Karnataka Rains: ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!

By Kannadaprabha News  |  First Published Dec 10, 2021, 2:48 PM IST

*  ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು
*  ಅಕಾಲಿಕ ಮಳೆಯಿಂದ ಕೊಳೆತ ಹತ್ತಿ ಕಾಯಿ 
*  ಹತ್ತಿ ಬೆಳೆದು ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿದ ರೈತರು
 


ಎಸ್‌.ಜಿ. ತೆಗ್ಗಿನಮನಿ

ನರಗುಂದ(ಡಿ.10):  ಬಂಗಾರದ ಬೆಳೆಯ ನಿರೀಕ್ಷೆಯಲ್ಲಿದ್ದ ತಾಲೂಕಿನ ಹತ್ತಿ(Cotton Growers) ಬೆಳೆಗಾರರರು ಅಕಾಲಿಕ ಮಳೆಯ(Untimely Rain) ಹೊಡೆತದಿಂದ ಈ ಬಾರಿಯೂ ನಿರಾಸೆ ಅನುಭವಿಸುವಂತಾಗಿದೆ. ಮಲಪ್ರಭಾ ಜಲಾಶಯದ(Malaprabha Dam) ಕಾಲುವೆಗೆ(Canal) ಹೊಂದಿರುವ ತಾಲೂಕಿನ ಜಮೀನುಗಳಲ್ಲಿ(Land) ಬಹಳಷ್ಟು ರೈತರು(Farmers) ಬಿಟಿ ಹತ್ತಿ ಬಿತ್ತನೆ(BT Cotton Sowing) ಮಾಡಿದ್ದರು. ಅಲ್ಲದೇ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಅಕಾಲಿಕ ಮಳೆಯಿಂದ ಕನಸೆಲ್ಲ ನುಚ್ಚುನೂರಾಗಿದೆ. ಕೆಲವು ದಿನಗಳ ಹಿಂದೆ ಅಕಾಲಿಕ ಮಳೆಯಿಂದ ಹತ್ತಿ ಕಾಯಿ ಕೊಳೆತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ(Farmers).

Tap to resize

Latest Videos

ರೈತರು ಒಂದು ಎಕರೆ ಹತ್ತಿ ಬಿತ್ತನೆಗೆ ಕನಿಷ್ಠ 20ರಿಂದ 30 ಸಾವಿರ ಖರ್ಚು ಮಾಡಿದ್ದರು. ಎಕರೆಗೆ 10ರಿಂದ 50 ಕ್ವಿಂಟಲ್‌ವರೆಗೆ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಹತ್ತಿ ಬೆಳೆ ಅಕಾಲಿಕವಾಗಿ ವಿಪರೀತ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಿ ಹತ್ತಿಕಾಯಿ ಕೊಳೆತುಹೋಗಿವೆ.

Karnataka Rains: ಜಾನು​ವಾರುಗಳ ಮೇವೂ ಕಿತ್ತು​ಕೊಂಡ ಅಕಾ​ಲಿಕ ಮಳೆ

ಬಂಗಾರ ಬೆಲೆ:

ಹಿಂದಿನ ವರ್ಷ ತಾಲೂಕಿನಲ್ಲಿ ಹೆಚ್ಚು ರೈತರು ಬಿಟಿ ಹತ್ತಿ ಬಿತ್ತನೆ ಮಾಡಿದ್ದರು. ಆದರೆ ನಿರೀಕ್ಷಿತ ಇಳುವರಿ ಬರಲಿಲ್ಲ. ಹೀಗಾಗಿ ಈ ವರ್ಷ ತಾಲೂಕಿನ ರೈತರು ಕೇವಲ 138 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿಟಿ ಹತ್ತಿ ಬಿತ್ತನೆ ಮಾಡಿದ್ದರು. ಈ ವರ್ಷ ಪ್ರತಿ ಕ್ವಿಂಟಲ್‌ ಹತ್ತಿಗೆ 10ರಿಂದ 13 ಸಾವಿರದವರೆಗೆ ಬೆಲೆ ಇದೆ. ಆದರೆ ರೈತರ ಬೆಳೆ ಅಕಾಲಿಕ ಮಳೆಗೆ ಸಂಪೂರ್ಣ ಹಾನಿಯಾಗಿದ್ದರಿಂದ ಹತ್ತಿ ಬೆಳೆದ ರೈತರ ಬದುಕು ಮೂರಾಬಟ್ಟೆ ಎಂಬಂತಾಗಿದೆ.

ಕೃಷಿ ಇಲಾಖೆಯ(Department of Agriculture) ಅಧಿಕಾರಿಗಳು ಬೆಳೆ ಸಮೀಕ್ಷೆಯನ್ನು(Crop Survey) ಸಮರ್ಪಕವಾಗಿ ಮಾಡಿಲ್ಲ, ತಾಲೂಕಿನಲ್ಲಿ ಹತ್ತಿ ಬೆಳೆ ಹಾನಿಯಾಗಿಲ್ಲವೆಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಹತ್ತಿ ಬೆಳೆದು ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ನರಗುಂದ(Nargund) ತಾಲೂಕಿನಲ್ಲಿ ಯಾವುದೇ ರೀತಿ ಹತ್ತಿ ಬೆಳೆ ಹಾನಿಯಾಗಿಲ್ಲವೆಂದು ವರದಿ ನೀಡಿದ್ದು ಖಂಡನೀಯ. ಇಂಥಾ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಬೇಕು ಅಂತ ಕರ್ನಾಟಕ ರೈತ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ತಿಳಿಸಿದ್ದಾರೆ.  

ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಯಾವ ರೀತಿ ಬೆಳೆ ಸಮೀಕ್ಷೆ ಮಾಡಿ ವರದಿ ತಯಾರಿಸಿದ್ದಾರೆ ಎಂದು ತಾಲೂಕು ಕೃಷಿ ನಿರ್ದೇಶಕ ಜತೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಅಂತ ತಹಸೀಲ್ದಾರ್‌ ಎ.ಡಿ. ಅಮರವಾದಗಿ ಹೇಳಿದ್ದಾರೆ. 

Karnataka Rains: ರೈತರನ್ನು ಕಂಗೆಡಿಸಿದ ಅಕಾಲಿಕ ಮಳೆ..!

ಗಾಯದ ಮೇಲೆ ಬರೆ ಎಳೆದ ವರುಣ: ಡಿಸೆಂಬರ್‌ ಮಳೆಗೆ ದಂಗಾದ ಅನ್ನದಾತ..!

ಧಾರವಾಡ: ಗಾಯದ ಮೇಲೆ ಬರೆ ಎಳೆದಂತೆ ರೈತರಿಗೆ ಪೆಟ್ಟಿನ ಮೇಲೆ ಪೆಟ್ಟು ನೀಡುತ್ತಿದೆ ಈ ಅಕಾಲಿಕ ಮಳೆ(Untimely Rain). ಇನ್ನೇನು ಮಳೆ ಕಡಿಮೆ ಆಯ್ತು ಎನ್ನುವಷ್ಟರಲ್ಲಿ ಧಾರವಾಡ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದು, ರೈತರಿಗೆ ಮತ್ತೆ ಈ ಮಳೆ ತಲೆನೋವಾಗಿ ಪರಿಣಮಿಸಿದೆ.

10 ದಿನಗಳ ಹಿಂದಷ್ಟೇ ಸುರಿದ ಅಪಾರ ಮಳೆಯಿಂದಾಗಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳು ಅಪಾರ(Crop Damage) ಪ್ರಮಾಣದಲ್ಲಿ ಹಾನಿಯಾಗಿದ್ದವು. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಬೆಳೆಹಾನಿ ಅಂದಾಜಿಸಲಾಗಿತ್ತು. ಒಂದೆರಡು ದಿನ ಚಳಿ ಬಿಟ್ಟಂತೆ ಮಾಡಿ ಮತ್ತೆ ಬುಧವಾರದಿಂದ ಮಳೆ ಶುರುವಾಗಿದ್ದು, ಗುರುವಾರ ಇಡೀ ದಿನವೂ ಜಿಲ್ಲಾದ್ಯಂತ ಮಳೆಯಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ(Winter) ಮಳೆ ಬಂದಿರುದು ಅಪರೂಪ. ಆದರೆ, ಈ ವರ್ಷ ಮಾತ್ರ ಕಾಲದ ಪರಿವೇ ಇಲ್ಲದೇ ಎಲ್ಲ ಕಾಲದಲ್ಲೂ ಮಳೆಯಾಗುತ್ತಿರುವುದು ರೈತರ ಪಾಲಿಗಂತೂ ಬೇಸರದ ಸಂಗತಿ.
 

click me!