ಕೊಡಗು ಜಿಲ್ಲೆಯ ವಿವಿಧೆಡೆ ಮಳೆ: ಎರಡನೇ ಬಾರಿ ಭರ್ತಿಯಾಯ್ತು ಹಾರಂಗಿ

By Kannadaprabha News  |  First Published Oct 24, 2019, 12:14 PM IST

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಕೊಡಗಿನ ಪ್ರಮುಖ ಜಲಾಶಯವಾಗಿರುವ ಹಾರಂಗಿ ಜಲಾಶಯ ಭರ್ತಿಯಾಗಿದೆ. ಈ ಮಳೆಗಾಲದಲ್ಲಿ ಹಾರಂಗಿ ಎರಡನೇ ಬಾರಿಗೆ ಭರ್ತಿಯಾಗಿದೆ.


ಮಡಿಕೇರಿ(ಅ.24): ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಭಾರಿ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಾಧಾರಣ ಮಳೆ ಸುರಿಯಿತು. ಉಳಿದಂತೆ ಭಾಗಮಂಡಲ, ತಲಕಾವೇರಿ, ಸುಂಟಿಕೊಪ್ಪ, ಚೆಟ್ಟಳ್ಳಿ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಕೊಡಗಿನ ಪ್ರಮುಖ ಜಲಾಶಯವಾಗಿರುವ ಹಾರಂಗಿ ಜಲಾಶಯ ಭರ್ತಿಯಾಗಿದೆ. ಈ ಮಳೆಗಾಲದಲ್ಲಿ ಹಾರಂಗಿ ಎರಡನೇ ಬಾರಿಗೆ ಭರ್ತಿಯಾಗಿದೆ.

Latest Videos

undefined

ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲು ಹೊರತೆಗೆದ ವೈದ್ಯರು

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ2,859 ಅಡಿಗಳು. ಬುಧವಾರದ ನೀರಿನ ಮಟ್ಟ2,858.12 ಅಡಿಗಳು.ಒಳಹರಿವು 1055 ಕ್ಯುಸೆಕ್‌. ಹೊರ ಹರಿವು ನದಿಗೆ 1150 ಕ್ಯುಸೆಕ್‌. ನಾಲೆಗೆ 500 ಕ್ಯುಸೆಕ್‌.

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 4.68 ಮಿ.ಮೀ. ಮಡಿಕೇರಿ ತಾಲೂಕಿನಲ್ಲಿ 5.90 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 2.40 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 5.75 ಮಿ.ಮೀ ಮಳೆಯಾಗಿದೆ.

KRSನಿಂದ ಕಾವೇರಿ ನದಿಗೆ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

ಮಡಿಕೇರಿ ಕಸಬಾ 13.20, ಸಂಪಾಜೆ 3, ಭಾಗಮಂಡಲ 7.40, ವಿರಾಜಪೇಟೆ ಕಸಬಾ 1.20, ಹುದಿಕೇರಿ 10, ಶ್ರೀಮಂಗಲ 1.20, ಅಮ್ಮತ್ತಿ 2, ಸೋಮವಾರಪೇಟೆ ಕಸಬಾ 3.60, ಶನಿವಾರಸಂತೆ 4.60, ಶಾಂತಳ್ಳಿ 7, ಕೊಡ್ಲಿಪೇಟೆ 4, ಕುಶಾಲನಗರ 2.40, ಸುಂಟಿಕೊಪ್ಪ 12.90 ಮಿ.ಮೀ. ಮಳೆಯಾಗಿದೆ.

click me!