Natural Remedies: ಮನೆಯಲ್ಲಿ ಕೆಂಪು ಇರುವೆಗಳಿಂದ ತೊಂದರೆಯಾಗುತ್ತಿದೆಯೇ? ಇಂಗು ಮತ್ತು ಡೆಟಾಲ್‌ನಿಂದ ತಯಾರಿಸಿದ ಈ ಹೋಮ್ ಮೇಡ್ ಸ್ಪ್ರೇ ತಯಾರಿಸಿ ಇರುವೆಗಳನ್ನು ಓಡಿಸಲು ಇದು ಸಹಾಯ ಮಾಡುತ್ತದೆ. ಇದನ್ನು ಹೇಗೆ ತಯಾರಿಸುವುದು ಮತ್ತು ಬಳಸುವುದು ನೋಡೋಣ.
ಮನೆಯಲ್ಲಿ ಸಿಕ್ಕಾಪಟ್ಟೆ ಕೆಂಪು ಇರುವೆ ಕಾಟವೆ?
ಬೇಸಿಗೆ, ಮಳೆಗಾಲದಲ್ಲಿ ಮನೆಯೊಳಗೆ ಕಾಡುವ ದೊಡ್ಡ ಸಮಸ್ಯೆ ಎಂದರೆ ಅದು ಕೆಂಪು ಇರುವೆಗಳ ಕಾಟ. ಅವು ಕಚ್ಚಿ ಹಾನಿಯನ್ನುಂಟುಮಾಡುವುದಲ್ಲದೆ, ಆಹಾರವನ್ನು ಹಾಳುಮಾಡುತ್ತವೆ. ಡಬ್ಬಿಯೊಳಗೆ ಇಟ್ಟಾರೂ, ಹೊರಗೆ ಇಟ್ಟರೂ ಸಹ ಇರುವೆ ಎಲ್ಲಾ ಮೂಲೆ ಮೂಲೆಗಳಿಗೂ ಹೋಗಿ ಆಹಾರವನ್ನು ಹಾಳು ಮಾಡುತ್ತವೆ. ಅವುಗಳ ಕಾಟದಿಂದಾಗಿ ಮನೆಯೊಳಗೆ ಏನನ್ನೂ ಸಂಗ್ರಹಿಸಲು ಕಷ್ಟವಾಗುತ್ತದೆ. ಅವುಗಳನ್ನು ಓಡಿಸಲು ವಿವಿಧ ವಸ್ತುಗಳನ್ನು ಬಳಸಿ ನೀವು ಸೋತಿರಬಹುದು. ಈ ಬಾರಿ ನೀವು ಹಿಂಗು ಪುಡಿ ಮತ್ತು ಡೆಟಾಲ್ ಲಿಕ್ವಿಡ್ ಬಳಸಿ ತಯಾರಿಸಬಹುದಾದ ಸ್ಪ್ರೇ ಮಾಡಿ ನೋಡಿ. ಇರುವೆ ಮತ್ತೆ ಯಾವತ್ತೂ ಮನೆಯೊಳಗೆ ಬರೋದಕ್ಕೆ ಸಾಧ್ಯವಿಲ್ಲ. ಮೊದಲಿಗೆ ಇದನ್ನ ಮಾಡೋದು ಹೇಗೆ ಅನ್ನೋದನ್ನು ನೋಡೋಣ,
ಕೆಂಪು ಇರುವೆಗಳನ್ನು ಓಡಿಸಲು ಮನೆಯಲ್ಲಿ ಸ್ಪ್ರೇ ಮಾಡುವುದು ಹೇಗೆ?
ಇರುವೆ ನಿವಾರಕ ಸ್ಪ್ರೇ ಮಾಡಲು, ಅರ್ಧ ಗ್ಲಾಸ್ ನೀರು ತೆಗೆದುಕೊಂಡು, ಅರ್ಧ ಟೀಚಮಚ ಹಿಂಗು ಪುಡಿ ಮತ್ತು ಸ್ವಲ್ಪ ಡೆಟಾಲ್ ಲಿಕ್ವಿಡ್ ಸೇರಿಸಿ.
ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.
ನಿಮ್ಮ ಮನೆಯಲ್ಲಿ ಕೆಂಪು ಇರುವೆಗಳನ್ನು ಓಡಾಡುವಲ್ಲೆಲ್ಲಾ ಈ ಸ್ಪ್ರೇ ಅನ್ನು ಪೂರ್ತಿಯಾಗಿ ಸಿಂಪಡಿಸಿ.
ಕನಿಷ್ಠ ಅರ್ಧ ಘಂಟೆಯವರೆಗೆ ಅದನ್ನು ಹಾಗೆಯೇ ಬಿಡಿ.
ಎಲ್ಲಾ ಕೆಂಪು ಇರುವೆಗಳು ಕಣ್ಮರೆಯಾಗುವುದನ್ನು ನೀವು ಗಮನಿಸಬಹುದು.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ನೈಸರ್ಗಿಕ ನಿವಾರಕಗಳು ಇರುವೆಗಳನ್ನು ಹಿಮ್ಮೆಟ್ಟಿಸಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸುತ್ತದೆ. ಇನ್ನು ಮನೆಯಲ್ಲಿನ ಇರುವೆಗಳನ್ನು ಓಡಿಸಲು ನೀವು ಕೆಮಿಕಲ್ ಬಳಕೆ ಮಾಡುವ ಬದಲಾಗಿ, ಬೇರೆ ಬೇರೆ ರೀತಿಯ ನ್ಯಾಚುರಲ್ ವಿಧಾನಗಳನ್ನು ಸಹ ಬಳಸಬಹುದು.
ನಿಮ್ಮ ಮನೆಗೆ ಪ್ರವೇಶಿಸಿದ ಇರುವೆಗಳನ್ನು ತೊಡೆದುಹಾಕಲು ನೀವು ಇಲ್ಲಿ ಹೇಳಿರುವ ವಿವಿಧ ರೀತಿಯ ಮನೆಮದ್ದುಗಳನ್ನು ಸಹ ಬಳಸಬಹುದು. ಇವುಗಳು ಸಹ ಹೆಚ್ಚು ಎಫೆಕ್ಟಿವ್ ಆಗಿದೆ. ಇರುವೆಗಳನ್ನು ಶೀಘ್ರದಲ್ಲಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಇರುವೆಗಳ ರಂಧ್ರಗಳ ಬಳಿ ಅಥವಾ ಅವುಗಳ ಹಾದಿಗಳಲ್ಲಿ ಸಿಂಪಡಿಸಿ. ದಾಲ್ಚಿನಿಯ ಗಾಢವಾದ ಪರಿಮಳದಿಂದ ಇರುವೆಗಳು ಮತ್ತೆ ಆ ಜಾಗದಲ್ಲಿ ಬರೋದೆ ಇಲ್ಲ. ಇದು ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಪದೇ ಪದೇ ಮಾಡಬೇಕಾಗಿ ಬರುತ್ತದೆ.
ನೀವು ನಿಂಬೆಯನ್ನು ಸಹ ಬಳಸಬಹುದು. ನಿಂಬೆಹಣ್ಣಿನ ಆಮ್ಲೀಯ ಗುಣಗಳು ಇರುವೆಗಳನ್ನು ದಿಗ್ಭ್ರಮೆಗೊಳಿಸಬಹುದು. ಇರುವೆಗಳು ಓಡಾಡುವಲ್ಲಿ ನೀವು ನಿಂಬೆ ಹಣ್ಣಿನ ರಸವನ್ನು ಸ್ಪ್ರೇ ಮಾಡಿ ಅಥವಾ ನಿಂಬೆ ಹಣ್ಣುಗಳನ್ನೇ ಇಡಿ. ನಿಂಬೆಯ ಪರಿಮಳಕ್ಕೆ ಇರುವೆಗಳು ದೂರ ಓಡುತ್ತವೆ.
ಇನ್ನು ಇರುವೆಗಳು ಕರಿಮೆಣಸಿನ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ನಿಮ್ಮ ಮನೆಯಲ್ಲಿ ಇರುವೆಗಳನ್ನು ನೀವು ಎಲ್ಲಿ ನೋಡಿದರೂ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ. ಅದರ ಘಾಟು ವಾಸನೆಗೆ ಇರುವೆಗಳು ಮಾರು ದೂರ ಓಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.