
ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಮನೆ ಕ್ಲೀನ್ ಮಾಡುವ ಕೆಲಸ ಶುರುವಾಗುತ್ತದೆ. ಅದರಲ್ಲೂ ಅಡುಗೆಮನೆಯಲ್ಲಿರುವ ಸುಟ್ಟ ತವಾ, ಕಡಾಯಿ ಮತ್ತು ಎಣ್ಣೆಯ ಜಿಡ್ಡು ಹಿಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ದೊಡ್ಡ ಕೆಲ್ಸ. ಅದಕ್ಕೆ ನೀವು ಕೆಮಿಕಲ್ ಬಳಸ್ಬೇಕಾಗಿಲ್ಲ. ಮನೆಯಲ್ಲೇ ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಇಲ್ಲಿದೆ.
ಪಾತ್ರೆಗಳ ಕ್ಲೀನಿಂಗ್ ಶುರುವಾಗ್ತಿದ್ದಂತೆ ಮಾರ್ಕೆಟ್ ನಿಂದ ಜೆಲ್ ತಂದು ಉಜ್ಜಲು ಶುರು ಮಾಡ್ತೇವೆ. ಇದ್ರಿಂದ ಜಿಡ್ಡು ಹೋಗೋದು ಕಷ್ಟ. ಅದ್ರ ಬದಲು ನೀವು ಮನೆಯಲ್ಲೇ ಇದ್ದಿಲಿನಿಂದ ಪಾತ್ರೆ ಕ್ಲೀನ್ ಮಾಡ್ಬಹುದು. ಮೊದಲು ಮರದ ಇದ್ದಿಲಿನ ತುಂಡುಗಳನ್ನು ತೆಗೆದುಕೊಳ್ಳಿ. ಅದರ ಮೇಲೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ. ನಂತರ ಇದ್ದಿಲನ್ನು ಪುಡಿ ಮಾಡಬೇಕು.
ಇದ್ದಿಲಿನ ತುಂಡುಗಳನ್ನು ಗಟ್ಟಿಯಾದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ, ಎಚ್ಚರಿಕೆಯಿಂದ ಸಣ್ಣ ಪುಡಿಯಾಗುವಂತೆ ಅದರ ಮೇಲೆ ಕಲ್ಲಿನಿಂದ ಜಜ್ಜಿ. ನಂತರ ಜರಡಿಯಿಂದ ಸೋಸಿ, ದೊಡ್ಡ ತುಂಡುಗಳನ್ನು ಬೇರ್ಪಡಿಸಿ. ಈಗ ಸಿದ್ಧಪಡಿಸಿದ ಇದ್ದಿಲಿನ ಪುಡಿಗೆ ಸ್ವಲ್ಪ ಉಪ್ಪು, ನಿಂಬೆ ರಸ ಮತ್ತು ಬಿಳಿ ವಿನೆಗರ್ ಸೇರಿಸಿ. ಇವುಗಳನ್ನು ಮಿಕ್ಸ್ ಮಾಡಿದಾಗ ನೊರೆ ಬರುತ್ತದೆ. ನೊರೆ ಕಡಿಮೆಯಾದ ಬಳಿಕ ಮಿಶ್ರಣವನ್ನು ಚೆನ್ನಾಗಿ ಕಲಸಿ.
ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಕಪ್ಪು ಬಣ್ಣದ ಪೇಸ್ಟ್ ಸಿದ್ಧವಾಗುತ್ತದೆ. ಇದನ್ನು ಸ್ವಚ್ಛವಾದ ಪಾತ್ರೆಯಲ್ಲಿ ಇಟ್ಟುಕೊಳ್ಳಬಹುದು. ಈ ಪೇಸ್ಟ್ನ ಸ್ವಲ್ಪ ಪ್ರಮಾಣವನ್ನು ತವೆಯ ಹಿಂಭಾಗದಲ್ಲಿ ಅಥವಾ ಸ್ವಚ್ಛಗೊಳಿಸಬೇಕಾದ ಭಾಗದಲ್ಲಿ ಹಚ್ಚಿ. ನಂತರ ಸ್ಕ್ರಬ್ಬರ್ನಿಂದ ನಿಧಾನವಾಗಿ ಉಜ್ಜಿ. ಇದ್ದಿಲಿನ ಪುಡಿ ಮತ್ತು ಉಪ್ಪು ಮೇಲ್ಮೈಯಲ್ಲಿರುವ ಕೊಳೆ ತೆಗೆಯಲು ಸಹಾಯ ಮಾಡುತ್ತದೆ. ಕೊನೆಯಲ್ಲಿ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.