
ದೂರದ ಸ್ಥಳಗಳಿಗೆ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಬಸ್‌ಗಳು ರಾತ್ರಿ ಹೊತ್ತು ಡಾಬಾದಲ್ಲಿ ಊಟಕ್ಕೆ ನಿಲ್ಲಿಸುತ್ತವೆ. ನೀವು ಡಾಬಾದಲ್ಲಿ ಊಟಕ್ಕೆ ಹೋಗಿದ್ದರೆ ನಿಮಗೆ ಇದರ ಅನುಭವ ಆಗಿರುತ್ತದೆ. ಸಾಮಾನ್ಯ ಹೋಟೆಲ್‌ಗಳಲ್ಲಿರುವಂತೆ ಊಟ ಸಿಗುವುದಿಲ್ಲ. ಅಲ್ಲಿನ ಆಹಾರದ ಮೇನು ಬೇರೆಯೇ ಇರುತ್ತದೆ. ಸಾಮಾನ್ಯವಾಗಿ ಅಲ್ಲಿ ಮಾಂಸಾಹಾರ ಹೆಚ್ಚು. ನೀವು ಸಸ್ಯಾಹಾರಿಯಾಗಿದ್ದ ರೋಟಿ ದಾಲ್, ಚಪಾತಿ ದಾಲ್ ಆರ್ಡರ್ ಮಾಡುತ್ತೀರಿ. ಇಲ್ಲಿನ ದಾಲ್ ಅದೆಷ್ಟು ರುಚಿ, ಸ್ವಾದದಿಂದ ಕೂಡಿರುತ್ತದೆ ಎಂದರೆ, ಮನೆಯಲ್ಲಿ ದಿನಾ ಬೇಳೆ ಸಾರು, ಗಟ್ಟಿ ಬೇಳೆ ಮಾಡಿದರೂ ಈ ರುಚಿ ಏಕೆ ಬರುವುದಿಲ್ಲ ಎಂದು ಯೋಚಿಸಿಯೇ ಇರುತ್ತೀರಿ. ಡಾಬಾ ಸ್ಟೈಲ್ ದಾಲ್ ತಡ್ಕಾ ಮನೆಯಲ್ಲಿ ಸವಿಬೇಕು ಅನ್ನೋರಿಗೆ ಇಲ್ಲಿದೆ ರೆಸಿಪಿ, ಹೇಗೆ ಮಾಡಬೇಕು ಅನ್ನೋದನ್ನು ಇಲ್ಲಿ ತಿಳಿಯಿರಿ.
ಬಿಸಿ ದಾಲ್ ತಡ್ಕಾ.. ಇದರ ಹೆಸರು ಕೇಳಿದರೆನೇ ಬಾಯಲ್ಲಿ ನೀರು ಬರುತ್ತದೆ. ದಾಲ್ ತಡ್ಕಾ ಹೆಚ್ಚಾಗಿ ಉತ್ತರ ಭಾರತೀಯರ ನೆಚ್ಚಿನ ಆಹಾರವಾಗಿದೆ. ಆದರೆ ದಕ್ಷಿಣ ಭಾರತೀಯರ ಮನೆಯಲ್ಲಿ ಬೇಳೆ ಮಾಡುತ್ತಾರಾದರೂ ಬಿಸಿ ದಾಲ್ ತಡ್ಕಾ ರೀತಿ ರುಚಿ, ಸ್ವಾದ ಇರಲ್ಲ. ಡಾಬಾ ಸ್ಟೈಲ್‌ನಲ್ಲಿ ಮನೆಯಲ್ಲಿ ಹೇಗೆ ಮಾಡಬಹುದು ನಿಮಗೆ ಈ ಲೇಖನ ಓದಿದ ಮೇಲೆ ತಿಳಿಯುತ್ತೆ. ಮೇಲಾಗಿ ಇದನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಆದರೆ ಕೆಲವೊಮ್ಮೆ ಮನೆಯಲ್ಲಿ ತಯಾರಿಸಿದ ದಾಲ್ ರೆಸ್ಟೋರೆಂಟ್‌ಗಳಲ್ಲಿ ಕಂಡುಬರುವ ದಾಲ್‌ನಂತೆಯೇ ರುಚಿಯನ್ನು ಹೊಂದಿರುವುದಿಲ್ಲ. ಕೆಲವೊಮ್ಮೆ ದಾಲ್ ತುಂಬಾ ದಪ್ಪವಾಗಿರುತ್ತದೆ, ಕೆಲವೊಮ್ಮೆ ಅದು ಮೃದುವಾಗಿ ಕಾಣುತ್ತದೆ.
ವಾಸ್ತವವಾಗಿ ದಾಲ್ ತಡ್ಕಾ ಮಾಡುವಾಗ ಒಂದು ಸಣ್ಣ ತಪ್ಪು ಮಾಡಿದ್ರೂ ಅದರ ರುಚಿಯನ್ನ ಹಾಳುಮಾಡುತ್ತದೆ. ನೀವು ಮನೆಯಲ್ಲಿ ರೆಸ್ಟೋರೆಂಟ್ ಶೈಲಿಯ ದಾಲ್ ತಡ್ಕಾ ಮಾಡುವುದಾದರೆ ಕೆಲವು ಸಣ್ಣ ತಪ್ಪುಗಳನ್ನು ತಪ್ಪಿಸಿ.
