Mangaluru Attack : ಮಂಗಳೂರಲ್ಲಿ ಇಬ್ಬರು ಅನ್ಯಧರ್ಮೀಯ ಯುವಕರಿಗೆ ಥಳಿತ : ಯುವತಿಯರ ಜತೆ ತೆರಳುತ್ತಿದ್ದಾಗ ಹಲ್ಲೆ

By Kannadaprabha News  |  First Published Dec 11, 2021, 6:29 AM IST
  •  ಮಂಗಳೂರಲ್ಲಿ ಇಬ್ಬರು ಅನ್ಯಧರ್ಮೀಯ ಯುವಕರಿಗೆ ಥಳಿತ
  • ಯುವತಿಯರ ಜತೆ ತೆರಳುತ್ತಿದ್ದಾಗ ಹಲ್ಲೆ

 ಮಂಗಳೂರು (ಡಿ.11):  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ (Girl) ಜತೆಗಿದ್ದ ಕಾಲೇಜು ಯುವಕ (College youth) ಸೇರಿ ಇಬ್ಬರು ಅನ್ಯಧರ್ಮೀಯ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ(Mangaluru) ವರದಿಯಾಗಿದೆ. ಘಟನೆಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ 1: ಮಂಗಳೂರಿನ ಹೊರವಲಯದ ನೀರುಮಾರ್ಗ ಪಡು ಪೋಸ್ಟ್‌ ಆಫೀಸ್‌ ಬಳಿ ಯುವತಿಯೊಬ್ಬಳನ್ನು ಭಿನ್ನ ಧರ್ಮದ (Religion) ಯುವಕ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಯುವಕರ ತಂಡವೊಂದು ತಡೆದು ಗಂಭೀರ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅಡ್ಯಾರ್‌ ಪದವಿನ ಯುವಕ (Youth) ತನ್ನ ಕಾರಿನಲ್ಲಿ ಯುವತಿ ಜತೆಗೆ ಮಲ್ಲೂರು ಎಂಬ ಕಡೆಗೆ ತೆರಳುತ್ತಿದ್ದ. ದಾರಿಮಧ್ಯೆ ಯುವಕರ ತಂಡವೊಂದು ಕಾರು ತಡೆದು ಯುವತಿ ಮತ್ತು ಯುವಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಯುವಕನ ಮೇಲೆ ಬಾಟಲಿಗಳಿಂದ ಗಂಭೀರ ಹಲ್ಲೆ ನಡೆಸಿದೆ. ಯುವಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ (Mangaluru) ಪ್ರಕರಣ ದಾಖಲಾಗಿದೆ.

Tap to resize

Latest Videos

ಘಟನೆ 2: ಇನ್ನೊಂದು ಪ್ರಕರಣದಲ್ಲಿ ಬಸ್‌ನಲ್ಲಿ (Bus) ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಖಾಸಗಿ ಬಸ್‌ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕನಿಗೆ ಥಳಿಸಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಾಮಂಜೂರು ಬಳಿಯ ಖಾಸಗಿ ಕಾಲೇಜಿನ (College) ವಿದ್ಯಾರ್ಥಿ ಜೋಡಿ ಉಡುಪಿಗೆ ತೆರಳಲು ಬಸ್‌ನಲ್ಲಿ ಕೂತಿದ್ದರು. ಈ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಬಸ್‌ ನಿರ್ವಾಹಕ ಮತ್ತು ಯುವಕರ ತಂಡ ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕ ಶಿವಮೊಗ್ಗ ಮೂಲದವನಾಗಿದ್ದು, ವಿದ್ಯಾರ್ಥಿನಿ ಉಡುಪಿ ಮೂಲದವಳು. ಊರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಸ್ಸಿನಲ್ಲಿ ಕರೆದೊಯ್ದು ಅತ್ಯಾಚಾರ : 

ಮದುವೆ (Marriage) ಆಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ (Teen Girl) ಮೇಲೆ ಅತ್ಯಾಚಾರ (Rape) ಎಸಗಿದ ಆರೋಪ ಮಂಗಳೂರಿನ (Mangaluru) 1ನೇ ತ್ವರಿತಗತಿ ಸೆಷನ್ಸ್‌ ನ್ಯಾಯಾಲಯದಲ್ಲಿ (Court) ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನ.27ರಂದು ಪ್ರಕಟವಾಗುವ ಸಾಧ್ಯತೆ ಇದೆ. ಬೆಳ್ತಂಗಡಿ (Belthangadi) ತಾಲೂಕು ಕೇಪು ಗ್ರಾಮದ ನೀರ್ಕಜೆಯ ನಿತಿನ್‌ (27) ಅಪರಾಧಿ. 2014ರಲ್ಲಿ ವಿಟ್ಲ ಸಮೀಪದ 17 ವರ್ಷ ಪ್ರಾಯದ ದಲಿತ ಸಮುದಾಯದ ಬಾಲಕಿಯನ್ನು (Girl) ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ (rape) ಎಸಗಿದ ಆರೋಪ ಇದೀಗ ಸಾಬೀತಾಗಿದೆ.

ಖಾಸಗಿ ಬಸ್‌ ಕಂಡಕ್ಟರ್‌ (Private Bus Conductor) ಆಗಿದ್ದ ನಿತಿನ್‌ಗೆ ಕಾಲೇಜಿಗೆ (College) ಹೋಗುತ್ತಿದ್ದ 17 ವರ್ಷದ ದ್ವಿತೀಯ ಪಿಯುಸಿ (PUC) ಓದುತ್ತಿದ್ದ ವಿದ್ಯಾರ್ಥಿನಿಯ (Student) ಪರಿಚಯವಾಗಿತ್ತು. 2014ರ ಜುಲೈ 24ರಂದು ಕೆಎಸ್‌ಆರ್‌ಟಿಸಿ (KSRTC) ಸ್ಲೀಪರ್‌ ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದನು. ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬೆಂಗಳೂರಿಗೆ ತಲುಪಿದ ಬಳಿಕ ಅಲ್ಲಿ 2 ದಿನ ಸುತ್ತಾಡಿದ್ದರು. ಈ ಮಧ್ಯೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ (Police Station) ನಾಪತ್ತೆ ಪ್ರಕರಣವನ್ನು ಪೋಷಕರು ದಾಖಲಿಸಿದ್ದರು.

ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ನಿತಿನ್‌ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲು ನ. 27ರಂದು ದಿನಾಂಕ ನಿಗದಿಪಡಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.

click me!