಳು.


ಮಡಿಕೇರಿ(ನ.11): ಕಾಡು ಬೆಳೆಸಿ, ನಾಡು ಉಳಿಸಿ, ಹಸಿರೇ ನಮ್ಮ ಉಸಿರು.. ಹೀಗಂದು ಹೇಳಿಕೊಂಡು ಸುತ್ತಾಡುವ ಜನರಿಗೇನೂ ಕಡಿಮೆ ಇಲ್ಲ. ಇಂಥವರಿಂದ ಪರಿಸರಕ್ಕೆ ಯಾವ ಉಪಯೋಗವು ಇಲ್ಲ. ಪರಿಸರವಾದ ಅನ್ನೊದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿರುವುದೇ ಹೆಚ್ಚು. ಅಂಥವರಿಗೆಲ್ಲಾ ಮಾದರಿ ಗಣೇಶ್ ಕಡಗದಾಳು.

ಮೂಲತಃ ಕಡಗದಾಳು ನಿವಾಸಿಯಾಗಿರುವ 40 ವರ್ಷದ ಗಣೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾರೆ. ಮಡಿಕೇರಿ ನಗರದ ಜಿ.ಟಿ. ವೃತ್ತದ ಬಳಿಯ ಆಟೋ ನಿಲ್ದಾಣದಲ್ಲಿ ಕಳೆದ 18 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿರುವ ಇವರು, ಸ್ವಾಮಿ ವಿವೇಕಾನಂದ ಜನಸೇವಾ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದು, ಒಬ್ಬ ಪರಿಸರ ವಾದಿ ಹಾಗೂ ಸಮಾಜ ಸೇವಕ ಕೂಡ ಹೌದು. ಆದರೆ ಎಲ್ಲರಂತೆ ಬಾಯಿ ಮಾತಿನಲ್ಲಿ ಪರಿಸರ ಉಳಿವಿನ ಬಗ್ಗೆ ಹೇಳಿಕೊಂಡು ತಿರುಗಾಡದೆ, ಪರಿಸರಕ್ಕೆ ತಾನು ಹೇಗೆ ಕೊಡುಗೆ ನೀಡುಬಹುದು ಅನ್ನುವುದನ್ನು ಕೆಲಸ ಮಾಡಿ ತೋರಿಸುತ್ತಿದ್ದಾರೆ.

Tap to resize

Latest Videos

ಶಿವಕುಮಾರ ಸ್ವಾಮಿಗಳ ಪವಿತ್ರ ಗದ್ದುಗೆ ಮೇಲೆ ವಿಶೇಷ ಶಿವಲಿಂಗ

ಕಳೆದ ಏಳೆಂಟು ವರ್ಷಗಳಿಂದ ಗಣೇಶ್ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ನಗರದ ಜಿ.ಟಿ. ಸರ್ಕಲ್, ಖಾಸಗಿ ಬಸ್ ನಿಲ್ದಾಣ ಸಮೀಪ ಸೇರಿದಂತೆ ನಗರದ ವಿವಿಧ ಸಾರ್ವಜನಿಕರ ಪ್ರದೇಶಗಳಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಹೊಂಗೆ, ಸಂಪಿಗೆ, ನೊಗ ಸೀಬೆ, ಜಂಭು ನೆರಳೆ ಮುಂತಾದ ವಿವಿಧ ಥಳಿಯ 30ಕ್ಕೂ ಅಧಿಕ ಮರಗಳನ್ನು ನೆಟ್ಟು ಪರಿಸರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಇವರಿಗೆ ಉಳಿದ ಆಟೋ ಚಾಲಕರು ಕೂಡ ಸಾಥ್ ನೀಡುತ್ತಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ SP ರವಿ ಚನ್ನಣ್ಣನವರ್.

ಗಣೇಶ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಹಿಂದೆ ಪುಷ್ಪಾವತಿ ಅವರು ಮಡಿಕೇರಿ ನಗರಸಭಾ ಆಯುಕ್ತರಾಗಿದ್ದ ಸಂದರ್ಭದಲ್ಲಿ ನಗರ ಸಭೆಯ ಆವರಣದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲೆಂದು ಮುತ್ತಣ್ಣ ವೃತ್ತದ ಬಳಿ ಹಲವರಿಗೆ ನೆರಳು ನೀಡುತ್ತಿದ್ದ ಮರವೊಂದನ್ನು ತೆರವುಗೊಳಿಸಲು ಮುಂದಾದಾಗ ಅದನ್ನು ಯಾರೂ ಕೂಡ ವಿರೋಧಿಸುವ ಗೋಜಿಗೆ ಹೋಗಿರಲಿಲ್ಲ.

