Fridge smell: ನಿಮ್ಮ ಮನೆ ಫ್ರಿಜ್‌ ಬಾಗಿಲು ತೆರೆಯುತ್ತಿದ್ದಂಗೆ ಕೆಟ್ಟ ವಾಸನೆ ಬರುತ್ತಾ? ಟೆನ್ಷನ್‌ ಬೇಡ, ಹೀಗೆ ಕ್ಲೀನ್‌ ಮಾಡಿ

Published : Sep 29, 2026, 12:56 PM IST
Fridge Smell

ಸಾರಾಂಶ

ಫ್ರಿಜ್ ಬಾಗಿಲು ತೆರೆಯುತ್ತಿದ್ದಂತೆ ಕೆಲವೊಮ್ಮೆ ಗಬ್ಬು ವಾಸನೆ ಬರಲು ಶುರುವಾಗುತ್ತೆ. ಯಾಕೆ ಫ್ರಿಜ್‌ ವಾಸನೆ ಬರುತ್ತೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ನಾನಾ ಕಾರಣವಿದೆ, ಅದನ್ನು ತೆಗೆಯೋದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಫ್ರಿಜ್‌ ಈಗ ಅತ್ಯಗತ್ಯ ವಸ್ತುಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಜ್ ಇದ್ದೇ ಇದೆ. ಫ್ರಿಜ್‌ ನಲ್ಲಿ ಒಂದಿಷ್ಟು ಆಹಾರ ಪದಾರ್ಥಗಳು ಸದಾ ತುಂಬಿರುತ್ವೆ. ತರಕಾರಿ, ಹಣ್ಣು, ಹಾಲು, ಬೇಯಿಸಿದ ಆಹಾರ ಸೇರಿದಂತೆ ಹಲವು ಆಹಾರಗಳನ್ನು ಅಲ್ಲಿಡ್ತೇವೆ. ಕೆಲವೊಮ್ಮೆ ಇದ್ರಿಂದಾಗಿ ಫ್ರಿಜ್ ತೆರೆದ ತಕ್ಷಣ ವಿಚಿತ್ರವಾದ ವಾಸನೆ ಬರಲು ಶುರುವಾಗುತ್ತದೆ. ಆಹಾರ ಹಾಳಾಗಿದ್ರೆ, ಹಾಲು ಅಥವಾ ಜ್ಯೂಸ್ ಚೆಲ್ಲಿದ್ರೆ, ಗ್ರೇವಿ ಬಿದ್ದಿದ್ರೆ ಅಥವಾ ಯಾವುದೇ ಆಹಾರವನ್ನು ಹೆಚ್ಚು ದಿನ ಫ್ರಿಜ್ನಲ್ಲಿ ಇಟ್ಟಿದ್ರೆ ಅದು ವಾಸನೆ ಬರಲು ಕಾರಣವಾಗುತ್ತದೆ. ಇದೆಲ್ಲವನ್ನು ಕ್ಲೀನ್‌ ಮಾಡಿದ ನಂತ್ರವೂ ವಾಸನೆ ಹೋಗ್ತಿಲ್ಲ ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ.

ಮೊದಲು ಹಾಳಾದ ಆಹಾರ ಹೊರಗೆ ತೆಗೆಯಿರಿ

ಫ್ರಿಜ್‌ ನಿಂದ ವಾಸನೆ ಬರುತ್ತಿದ್ದರೆ ಮೊದಲು ಅದರಲ್ಲಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಚೆಕ್ ಮಾಡಿ. ಹಾಳಾಗಿರುವ ಅಥವಾ ಎಕ್ಸ್ಪೈರಿ ಆಗಿರುವ ಆಹಾರವನ್ನು ತಕ್ಷಣ ಹೊರಗೆ ಹಾಕಿ. ಫ್ರಿಜ್ನಲ್ಲಿ ಇಂತಹ ಆಹಾರ ಹೆಚ್ಚು ದಿನ ಇದ್ರೆ ವಾಸನೆ ಇನ್ನಷ್ಟು ಹರಡಬಹುದು. ಫ್ರಿಜ್ನಲ್ಲಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿಡಿ. ಇದರಿಂದ ಯಾವುದೇ ಆಹಾರವನ್ನು ಮರೆತು ಹೆಚ್ಚು ದಿನ ಇಡುವ ಸಾಧ್ಯತೆ ಕಡಿಮೆಯಾಗುತ್ತದೆ.

