ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ‘ಜಿಲ್ಲಾ ಮಟ್ಟದ ವ್ಯಾಪಾರ ಮೇಳ’ ಆಯೋಜಿಸಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಹಿಳೆಯರು ವ್ಯಾಪಾರದಲ್ಲಿ ತೊಡಗಿದ್ದರು.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು: ಇವರೆಲ್ಲ ಪ್ರತಿನಿತ್ಯ ತಾವಾಯ್ತು ತಮ್ಮ ಮನೆಯ ಕೆಲಸ ಆಯ್ತು ಅಂತ ಮನೆಯಲ್ಲೆ ಇದ್ದವ್ರು. ಆದ್ರೆ ಇವತ್ತು ಅವರೆಲ್ಲ ಮನೆ ಬಿಟ್ಟು ಸ್ಟಾಲ್ ಹಾಕಿ ವ್ಯಾಪಾರಕ್ಕೆ ಇಳಿದು ಬಿಟ್ಟಿದ್ರು. ಮನೆಯಲ್ಲೆ ತಯಾರಿಸಿದ ವೆರೈಟಿ ವೆರೈಟಿ ಹೋಂಮೇಡ್ ಫುಡ್ ಗಳು ಹಾಗೂ ವಸ್ತುಗಳನ್ನ ತಂದು ವ್ಯಾಪಾರದಲ್ಲಿ ತೊಡಗಿದ್ರು. ಹಿಗೋಂದು ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ.
ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಎನ್‍ಆರ್‍ಎಲ್‍ಎಂ ಯೋಜನೆಯಡಿ ಗ್ರಾಮೀಣ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಗಾಗಿ ಸಂಜೀವಿನಿ ಸ್ವ ಸಹಾಯ ಸಂಘಗಳ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ‘ಜಿಲ್ಲಾ ಮಟ್ಟದ ವ್ಯಾಪಾರ ಮೇಳ’ ಆಯೋಜಿಸಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಹಿಳೆಯರು ವ್ಯಾಪಾರದಲ್ಲಿ ತೊಡಗಿದ್ದರು.
undefined
ಮಹಿಳೆಯರು ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಲಿ: ಸಚಿವ ಬಿ.ಸಿ. ಪಾಟೀಲ
ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಮಹಿಳೆಯರಿಂದ ಮೇಳಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಹೇಳಿದರು. ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ತಾವು ಬೆಳೆದ ವಸ್ತುಗಳನ್ನ ಹಾಗೂ ಕರಕುಶಲ ವಸ್ತುಗಳನ್ನ ಮಾರಾಟ ಮಾಡಿದ್ರು. ಮೇಳದಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಆಹಾರ ಪದಾರ್ಥಗಳಾದ, ಚಕ್ಲಿ, ಕೋಡ್ಬಳೆ, ಮಸಾಲ ಪೌಡರ್‌ಗಳು, ಹೋಂ ಮೇಡ್ ಚಾಕೊಲೇಟ್, ಹೋಂ ಮೇಡ್ ವೈನ್, ಹಣ್ಣು ತರಕಾರಿಗಳು, ಬಗೆ ಬಗೆಯ ಸೊಪ್ಪುಗಳು, ಉಲ್ಲನ್ ಕ್ಯಾಪ್, ವೈಯರ್‌ನಲ್ಲಿ ಮಾಡಿದ ಬ್ಯಾಗ್ ಹೀಗೆ ಹತ್ತು ಹಲವು ವಸ್ತುಗಳನ್ನ ಇರಿಸಿ ಮಾರಾಟ ಮಾಡಿದ್ದರು
ಇಷ್ಟು ದಿನಗಳ ಕಾಲ ಕೇವಲ ಮನೆ ಮಕ್ಕಳು ಕೆಲ್ಸ ಅಂತ ಇದ್ದ ಮಹಿಳೆಯರು ಮಡಿಕೇರಿ ಗಾಂಧಿ ಮೈದಾನದಲ್ಲಿ ತಾವೆ ತಯಾರಿಸಿದ ವಸ್ತುಗಳನ್ನ ಮಾರಾಟ ಮಾಡೋದ್ರಲ್ಲಿ ತಲ್ಲೀನರಾಗಿದ್ರು. ಈ ರೀತಿಯ ಕಾರ್ಯಕ್ರಮಗಳನ್ನ ಮಾಡೋದ್ರಿಂದ ಮಹಿಳೆಯರು ಮಾಡಿದ ಹೋಂ ಮೇಡ್ ಪ್ರಾಡಕ್ಟ್ ಗಳಿಗೆ ಉತ್ತಮ ಮಾರುಕಟ್ಟೆಯು ದೊರೆಯಲು ಸಹಕಾರಿಯಾಗಿದೆ. ಇನ್ನೂ ಗ್ರಾಹಕರು ಕೂಡ ಮುಂಜಾನೆಯಿಂದಲೇ ಬಂದು ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ವ್ಯಾಪಾರಸ್ಥರಾದ ಅನಿತಾ ಅವರು ಖುಷಿ ವ್ಯಕ್ತಪಡಿಸಿದರು.
ಸಚಿವೆ ನಿರ್ಮಲಾ ಉಟ್ಟ ಇಳಕಲ್ ಸೀರೆಗೆ ಕಸೂತಿ ಮಾಡಿದ್ದು ಧಾರವಾಡದ ಮಹಿಳಾಮಣಿಗಳು
ಒಟ್ಟಿನಲ್ಲಿ ಮಹಿಳೆಯರೇ ತಯಾರಿಸಿದ ವಸ್ತುಗಳನ್ನ ತಾವೇ ತಂದು ಮಾರಾಟ ಮಾಡಿ ಉತ್ತಮ ಲಾಭ ಗಳಿಸುವುದರ ಜೊತೆಗೆ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಅಂತ ವ್ಯಾಪಾರದಲ್ಲಿ ತೊಡಗಿದ್ದು ಇನ್ನೆರಡು ದಿನಗಳ ಕಾಲ ಗಾಂಧಿ ಮೈದಾನದಲ್ಲಿ ಮಹಿಳೆಯರು ವ್ಯಾಪಾರ ಮಾಡಲಿದ್ದಾರೆ.