ಆದರೆ ಗಣೇಶ್ ಮರ ಕಡಿಯುವುದರ ವಿರುದ್ಧ ಧ್ವನಿ ಎತ್ತಿದರಲ್ಲದೆ ನಗರ ಸಭೆಯ ಆಯುಕ್ತರ ಜೊತೆ ಮಾತುಕತೆ ನಡೆಸಿ ಮರವನ್ನು ತೆರವುಗೊಳಿಸುವ ಕಾರ್ಯವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು ಎನ್ನುತ್ತಾರೆ ಸ್ಥಳೀಯರು. ಇದು ಅವರ ಪರಿಸರ ಪ್ರೇಮವನ್ನು ತೋರಿಸುತ್ತದೆ.

ಐತಿಹಾಸಿಕ ಅಯೋಧ್ಯೆ ತೀರ್ಪು ಬರೆದಿದ್ದು ನ್ಯಾ. ಚಂದ್ರಚೂಡ್?

ಆಟೋ ಚಾಲಕನಾಗಿ ಜೀವನ ನಡೆಸುತ್ತಿರುವ ನನಗೆ ಸಾರ್ವಜನಿಕರು ಬಿಸಿಲಿನಲ್ಲಿ ಸುತ್ತಾಡಿ ಬಸ್‌ಗಾಗಿ ಕಾಯುತ್ತಾ ನೆರಳನ್ನು ಬಯಸಿ ಬರುತ್ತಿದದ್ದು ನೋಡುತ್ತಿದ್ದೆ. ಹೇಗಾದ್ರು ಮಾಡಿ ಸಾರ್ವಜನಿಕರು ಹೆಚ್ಚಾಗಿ ಬಂದು ಹೋಗುವ ಕಡೆಗಳಲ್ಲಿ ಮರಗಳನ್ನು ನೆಟ್ಟು ಬೆಳೆಸಿ ಸೇವೆ ಮಾಡಬೇಂಬ ಆಸಕ್ತಿ ಹುಟ್ಟಿತು. ಏರ್ಪಟ್ಟಿತ್ತು. ಅದರಂತೆ ಕಳೆದ ಏಳೆಂಟು ವರ್ಷಗಳಿಂದ ವೃತ್ತಿಯ ಜೊತೆ ಬಿಡುವು ಮಾಡಿಕೊಂಡು ಕೆಲವು ಸ್ನೇಹಿತರ ಬೆಂಬಲದೊಂದಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಮರಗಳನ್ನು ನೆಡುತ್ತಿದ್ದೇನೆ. ಈ ಮೂಲಕ ಮರ ಕಡಿಯುವುದರ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ಆರಂಭಿಸಿದೆ.

ಅರಣ್ಯ ರಕ್ಷಕಿ ಭವ್ಯಾ ಅವರು ಸಸಿಗಳನ್ನು ಕೊಟ್ಟು ಸಹಕರಿಸುದರ ಜೊತೆ ಪ್ರೋತ್ಸಾಹವನ್ನು ನೀಡಿದ್ದಾರೆ. ನನಗೆ ಸ್ಥಳೀಯರಾದ ಪಿ. ಮಣಿ, ನಂದ, ಸ್ಟೀಫನ್, ಪ್ರಸಾದ್, ಭಾಸ್ಕರ್, ಪ್ರವೀಣ್, ಚೆಲುವ, ಮಂಜು ಹಾಗೂ ಮೋಹನ್ ಸೇರಿದಂತೆ ಹಲವರು ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಈಗಾಗಲೇ ನಾವು ಜಿ.ಟಿ. ವೃತ್ತದ ಬಳಿ ನೆಟ್ಟು ಬೆಳೆಸಿದ ಹಲವು ಮರಗಳು ಬೆಳೆದು ನಿಂತ್ತಿದ್ದು, ನೆರಳು ಬಯಸಿ ಬರುವವರಿಗೆ ನೆರಳಾಗುತ್ತಿವೆ. ಮುಂಬರುವ ದಿನಗಳಲ್ಲಿ ಬಿಡುವು ಮಾಡಿಕೊಂಡು ಮತ್ತಷ್ಟು ಕಡೆ ಮರಗಳನ್ನು ನಡೆವ ಚಿಂತನೆ ಇದೆ ಎಂದು ಪರಿಸರ ಸಂರಕ್ಷಕ ಗಣೇಶ್ ಕಡಗದಾಳು ಹೇಳಿದ್ದಾರೆ.

-ಮೋಹನ್ ರಾಜ್

click me!