ಬಹಳಷ್ಟು ಜನ ಆತುರದಲ್ಲಿ ಬೇಳೆಗಳನ್ನು ನೇರವಾಗಿ ಪ್ರೆಶರ್ ಕುಕ್ಕರ್‌ಗೆ ಹಾಕಿ ಬೇಯಿಸುತ್ತಾರೆ. ಇದು ಮೊದಲ ತಪ್ಪು. ಕೆಲವು ಧಾನ್ಯಗಳು ಅತಿಯಾಗಿ ಬೇಯಿಸಿದರೆ, ಇನ್ನು ಕೆಲವು ಸ್ವಲ್ಪ ಕಡಿಮೆ ಬೇಯಿಸಿರುತ್ತವೆ. ಬೇಳೆಯನ್ನು ಬೇಯಿಸುವ ಮೊದಲು 30 ನಿಮಿಷದಿಂದ 1 ಗಂಟೆಯವರೆಗೆ ನೀರಿನಲ್ಲಿ ನೆನೆಸುವುದರಿಂದ ಅವು ಊದಿಕೊಳ್ಳಲು ಮತ್ತು ಹೆಚ್ಚು ಸುಲಭವಾಗಿ ಬೇಯಲು ಸಾಧ್ಯವಾಗುತ್ತದೆ. ಇದು ಬೇಳೆಗೆ ಕ್ರೀಮಿ ಆಗಿರುವಂತೆ ಕಾಣುತ್ತದೆ. ಇದರೊಂದಿಗೆ ಮಸಾಲೆಗಳ ಸುವಾಸನೆ ಚೆನ್ನಾಗಿ ಹೀರಿಕೊಳ್ಳೂತ್ತದೆ.
ದಾಲ್ ತಡ್ಕಾ ತನ್ನ ರುಚಿಯನ್ನು ಹೆಚ್ಚಿಸಲು ಒಂದೇ ರೀತಿಯ ಬೇಳೆ ಬಳಸಬೇಕಾಗಿಲ್ಲ. ರೆಸ್ಟೋರೆಂಟ್ ಶೈಲಿಯ ಸುವಾಸನೆ ಬರಲು ಹಲವಾರು ಬೇಳೆಗಳ ಮಿಶ್ರಣ ಮಾಡಿ ಬಳಸಲಾಗುತ್ತದೆ. ಬಳಸಲಾಗುತ್ತದೆ. ನೀವು ಅರ್ಹರ್, ಹೆಸರುಬೇಳೆ ಮತ್ತು ಮಸೂರ್ ಬೇಳೆಯನ್ನು ಮಿಶ್ರ ಮಾಡಬಹುದು. ಬೇಳೆಯನ್ನು ಸರಿಸುಮಾರು 2:1:1 ಅನುಪಾತದಲ್ಲಿ ಬೆರೆಸುವುದರಿಂದ ರುಚಿ ಮತ್ತು ವಿನ್ಯಾಸ ಎರಡು ಚೆನ್ನಾಗಿರುತ್ತದೆ. ಇದು ಕೆನೆಭರಿತ ಮತ್ತು ಹೆಚ್ಚು ರುಚಿಕರವಾಗುವಂತೆ ಮಾಡುತ್ತೆ.
ದಾಲ್ ತಡ್ಕಾದಲ್ಲಿ ಒಗ್ಗರಣೆ ಹಾಕುವುದು ಬಹಳ ಮುಖ್ಯ. ಆದರೆ ಸರಿಯಾದ ಸಮಯದಲ್ಲಿ ಅದನ್ನು ಸೇರಿಸುವುದು ಅಷ್ಟೇ ಮುಖ್ಯ. ಬಹಳಷ್ಟು ಜನ ತಪ್ಪು ಮಾಡೋದು ಇಲ್ಲೇ. ದಾಲ್ ಬೇಯುತ್ತಿರುವಾಗಲೇ ಒಗ್ಗರಣೆ ಹಾಕಿಬಿಡುತ್ತಾರೆ. ಈ ರೀತಿ ಮಾಡುವುದರಿಂದ ದಾಲ್‌ನ ರುಚಿ, ಸುವಾಸನೆ ಕಡಿಮೆ ಆಗುತ್ತದೆ. ದಾಲ್ ಸಂಪೂರ್ಣವಾಗಿ ಬೇಯಿಸಿದ ನಂತರ ಅದನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಡಿ, ನಂತರ ತಾಜಾ ಒಗ್ಗರಣೆ ಸೇರಿಸಿ. ಬಿಸಿ ದಾಲ್‌ಗೆ ಒಗ್ಗರಣೆ ಸೇರಿಸಿದಾಗ ತುಪ್ಪ, ಜೀರಿಗೆ, ಬೆಳ್ಳುಳ್ಳಿ ಮತ್ತು ಮಸಾಲೆಗಳ ಸುವಾಸನೆಯಿಂದ ಕೂಡಿರುತ್ತದೆ.
ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಒಗ್ಗರಣೆಗೆ ಸುವಾಸನೆ ಹೆಚ್ಚಿಸಲು ಬಳಸಲಾಗುತ್ತೆ. ಆದರೆ ಹೆಚ್ಚಾಗಬಾರದು. ಒಂದು ಬಾರಿ ಒಗ್ಗರಣೆಗೆ ಸುಮಾರು 4-5 ಬೆಳ್ಳುಳ್ಳಿ ಎಸಳು, ಒಂದು ಹಸಿರು ಮೆಣಸಿನಕಾಯಿ ಸಾಕು. ಒಗ್ಗರಣೆಯಲ್ಲಿ ತುಪ್ಪ ಮತ್ತು ಮಸಾಲೆ ಸರಿಯಾದ ಪ್ರಮಾಣದಲ್ಲಿರಬೇಕು.
ದಾಲ್ ತಡ್ಕಾ ಪೇಸ್ಟ್ ತರಹದಷ್ಟು ದಪ್ಪವಾಗಿರಬಾರದು. ದಾಲ್ ಬೇಯಿಸುವಾಗ, ಕೆನೆ ರೀತಿಯಲ್ಲಿರುವ ನೊಡಿಕೊಳ್ಳಬೇಕು. ಇದರೊಂದಿಗೆ ಸುರಿಯಲು ಸುಲಭವಾಗುವಂತೆ ನೀರನ್ನು ಸೇರಿಸಿದ ನಂತರ ಕಡಿಮೆ ಉರಿಯಲ್ಲಿ ಬೆರೆಸಿ. ಸ್ವಲ್ಪ ಸಮಯದವರೆಗೆ ನಿಂತ ನಂತರ ದಾಲ್ ತುಂಬಾ ದಪ್ಪವಾಗಿದ್ದರೆ ಸ್ವಲ್ಪ ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಗ ಡಾಬಾ ಸ್ಟೈಲ್ ರುಚಿಯಾದ ದಾಲ್ ಸಿದ್ಧವಾಗುತ್ತದೆ.
ದಾಲ್ ತಡ್ಕಾದ ರುಚಿ ಮುಖ್ಯವಾಗಿ ಅದರ ಒಗ್ಗರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ತುಪ್ಪದ ಗುಣಮಟ್ಟ ಸರಿಯಾಗಿರಬೇಕು. ಹಳೆಯ ಅಥವಾ ಕಳಪೆ ಗುಣಮಟ್ಟದ ತುಪ್ಪವು ತಡ್ಕಾಗೆ ಬಳಸಬಾರದು ಇದು ಕಟುವಾಸನೆ ನೀಡುತ್ತದೆ, ಇದು ದಾಲ್‌ನ ಒಟ್ಟಾರೆ ರುಚಿಯನ್ನು ಹಾಳು ಮಾಡುತ್ತದೆ. ಒಗ್ಗರಣೆಗೆ ತಾಜಾ, ಉತ್ತಮ ಗುಣಮಟ್ಟದ ತುಪ್ಪವನ್ನು ಬಳಸಿ. ನೀವು ತುಪ್ಪವನ್ನು ಬಳಸದಿದ್ದರೆ ಸಾಸಿವೆ ಎಣ್ಣೆಯನ್ನು ಸಹ ಬಳಸಬಹುದು. ಹಸಿ ವಾಸನೆ ಕಡಿಮೆಯಾಗುವವರೆಗೆ ಅದನ್ನು ಬಿಸಿ ಮಾಡಿ.
ಜೀರಾ ಅನ್ನದೊಂದಿಗೆ ದಾಲ್ ತಡ್ಕಾ ಸೂಪರ್ ಕಾಂಬಿನೇಷನ್. ಇವೆರಡು ಒಟ್ಟಿಗೆ ಬಡಿಸಿದಾಗ ಇನ್ನೂ ರುಚಿಕರವಾಗಿರುತ್ತದೆ. ತಂದೂರಿ ರೊಟ್ಟಿ, ಬೆಳ್ಳುಳ್ಳಿ ನಾನ್, ರೋಟಿ ದಾಲ್ ಸೂಪರ್ ಟೇಸ್ಟಿ. ದಾಲ್ ಹೆಚ್ಚು ಬೇಯಿಸಿದರೆ ಮತ್ತು ತುಂಬಾ ದಪ್ಪವಾಗಿದ್ದರೆ ಅಥವಾ ಜಿಗುಟಾಗಿದ್ದರೆ ಸ್ವಲ್ಪ ನೀರು ಸೇರಿಸಿ ನಿಧಾನವಾಗಿ ಕಲಸಿ. ಮುಂದಿನ ಬಾರಿ ನೀವು ದಾಲ್ ಮಾಡುವಾಗ ಈ ಸರಳ ಸಲಹೆಗಳನ್ನ ನೆನಪಲ್ಲಿಟ್ಟುಕೊಂಡರೆ ನೀವು ಮನೆಯಲ್ಲೇ ಡಾಬಾ ಶೈಲಿಯ ದಾಲ್ ತಡ್ಕ ಸಚಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.