ಬೇಕಿಂಗ್ ಸೋಡಾ

ಫ್ರಿಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ ಒಂದು ಚಿಕ್ಕ ಬೌಲ್ನಲ್ಲಿ ಬೇಕಿಂಗ್ ಸೋಡಾ ಹಾಕಿ ಫ್ರಿಜ್ನ ಶೆಲ್ಫ್ನಲ್ಲಿ ಇಡಬಹುದು. ಬೇಕಿಂಗ್ ಸೋಡಾ ಉಳಿದಿರುವ ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಫ್ರೀಜರ್ನಲ್ಲೂ ವಾಸನೆ ಇದ್ದರೆ, ಅಲ್ಲಿ ಪ್ರತ್ಯೇಕವಾಗಿ ಬೇಕಿಂಗ್ ಸೋಡಾ ಇರುವ ಬೌಲ್ ಇಡಬಹುದು. ಆದರೆ ಬೇಕಿಂಗ್ ಸೋಡಾ ಇಡುವ ಮೊದಲು ಫ್ರಿಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಮುಖ್ಯ.

ಶೆಲ್ಫ್ ಮತ್ತು ಡ್ರಾಯರ್ ಸ್ವಚ್ಛಗೊಳಿಸಿ

ಆಹಾರವನ್ನು ಹೊರತೆಗೆದರೆ ಮಾತ್ರ ಫ್ರಿಜ್ ಕ್ಲೀನ್ ಆಗುವುದಿಲ್ಲ. ಶೆಲ್ಫ್, ಡ್ರಾಯರ್ ಮತ್ತು ಅದರ ಮೂಲೆಗಳನ್ನೂ ಚೆನ್ನಾಗಿ ಸ್ವಚ್ಛಗೊಳಿಸಿ. ಇದಕ್ಕಾಗಿ ಉಗುರುಬೆಚ್ಚಗಿನ ನೀರು ಮತ್ತು ಸ್ವಲ್ಪ ಡಿಶ್ ಸೋಪ್ ಬಳಸಬಹುದು. ಮೃದುವಾದ ಬಟ್ಟೆ ಅಥವಾ ಸ್ಪಾಂಜ್ನಿಂದ ಒರೆಸಿ, ನಂತರ ಸ್ವಚ್ಛವಾದ ನೀರಿನಿಂದ ಮತ್ತೊಮ್ಮೆ ಒರೆಸಿ. ಕೊನೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಒಣಗಿಸಿ.

ಫ್ರಿಜ್ ಬಾಗಿಲಿನ ರಬ್ಬರ್ ಸೀಲ್ ಮರೆಯಬೇಡಿ

ಫ್ರಿಜ್ ಬಾಗಿಲಿನ ಒಳಭಾಗದಲ್ಲಿರುವ ರಬ್ಬರ್ ಸೀಲ್ನಲ್ಲೂ ಕೊಳೆ ಮತ್ತು ಆಹಾರದ ಸಣ್ಣ ಕಣಗಳು ಸಿಲುಕಿಕೊಳ್ಳಬಹುದು. ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಮೃದುವಾದ ಡಿಟರ್ಜೆಂಟ್ ಹಾಕಿ, ಮೃದುವಾದ ಬಟ್ಟೆಯಿಂದ ರಬ್ಬರ್ ಸೀಲ್ ಅನ್ನು ಒರೆಸಿ. ನಂತರ ಸ್ವಚ್ಛವಾದ ನೀರಿನಿಂದ ಒರೆಸಿ, ಒಣ ಬಟ್ಟೆಯಿಂದ ಚೆನ್ನಾಗಿ ಒಣಗಿಸಿ.

