ಕೈ ಕೊಳಕಾಗದಂತೆ ಜಿಡ್ಡಾದ ಚಹಾ ಪಾತ್ರೆ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಟಿಪ್ಸ್!

Published : Jul 24, 2026, 07:06 PM IST
how to clean burnt teapot

ಸಾರಾಂಶ

Kitchen Tips: ಪ್ರತಿದಿನ ಚಹಾ ಮಾಡಿ, ಮಾಡಿ ನಿಮ್ಮ ಚಹಾ ಪಾತ್ರೆ ಕಪ್ಪಾಗಿ, ಜಿಡ್ಡಾದ ಕಲೆಗಳು ಹಾಗೆ ಉಳಿದಿದ್ಯಾ? ಅಯ್ಯೋ ಇದನ್ನ ಯಾರಪ್ಪ ಕ್ಲೀನ್ ಮಾಡೋದು ಎಂದು ಯೋಚನೆ ಮಾಡುತ್ತಿದ್ದರೆ, ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ, ಕೆಲವೇ ಕೆಲವು ನಿಮಿಷಗಳಲ್ಲಿ ಜಿಡ್ಡಾದ ಪಾತ್ರೆಯು ಹೊಸದರಂತೆ ಹೊಳೆಯುತ್ತದೆ.

ಚಹಾ ಮಾಡಿ ಪಾತ್ರೆ ಜಿಡ್ಡಾಗಿದ್ಯಾ?

ಪ್ರತಿಯೊಬ್ಬ ಮಹಿಳೆಯೂ ತನ್ನ ಅಡುಗೆಮನೆಯನ್ನು ಸ್ವಚ್ಛವಾಗಿಡಲು ಬಯಸುತ್ತಾಳೆ; ಆದರೆ ಕೆಲವೊಮ್ಮೆ, ಹಲವಾರು ಪ್ರಯತ್ನಗಳ ಹೊರತಾಗಿಯೂ, ಅಡುಗೆಮನೆಯ ಪಾತ್ರೆಗಳು ಜಿಡ್ಡಾಗಿ ಉಳಿಯುತ್ತವೆ. ಅದರಲ್ಲೂ ಚಹಾ ಪಾತ್ರೆಗಳ ಬಗ್ಗೆ ಹೇಳೋದೆ ಬೇಡ. ಪದೇ ಪದೇ ಚಹಾ ಮಾಡುವುದರಿಂದ, ಪಾತ್ರೆಯಲ್ಲಿ ಸುಟ್ಟ ಕಲೆಗಳು, ಜಿಗುಟು ಎಲ್ಲವೂ ಸೇರುತ್ತದೆ. ಆದರೆ ಇದನ್ನು ಎಷ್ಟೇ ಉಜ್ಜಿದರೂ ಹೋಗೋದೆ ಇಲ್ಲ ಎನ್ನುವ ದೂರು ಹಲವರದು. ನೀವು ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ, ಕೆಲವೇ ನಿಮಿಷದಲ್ಲಿ ಕಲೆಗಳನ್ನು ದೂರ ಮಾಡಿ.

ಅಡಿಗೆ ಸೋಡಾ ಬಳಸಿ

ಅಡುಗೆ ಸೋಡಾವನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ. ನೀವು ಅದನ್ನು ನಿಮ್ಮ ಚಹಾ ಪಾತ್ರೆಯನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ಇದನ್ನು ಮಾಡಲು, ಮೊದಲು ಪಾತ್ರೆಯ ಒಳಭಾಗದಲ್ಲಿ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಡಿಶ್ ವಾಶರ್ ಮತ್ತು ನೀರನ್ನು ಬಳಸಿ ಅದನ್ನು ಸ್ವಚ್ಛಗೊಳಿಸಿ; ಇದು ಪಾತ್ರೆಯಿಂದ ಕೊಳೆಯನ್ನು ತೆಗೆದುಹಾಕುತ್ತದೆ.

ಪಾತ್ರೆಯ ಮೇಲೆ ನಿಂಬೆಹಣ್ಣನ್ನು ಉಜ್ಜಿ

ಕಲೆ ಬಿದ್ದ ಚಹಾ ಪಾತ್ರೆಗಳ ಮೇಲೆ ನಿಂಬೆಹಣ್ಣನ್ನು ಉಜ್ಜುವುದರಿಂದ ಅವುಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಬಹುದು. ಇದನ್ನ ಮಾಡಲು ನೀವು ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಕಲೆ ಬಿದ್ದ ಅಥವಾ ಸುಟ್ಟ ಪಾತ್ರೆಯ ಮೇಲೆ ಉಜ್ಜಿ. ನಂತರ, ಸ್ವಲ್ಪ ಬಿಸಿ ನೀರನ್ನು ಸುರಿಯಿರಿ ಮತ್ತು ಅದನ್ನು ಹಾಗೆಯೇ ಬಿಡಿ; ಇದು ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ.

ವಿನೆಗರ್ ಬಳಸಿ

ಚಹಾ ಕಲೆ ಇರುವ ಅಥವಾ ಸುಟ್ಟ ಜಾಗವನ್ನು ಸ್ವಚ್ಛಗೊಳಿಸಲು, ಅದರಲ್ಲಿ ವಿನೆಗರ್ ಮತ್ತು ಅಡಿಗೆ ಸೋಡಾವನ್ನು ಬೆರೆಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಇದು ಪಾತ್ರೆಯನ್ನು ಸ್ವಲ್ಪ ಸಮಯದಲ್ಲೇ ಸ್ವಚ್ಛಗೊಳಿಸುತ್ತದೆ.

ಉಪ್ಪಿನಿಂದ ಸ್ವಚ್ಛಗೊಳಿಸಿ

ಚಹಾ ಅಥವಾ ಹಾಲಿಗೆ ಬಳಸುವ ಪಾತ್ರೆ ಸುಟ್ಟುಹೋದರೆ, ಅದಕ್ಕೆ ಎರಡು ಚಮಚ ಉಪ್ಪು ಸೇರಿಸಿ, ಪಾತ್ರೆಯನ್ನು ನೀರಿನಿಂದ ತುಂಬಿಸಿ, ಸ್ವಲ್ಪ ದಿಶ್ ವಾಶಿಂಗ್ ಲಿಕ್ವಿಡ್ ಸೇರಿಸಿ ಸ್ವಲ್ಪ ಬೆಚ್ಚಗಾಗಿಸಿ. ಅದನ್ನು ಒಂದು ಗಂಟೆ ಹಾಗೆಯೇ ಬಿಡಿ, ನಂತರ ಅದನ್ನು ಚಮಚದಿಂದ ಉಜ್ಜಿಕೊಳ್ಳಿ. ನಂತರ, ನೀವು ಪಾತ್ರೆಯನ್ನು ಸ್ಕ್ರಬ್ ನಿಂದ ಉಜ್ಜಿ, ಪಾತ್ರೆ ಹೊಸದರಂತೆ ಕ್ಲೀನ್ ಆಗಿ ಪಳ ಪಳ ಹೊಳೆಯುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವದ ಅತ್ಯಂತ ದುಬಾರಿ ಟೀ, ಬಂಗಾರಕ್ಕಿಂತ 30 ಪಟ್ಟು ಹೆಚ್ಚು ಬೆಲೆ; ಏನಿದರ ಸ್ಪೆಷಲ್?
ಬಾಯಲಿಟ್ಟರೆ ಕರಗುವಂತಹ ಸೂಪರ್ ಸಾಫ್ಟ್ ನೀರ್ ದೋಸೆ ಮಾಡಲು 5 ಬೆಸ್ಟ್ ಟಿಪ್ಸ್