ಕೊಡಗಿನಲ್ಲಿ ಹಲ್ಲೆ ಪ್ರಕರಣ ಹೆಚ್ಚಳ; ಪ್ರವಾಸಿಗರ ರಕ್ಷಣೆಗೆ ಬಾರದ ಪೊಲೀಸ್ ಇಲಾಖೆ!

By Ravi Janekal  |  First Published May 21, 2023, 10:07 AM IST

ಪ್ರವಾಸಿಗರ ಸ್ವರ್ಗ, ಹಚ್ಚಹಸಿರುನಿಂದ ಪ್ರವಾಸಿಗರನ್ನ ಕೈಬಿಸಿ ಕರೆಯುವ ಕೊಡಗಿನಲ್ಲಿ ಇದೀಗ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಕೊಡಗಿನ ಸುಂದರ ತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಪದೇಪದೆ ನಡೆಯುತ್ತಿರುವ ಇಂಥ ಘಟನೆಗಳಿಂದ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.


ಕೊಡಗು (ಮೇ.21) ಪ್ರವಾಸಿಗರ ಸ್ವರ್ಗ, ಹಚ್ಚಹಸಿರುನಿಂದ ಪ್ರವಾಸಿಗರನ್ನ ಕೈಬಿಸಿ ಕರೆಯುವ ಕೊಡಗಿನಲ್ಲಿ ಇದೀಗ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಕೊಡಗಿನ ಸುಂದರ ತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಪದೇಪದೆ ನಡೆಯುತ್ತಿರುವ ಇಂಥ ಘಟನೆಗಳಿಂದ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
 

ಜಿಲ್ಲೆಯಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಮುಂದುವರಿದಿದೆ. ಪಾರ್ಕಿಂಗ್ ಟಿಕೆಟ್ ಕಲೆಕ್ಟರ್‌ ಮತ್ತು ವ್ಯಾಪಾರಿಗಳಿಂದ ಪ್ರವಾಸಿಗರ ಮೇಲೆ ಹಲ್ಲೆ ನಡೆದಿದೆ. ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ನಲ್ಲಿ ನಿನ್ನೆ ನಡೆದಿರುವ ಘಟನೆ. ಪ್ರವಾಸಿಗರಿಗೆ ಬಡಿಗೆಯಿಂದ ಹಲ್ಲೆ ಮಾಡಿದ ವ್ಯಕ್ತಿ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು. ಎಲ್ಲೆಡೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ. 

Latest Videos

undefined

Jungle safari: ಪಣಸೋಲಿ ಅರಣ್ಯ ಪ್ರದೇಶದಲ್ಲಿ ಬೊಲೆರೊ ಕ್ಯಾಂಪರ್‌ ಪಲ್ಟಿ, ಐವರಿಗೆ ಗಾಯ

ತಿಂಗಳ ಹಿಂದೆಯಷ್ಟೇ ನಡೆದಿತ್ತು ಹಲ್ಲೆ:

ತಿಂಗಳ ಹಿಂದೆಯಷ್ಟೇ ಪಾರ್ಕಿಂಗ್ ಮಾಡುವ ವಿಷಯದಲ್ಲೂ ಪ್ರವಾಸಿಗನ ಮೇಲೆ ಹಲ್ಲೆ ನಡೆದಿತ್ತು. ಆಟೋ ಚಾಲಕನ ಮೇಲೂ ಹಲ್ಲೆ ಮಾಡಿದ್ದ ಸ್ಥಳೀಯರು. ಹಿಂದೆ ಹಲ್ಲೆ ಮಾಡಿದ್ದ ವ್ಯಕ್ತಿಗಳಿಂದಲೇ ಮತ್ತೊಮ್ಮೆ ಹಲ್ಲೆ. ಪದೇಪದೆ ಪ್ರವಾಸಿಗರ ಹಲ್ಲೆ ನಡೆಸುತ್ತಿದ್ದರೂ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಸುಮ್ಮನಿರುವ ಪ್ರವಾಸೋದ್ಯಮ ಇಲಾಖೆ. ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ. ಪ್ರವಾಸಿಗರ ಮೇಲೆ ಪದೇಪದೆ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ. 

ಹುಲಿ ರಕ್ಷಿತಾರಣ್ಯದಲ್ಲಿ ಝೂ, ಸಫಾರಿ ನಿಷೇಧಕ್ಕೆ ಶಿಫಾರಸು: ರಾಜ್ಯದ ಬಂಡೀಪುರ, ನಾಗರಹೊಳೆ ಸಫಾರಿಗೆ ಕುತ್ತು..?

click me!