ಕೊಡಗಿನ ಮದುವೆಗಳನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ಆಹಾರ ಪದ್ಧತಿ. ಅಲ್ಲಿನ ಫಂಕ್ಷನ್‌ಗಳ ಪ್ರಮುಖ ಆಕರ್ಷಣೆ ಮದ್ಯ ಮತ್ತು ವಿವಿಧ ಖಾದ್ಯ. ಆದರೆ ಅಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯಿಂದ ಈ ವಿಶೇಷತೆಗೆ ಧಕ್ಕೆಯಾಗಲಿದೆ. ಏನು, ಯಾಕೆ ಅನ್ನೋದು ತಿಳಿಯಲು ಈ ಸುದ್ದಿ ಓದಿ.
ಮಡಿಕೇರಿ(ಅ.25): ಅಬಕಾರಿ ಇಲಾಖೆಯ ಅಧಿಕಾರಿಗಳು ಮದುವೆ ಸಮಾರಂಭದಲ್ಲಿ ಆರ್ಮಿ ಕ್ಯಾಂಟೀನ್ ಲಿಕ್ಕರ್ ಬ್ಯಾನ್ ಮಾಡಬೇಕೆಂದು ನೀಡಿರುವ ಪ್ರಕಟಣೆಗೆ ನಾಪೋಕ್ಲುವಿನಲ್ಲಿ ಖಂಡನೆ ವ್ಯಕ್ತವಾಗಿದೆ.
ಕೊಡಗಿನಲ್ಲಿ ಮದುವೆ, ಮಗುವಿನ ನಾಮಕರಣ ತಿಥಿಗಳಲ್ಲಿ ಮದ್ಯ ಬಳಕೆ ವಾಡಿಕೆಯಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ಮಾಜಿ ಸೈನಿಕರಿದ್ದು, ಅವರ ನಿವೃತ್ತಿ ನಂತರ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ದಿನ ನಿತ್ಯದ ಸಾಮಾನುಗಳು ಮತ್ತು ತಿಂಗಳಿಗೆ ಕಡಿಮೆ ಬೆಲೆಯಲ್ಲಿ ಲಿಕ್ಕರನ್ನು ನೀಡುತ್ತಾ ಬಂದಿದೆ.
ಮನೆಗಳಲ್ಲಿ ಮದ್ಯ ಸಂಗ್ರಹ:
ಮಾಮೂಲಿಯಾಗಿ ಕುಡಿಯುವವರು ಮತ್ತು ಲಿಕ್ಕರ್ ಕುಡಿಯದೇ ಇರುವವರು ತಮ್ಮ ಪಾಲಿಗೆ ಬಂದ ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಿ ತಮ್ಮ ಮಕ್ಕಳ ಮದುವೆ, ಮತ್ತಿತರ ಸಮಾರಂಭಗಳಿಗೆ ಇದುವರೆಗೂ ಉಪಯೋಗಿಸುತ್ತಾ ಬಂದಿದ್ದಾರೆ. ಅದರಂತೆ ಬಡ ವರ್ಗದವರು ತಮ್ಮ ಮಕ್ಕಳ ಮದುವೆ ಸಮಾರಂಭಕ್ಕೆ ಮಾಜಿ ಸೈನಿಕರಿಂದ ಲಿಕ್ಕರ್ ಪಡೆದು ಸಮಾರಂಭ ಮಾಡುತ್ತಿದ್ದಾರೆ.
ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲು ಹೊರತೆಗೆದ ವೈದ್ಯರು
ಈ ಸಂದರ್ಭ, ಕೊಡಗು ಜಿಲ್ಲೆಯ ಅಬಕಾರಿ ಅಧೀಕ್ಷಕರು ಸುತ್ತೋಲೆ ಹೊರಡಿಸಿ ಮದುವೆ ಸಮಾರಂಭಕ್ಕೆ ಬೇರೆ ರಾಜ್ಯದ ಮದ್ಯ ಮತ್ತು ಆರ್ಮಿ ಕ್ಯಾಂಟೀನ್ ಮದ್ಯವನ್ನು ಬಳಸಬಾರದು ಎಂದು ಹೇಳಿರುವುದು ಖಂಡನೀಯ. ನಮ್ಮ ಮದುವೆಗೆ ಕಾಗದ ಇಲ್ಲದೆ ಯಾರೇ ಬಂದರು ಅವರನ್ನು ಅಟ್ಟಾಡಿಸಿ ಹೊರಗೆ ಕಳುಹಿಸಲು ಯುವ ಸೇನೆಯನ್ನು ನೇಮಕ ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆ ಎಚ್ಚರಿಕೆ:
ಸುತ್ತೋಲೆಯನ್ನು ಅಬಕಾರಿ ಇಲಖೆಯವರು ವಾಪಸ್ ಪಡೆಯದಿದ್ದಲ್ಲಿ ಮುಂದೆ ಜಯಕರ್ನಾಟಕ, ಜಿಲ್ಲಾ ರೈತ ಸಂಘ, ಎಲ್ಲಾ ಸಮಾಜಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಜಿನ್ನು ನಾಣಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬ ತಿಮ್ಮಯ್ಯ, ಕೃತಿ, ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಎಚ್ಚರಿಸಿದ್ದಾರೆ.
ಕೊಡಗು ಜಿಲ್ಲೆಯ ವಿವಿಧೆಡೆ ಮಳೆ: ಎರಡನೇ ಬಾರಿ ಭರ್ತಿಯಾಯ್ತು ಹಾರಂಗಿ