ನಿಂಬೆ ಕೂಡ ಬಳಸಬಹುದು

ಫ್ರಿಜ್ ಸ್ವಚ್ಛಗೊಳಿಸಿದ ನಂತರವೂ ಸ್ವಲ್ಪ ವಾಸನೆ ಉಳಿದಿದ್ದರೆ ನಿಂಬೆ ಬಳಸಬಹುದು. ನಿಂಬೆ ರಸದಲ್ಲಿ ಬಟ್ಟೆಯನ್ನು ಅದ್ದಿ ಫ್ರಿಜ್ನ ಶೆಲ್ಫ್ಗಳನ್ನು ಒರೆಸಬಹುದು. ಅಥವಾ ನಿಂಬೆಯ ಕೆಲವು ತುಂಡುಗಳನ್ನು ಒಂದು ಚಿಕ್ಕ ಬೌಲ್ನಲ್ಲಿ ಹಾಕಿ ಕೆಲವು ಗಂಟೆಗಳ ಕಾಲ ಫ್ರಿಜ್ನಲ್ಲಿ ಇಡಬಹುದು. ಇದರಿಂದ ಉಳಿದಿರುವ ವಾಸನೆ ಕಡಿಮೆಯಾಗುತ್ತದೆ.

ಕಾಫಿ ಪೌಡರ್ ಕೂಡ ಉಪಯುಕ್ತ

ಫ್ರಿಜ್ನ ವಾಸನೆ ಕಡಿಮೆ ಮಾಡಲು ಬಳಸಿದ ಕಾಫಿ ಪೌಡರ್ ಅಥವಾ ಕಾಫಿ ಗ್ರೌಂಡ್ಸ್ ಅನ್ನು ಒಂದು ಚಿಕ್ಕ ತೆರೆದ ಬೌಲ್ನಲ್ಲಿ ಹಾಕಿ ಫ್ರಿಜ್ನಲ್ಲಿ ಇಡಬಹುದು. ಇದು ಫ್ರಿಜ್ನಲ್ಲಿರುವ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಸನೆ ಬರದಂತೆ ಏನು ಮಾಡಬೇಕು?

ಫ್ರಿಜ್ನಲ್ಲಿ ಇಡುವ ಆಹಾರವನ್ನು ಯಾವಾಗಲೂ ಮುಚ್ಚಿಡಿ. ಯಾವುದಾದರೂ ಆಹಾರ, ಹಾಲು ಅಥವಾ ಜ್ಯೂಸ್ ಚೆಲ್ಲಿದರೆ ತಕ್ಷಣ ಸ್ವಚ್ಛಗೊಳಿಸಿ. ಕನಿಷ್ಠ ತಿಂಗಳಿಗೊಮ್ಮೆ ಫ್ರಿಜ್ ಮತ್ತು ಫ್ರೀಜರ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಫ್ರಿಜ್ನಲ್ಲಿ ಇಟ್ಟಿರುವ ಆಹಾರದ ಎಕ್ಸ್ಪೈರಿ ದಿನಾಂಕವನ್ನು ಆಗಾಗ್ಗೆ ಪರಿಶೀಲಿಸಿ. ಹಾಳಾದ ಆಹಾರ ಕಂಡುಬಂದರೆ ತಕ್ಷಣ ಹೊರಗೆ ತೆಗೆಯಿರಿ. ನಿಮ್ಮ ಫ್ರಿಜ್ನಲ್ಲಿ ಏರ್ ಫಿಲ್ಟರ್ ಇದ್ದರೆ, ಕಂಪನಿಯ ಸೂಚನೆಯಂತೆ ಅದನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಿ. ಅದರ ಜೊತೆಗೆ ಫ್ರಿಜ್ ಅನ್ನು ಸರಿಯಾದ ತಾಪಮಾನದಲ್ಲಿ ಇಡುವುದೂ ಮುಖ್ಯ. ಫ್ರಿಜ್‌ ಕ್ಲೀನ್‌ ಮಾಡುವಾಗ ಸ್ವಿಚ್‌ ತೆಗೆದು ಕ್ಲೀನ್‌ ಮಾಡಲು ಮರೆಯಬೇಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೆಸರುಬೇಳೆ+ರಾಗಿ ದೋಸೆ: ಕೆಲವೇ ನಿಮಿಷಗಳಲ್ಲಿ ಫಟಾಫಟ್ ರೆಡಿ ಆಗುತ್ತೆ, ಟ್ರೆಂಡಿಂಗ್‌ನಲ್ಲಿರೋ ಈ ಹೊಸ ರೆಸಿಪಿ ಇಲ್ಲಿದೆ
ದೋಸೆ, ಇಡ್ಲಿ ಹಿಟ್ಟಿಗೆ ಮಿಕ್ಸರ್ ಸೂಕ್ತವೋ ಅಥವಾ ವೆಟ್ ಗ್ರೈಂಡರ್ರೋ? ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ!