ದೇವೇಗೌಡರ ಆರೋಗ್ಯಕ್ಕಾಗಿ ಮೃತ್ಯುಂಜಯ ಹೋಮ

By Kannadaprabha News  |  First Published Apr 7, 2021, 11:22 AM IST

ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರು ಶೀಘ್ರ ಚೇತರಿಸಿಕೊಳ್ಳಲು ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಲಕ್ಷ್ಮಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ ನಡೆಸಲಾಯಿತು


ಕೊರಟಗೆರೆ (ಏ.07) :  ರೈತಪರ ಹೋರಾಟಗಾರರು, ತುಳಿತಕ್ಕೆ ಒಳಗಾದ ಸಮುದಾಯದ ಪರ ಸದಾ ನಿಲ್ಲುವ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಆರೋಗ್ಯಕ್ಕಾಗಿ  ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಕೋರಿದರು.

ಅವರು ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕೋಳಾಲ ಜಿ.ಪಂ ಸದಸ್ಯ ಶಿವರಾಮಯ್ಯ ಅವರು ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ರವರ ಆರೋಗ್ಯ ಸುಧಾರಣೆಗೆಗಾಗಿ ಮಹಾಗಣಪತಿ ಮತ್ತು ಮೃತ್ಯುಂಜಯ ಹೋಮ ಧಾರ್ಮಿಕ ಕಾರ್ಯದಲ್ಲಿ ​ವ್ಯಸಾನಿಧ್ಯವಹಿಸಿ ಮಾತನಾಡಿ, ಇಡೀ ದೇಶದಲ್ಲೇ ರೈತರಪರ ಪ್ರಧಾನಿ ಎಂದು ಬಿಂಬಿತರಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಕೊರೋನಾ ಬಂದಿದ್ದು, ಅವರು ಮತ್ತು ಅವರ ಪತ್ನಿ ಶೀಘ್ರವಾಗಿ ಗುಣವಾಗಲೆಂದು ಈ ಮಹಾಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Tap to resize

Latest Videos

ಕೊರೊನಾದಿಂದ ಚೇತರಿಸಿಕೊಂಡ ದೇವೇಗೌಡ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್ ...

ಮಾಜಿ ಶಾಸಕ ಸುದಾಕರ್‌ಲಾಲ್‌ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಕೊರೋನಾ ರೋಗದಿಂದ ಆಸ್ಪತ್ರೆಗೆ ಸೇರಿದ ಸುದ್ದಿ ತಿಳಿದ ತಕ್ಷಣ ಮುಖಂಡರು ಮತ್ತು ಕಾರ್ಯಕರ್ತರು ಆತಂಕಕ್ಕೆ ಒಳಗಾಗಿದೆವು, ಅದಕ್ಕಾಗಿ ತಾಲ್ಲೂಕಿನ ಪಕ್ಷದ ಎಲ್ಲರು ಮಹಾ ಮೃತ್ಯಂಜಯ ಹೋಮವನ್ನು  ಮಾಡಿ ಪಾರ್ಥಿಸಿದ್ದಾಗಿ ಹೇಳಿದರು. 

ಕೋಳಾಲ ಜಿ.ಪಂ ಸದಸ್ಯ ಶಿವರಾಮಯ್ಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಕ್ಷದ ತುಮಕೂರು ನಗರಾಧ್ಯಕ್ಷ ನರಸೇಗೌಡ, ಪ್ರದಾನಕಾರ್ಯದರ್ಶಿ ಮಹಾಲಿಂಗಪ್ಪ, ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮಣ್‌, ಗ್ರಾಪಂ ಅಧ್ಯಕ್ಷ ಶಿವಕುಮಾರ್‌, ಪಪಂ ಸದಸ್ಯರಾದ ಲಕ್ಷ್ಮೇನಾರಾಯಣ, ಪುಟ್ಟನರಸಯ್ಯ, ನಟರಾಜು, ಮಾಜಿ ಸದಸ್ಯ ಕೆ.ಎಲ್‌ ಆನಂದ್‌, ತಾ.ಪಂ ಮಾಜಿ ಸದಸ್ಯ ಪ್ರಕಾಶ್‌, ಮುಖಂಡರುಗಳಾದ ರಂಗರಸಯ್ಯ, ರಮೇಶ್‌, ಸೈಫುಲ್ಲಾ, ರವಿವರ್ಮ, ರಾಮಕೃಷ್ಣಪ್ಪ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

click me!