ಕೋಲಾರ (ಜೂ.06): ಗಾಂಜಾ ಮತ್ತಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಗೆ ಬಂದಿದ್ದ ಇಬ್ಬರು ಯುವಕರನ್ನು ಕೊಲಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಾಲ್ವರು ಯುವಕರು ಕೈಯಲ್ಲಿ ಚೂಪಾದ ಡ್ರ್ಯಾಗರ್ ಹಿಡಿದು ಬೆದರಿಸಿ ದರೊಡೆಗೆ ಯತ್ನಿಸಿದ್ದು, ಅವರಲ್ಲಿ ಇಬ್ಬರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿವಿಧೆಡೆ ದರೋಡೆಗೆ ಯತ್ನಿಸಿದ್ದು, ಈ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಪೊಲೀಸರು ಸೇರಿ ಯುವಕರನ್ನು ನಗರದ ಕುವೆಂಪು ಪಾರ್ಕ್ ಬಳಿ ಹಿಡಿದಿದ್ದಾರೆ. ಸ್ಥಳೀಯರು ಯುವಕರ ಸೆರೆ ಹಿಡಿಯುವ ಕೊನೆ ಕ್ಷಣದಲ್ಲಿ ಆಗಮಿಸಿದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಸೆಕ್ಯುರಿಟಿ ಬೆದರಿಸಿ SUV ಕದ್ದ ನೈಜೇರಿಯಾ ಪ್ರಜೆ ಅರೆಸ್ಟ್ .
ಸೆರೆ ಹಿಡಿದ ಇಬ್ಬರು ಯುವಕರನ್ನು ಸದ್ಯ ಕೋಲಾರ ನಗರ ಪೋಲಿಸ್ ಠಾಣೆಗೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದ್ದು, ಮತ್ತಿಬ್ಬರಿಗಾಗಿ ಬಲೆ ಬೀಸಲಾಗಿದೆ.
ಚೂಪಾದ ಡ್ರ್ಯಾಗರ್‌ಗಳನ್ನು ಹಿಡಿದು ಜನರನ್ನು ಬೆದರಿಸಿ ಸಿನಿಮೀಯ ರೀತಿಯಲ್ಲಿ ಲಾಕ್‌ಡೌನ್ ಸಮಯದಲ್ಲಿ ದರೋಡೆಗೆ ಇಳಿದಿದ್ದ ಖದೀಮರು ಕೊನೆಗೂ ಪೊಲೀಸರ ಅತಿಥಿಗಳಾಗಿದ್ದಾರೆ.