
ಬೇಸಿಗೆಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಎಸಿ ಹಾಕುತ್ತೇವೆ, ಅತ್ತ ಗ್ಯಾಸ್ ಸಿಲಿಂಡರ್ ಅಭಾವಕ್ಕೆ ಹೆದರಿ ಇಂಡಕ್ಷನ್ ಸ್ಟೌವ್‌ನಲ್ಲಿ ಅಡುಗೆ ಮಾಡುತ್ತೇವೆ. ಆದರೆ, ಇವೆರಡನ್ನೂ ಒಂದೇ ಸಮಯದಲ್ಲಿ ಆನ್ ಮಾಡಿದರೆ ನಿಮ್ಮ ಮನೆಗೆ ವಿದ್ಯುತ್ ಇಲಾಖೆಯಿಂದ ನೋಟಿಸ್ ಬರಬಹುದು! ಅಷ್ಟೇ ಅಲ್ಲ, ಭಾರಿ ದಂಡ ತೆರಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಯಾಕೆ ಹೀಗಾಗುತ್ತದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಪ್ರತಿ ಮನೆಗೂ ಇಂತಿಷ್ಟು 'ಕಿಲೋವ್ಯಾಟ್' (kW) ಲೋಡ್ ಎಂದು ವಿದ್ಯುತ್ ಇಲಾಖೆ ಅನುಮೋದನೆ ನೀಡಿರುತ್ತದೆ. ನಾವು ಬಳಸುವ ಉಪಕರಣಗಳು ಆ ಮಿತಿಗಿಂತ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯವಾಗಿ ಒಂದು ಇಂಡಕ್ಷನ್ ಸ್ಟೌವ್ ಸುಮಾರು 2 ಕಿಲೋವ್ಯಾಟ್ ವಿದ್ಯುತ್ ಬಳಸಿದರೆ, ಒಂದು ಎಸಿ 1.2 ರಿಂದ 1.5 ಕಿಲೋವ್ಯಾಟ್ ಲೋಡ್ ಎಳೆಯುತ್ತದೆ. ನಿಮ್ಮ ಮನೆಯಲ್ಲಿ ಎರಡು ಎಸಿಗಳಿದ್ದರೆ ಈ ಲೋಡ್ ದ್ವಿಗುಣಗೊಳ್ಳುತ್ತದೆ. ಇದರ ಜೊತೆಗೆ ಫ್ರಿಜ್, ವಾಷಿಂಗ್ ಮೆಷಿನ್ ಸೇರಿದರೆ ನಿಮ್ಮ ಮೀಟರ್ ಓಡುವ ವೇಗ ಕಂಡು ನೀವೇ ಬೆಚ್ಚಿಬೀಳುತ್ತೀರಿ!
ನೀವು ವಿದ್ಯುತ್ ಇಲಾಖೆಗೆ ಘೋಷಿಸಿದ ಲೋಡ್‌ಗಿಂತ ಹೆಚ್ಚಿನ ವಿದ್ಯುತ್ ಅನ್ನು ಸತತವಾಗಿ ಬಳಸುತ್ತಿದ್ದರೆ, ಸ್ಮಾರ್ಟ್ ಮೀಟರ್‌ಗಳ ಕಾಲದಲ್ಲಿ ಇದು ತಕ್ಷಣವೇ ಇಲಾಖೆಯ ಗಮನಕ್ಕೆ ಬರುತ್ತದೆ. ನಿಯಮ ಮೀರಿದ ಬಳಕೆ ಕಂಡುಬಂದಲ್ಲಿ ಮೊದಲು ನೋಟಿಸ್ ನೀಡಲಾಗುತ್ತದೆ, ಆಮೇಲೆ ನೀವು ಅನುಮೋದಿತ ಲೋಡ್‌ಗಿಂತ ಹೆಚ್ಚಿನದನ್ನು ಬಳಸುತ್ತಿದ್ದರೆ ದಂಡದ ರೂಪದಲ್ಲಿ ದೊಡ್ಡ ಮೊತ್ತದ ಬಿಲ್ ನಿಮ್ಮ ಕೈ ಸೇರಬಹುದು.
ಬೇಸಿಗೆಯಲ್ಲಿ ಕೂಲರ್, ಫ್ಯಾನ್, ಎಸಿ ಅನಿವಾರ್ಯ. ಇದಕ್ಕೆ ಇಂಡಕ್ಷನ್ ಸ್ಟೌವ್ ಕೂಡ ಸೇರಿಕೊಂಡರೆ ಮನೆಯ ಒಟ್ಟು ಲೋಡ್ ಕನಿಷ್ಠ 5-6 ಕಿಲೋವ್ಯಾಟ್‌ಗಳಾಗುತ್ತದೆ. ನಿಮ್ಮ ಮನೆಯ ಕನೆಕ್ಷನ್ ಲೋಡ್ ಕಡಿಮೆ ಇದ್ದರೆ, ತಕ್ಷಣವೇ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ 'ಲೋಡ್ ಹೆಚ್ಚಳ'ಕ್ಕಾಗಿ (Load Enhancement) ಅರ್ಜಿ ಸಲ್ಲಿಸಿ. ಆಗ ನೀವು ಯಾವುದೇ ಟೆನ್ಷನ್ ಇಲ್ಲದೆ ಎಸಿ ಮತ್ತು ಇಂಡಕ್ಷನ್ ಎರಡನ್ನೂ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.