ಸೈಕ್ಲೋನ್ ಕ್ಯಾರ್ ಪರಿಣಾಮ ಕೊಡಗಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮುಂಜಾನೆಯಿಂದ ಗಾಳಿ ಮಳೆಯಾಗುತ್ತಿದ್ದು, ಸೈಕ್ಲೋನ್ ಕ್ಯಾರ್‌ಗೆ ಜನ ತತ್ತರಿಸಿದ್ದಾರೆ. ಉಡುಪಿ, ಮಂಗಳೂರು ಸೇರಿ ಕರಾವಳಿ ಭಾಗದಲ್ಲಿಯೂ ಸೈಕ್ಲೋನ್ ಎಫೆಕ್ಟ್ ಕಂಡುಬಂದಿದೆ.
ಮಡಿಕೇರಿ(ಅ.25): ಸೈಕ್ಲೋನ್ ಕ್ಯಾರ್ ಪರಿಣಾಮ ಕೊಡಗಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮುಂಜಾನೆಯಿಂದ ಗಾಳಿ ಮಳೆಯಾಗುತ್ತಿದ್ದು, ಸೈಕ್ಲೋನ್ ಕ್ಯಾರ್‌ಗೆ ಜನ ತತ್ತರಿಸಿದ್ದಾರೆ. ಉಡುಪಿ, ಮಂಗಳೂರು ಸೇರಿ ಕರಾವಳಿ ಭಾಗದಲ್ಲಿಯೂ ಸೈಕ್ಲೋನ್ ಎಫೆಕ್ಟ್ ಕಂಡುಬಂದಿದೆ.
ಉಡುಪಿ ಭಾಗದಲ್ಲಿ ಜನರಿಗೆ ಮುನ್ಸೂಚನೆ ನೀಡಲಾಗಿದ್ದು, ಇದೀಗ ಕೊಡಗಿನ ಜನರೂ ಸೈಕ್ಲೋನ್ ಏಟಿಗೆ ತತ್ತರಿಸಿದ್ದಾರೆ. ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಜಿಲ್ಲೆಯಾದ್ಯಂತ ದಿನವಿಡಿ ಮಳೆಯಾಗಿದೆ.
ಉಳ್ಳಾಲದಲ್ಲಿ ಕಡಲು ಬಿರುಸು: ಅಪಾಯದಂಚಿನಲ್ಲಿ ಮನೆಗಳು
ಕ್ಯಾರ್ ಚಂಡಮಾರುತ ಪರಿಣಾಮ ಕೊಡಗಿನಲ್ಲಿ ಭಾರೀ ಮಳೆ ಮುಂದುವರಿದಿದ್ದು, ಜಿಲ್ಲೆಯ ವಿವಿಧೆಡೆ ಮುಂಜಾನೆಯಿಂದ ಗಾಳಿ ಸಹಿತ ಮಳೆಯಾಗುತ್ತಿದೆ.
ಬ್ರಹ್ಮಗಿರಿ ತಪ್ಪಲಿನ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಮಡಿಕೇರಿ ಸುತ್ತಮುತ್ತಲ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ.
ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್ ಕ್ಯಾರ್...?