ಚುನಾವಣೆ: ಮದ್ಯ ವಹಿವಾಟು ನಿಷೇಧ

Published : Apr 07, 2021, 11:51 AM IST
ಚುನಾವಣೆ:  ಮದ್ಯ ವಹಿವಾಟು ನಿಷೇಧ

ಸಾರಾಂಶ

ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅನಂತಪುರಂನಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿ ಮದ್ಯ ವಹಿವಾಟು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತುಮಕೂರು (ಏ.07):  ಹೊರ ರಾಜ್ಯವಾದ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಏಪ್ರಿಲ್‌ 8ರಂದು ನಡೆಯಲಿರುವ ಮಂಡಲ್‌ ಪರಿಷತ್‌ ಮತ್ತು ಜಿಲ್ಲಾ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿಮದ್ಯ ವಹಿವಾಟು ನಿಷೇಧಿಸಲಾಗಿದೆ.

 ಚುನಾವಣಾ ದಿನಾಂಕದ 48 ಗಂಟೆಗಳ ಮೊದಲು ಅಂದರೆ ಏಪ್ರಿಲ್‌ 6ರ ಸಂಜೆ 5 ಗಂಟೆಯಿಂದ ಏ. 8ರ ಸಂಜೆ 5 ಗಂಟೆಯವರೆಗೆ ಮತ್ತು ಮತ ಎಣಿಕೆ ನಡೆಯುವ 10ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಟೆಯವರೆಗೆ ನಿಷೇಧಿಸಲಾಗಿದೆ.

ಮದ್ಯದ ಬಾಟಲಿಗೆ ವಿಷ ಬೆರೆಸಿ ಮಗ : ತಂದೆ ಕೊಲ್ಲಲು ಮಾಡಿದ ಕೆಟ್ಟ ಪ್ಲಾನ್ ..

 ಅನಂತಪುರಂ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿಭಾಗದ ತುಮಕೂರು ಜಿಲ್ಲೆಯ 5 ಕಿ.ಮೀ ತ್ರಿಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳ ವಹಿವಾಟು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್‌.ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

PREV
click me!

Recommended Stories

NWKRTC: 120 ಹೆಚ್ಚುವರಿ ವಿಶೇಷ ಸಾರಿಗೆ ಕಾರ್ಯಾಚರಣೆ: ಹುಬ್ಬಳ್ಳಿ, ಬಾಗಲಕೋಟೆ, ಗದಗ ಹಾವೇರಿ
ರಾಜ್ಯದಲ್ಲಿ ಸಾರಿಗೆ ನಿಗಮ, ಮೆಟ್ರೋ, ವಿದ್ಯುತ್‌, ಜಲಮಂಡಳಿ; ಈಗ ಹಾಲು ಒಕ್ಕೂಟ, ಎಲ್ಲವೂ ನಷ್ಟದಲ್ಲಿದ್ದರೆ ಲಾಭದಲ್ಲಿರುವ ಸಂಸ್ಥೆ ಯಾವುದು?