ಅಥಣಿ: ಐಸಿಯು ಒಳಗೊಂಡ ಬಸ್‌ ಆ್ಯಂಬ್ಯುಲೆನ್ಸ್‌ಗೆ ಡಿಸಿಎಂ ಸವದಿ ಚಾಲನೆ

By Kannadaprabha News  |  First Published Jun 6, 2021, 2:54 PM IST

* ಸಾರಿಗೆ ಇಲಾಖೆಯಿಂದ ಗಾಲಿ ಮೇಲಿನ ಆಸ್ಪತ್ರೆ
* ಶೀಘ್ರ ಆಕ್ಸಿಜನ್‌ ಉತ್ಪಾದನೆ ಘಟಕ ಆರಂಭ
* ಬಸ್‌ ಆ್ಯಂಬ್ಯುಲೆನ್ಸ್‌ನಲ್ಲಿ ವೈದ್ಯರು, ನರ್ಸ್‌ ಮತ್ತು ಜೌಷಧ, ಇಂಜೆಕ್ಸ್‌ನ್‌ ಎಲ್ಲ ವ್ಯವಸ್ಥೆ 


ಅಥಣಿ(ಜೂ.06):  ರಾಜ್ಯ ಸಾರಿಗೆ ಇಲಾಖೆಯಿಂದ ಗಾಲಿ ಮೇಲಿನ ಆಸ್ಪತ್ರೆ ಎಂಬ ಹೊಸ ಪ್ರಯೋಗವನ್ನು ಜಾರಿಗೆ ತಂದಿದ್ದೇವೆ. ಗಾಲಿ ಮೇಲಿನ ಆಸ್ಪತ್ರೆಯೆಂದರೆ ಸಾರಿಗೆ ಇಲಾಖೆಯ ಬಸ್‌ನ್ನು ವಿನೂತ ಐಸಿಯು ಒಳಗೊಂಡ ಆ್ಯಂಬುಲೆನ್ಸ್‌ ಮಾಡಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಉಪ-ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದ್ದಾರೆ.

ಅವರು ಅಥಣಿಯಲ್ಲಿ ಶನಿವಾರ ಸಾರಿಗೆ ಇಲಾಖೆ ಆ್ಯಂಬುಲೆನ್ಸ್‌ನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆ ಬಸ್‌ಗಳಲ್ಲಿ ಸುಮಾರು 10 ಲಕ್ಷ ವೆಚ್ಚ ಮಾಡಿ ಆಕ್ಸಿಜನ್‌ ವೆಂಟಿಲೇಟರ್‌ ಸೌಲಭ್ಯ ಒಳಗೊಂಡ ಐದು, ಮೂರು, ನಾಲ್ಕು ಹಾಸಿಗೆಯುಳ್ಳ ಐಸಿಯು(ತೀವ್ರ ನಿಗಾ ಘಟಕ) ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾತ್ಕಾಲಿಕ ರೋಗಿಗಳಿಗೆ ಬೇಕಾದಾಗ ಐಸಿಯು ಚಿಕಿತ್ಸೆಯನ್ನು ಇಲ್ಲಿ ಪಡೆಯಬಹುದು. ಇಲ್ಲಿ ವೈದ್ಯರು, ನರ್ಸ್‌ ಮತ್ತು ಜೌಷಧ, ಇಂಜೆಕ್ಸ್‌ನ್‌ ಎಲ್ಲ ವ್ಯವಸ್ಥೆ ಇರುತ್ತದೆ. ಅಥಣಿಗೆ ಈಗ ಒಂದು ಮಂಜೂರು ಮಾಡಿದ್ದೇನೆ. ಅವಶ್ಯಬಿದ್ದರೆ ಇನ್ನು ಮಂಜೂರು ಮಾಡಲಾಗುವದು ಎಂದು ಹೇಳಿದರು.

Latest Videos

undefined

ಈಗಾಗಲೇ ಬೆಂಗಳೂರು, ರಾಯಚೂರು, ಬೆಳಗಾವಿ ಮತ್ತು ಕೋಪ್ಪಳ ಜಿಲ್ಲೆಗಳಲ್ಲಿ ಈ ಸೌಲಭ್ಯವನ್ನು ಪಡೆಯುತ್ತಿವೆ. ಪ್ರತಿಯೊಬ್ಬ ಶಾಸಕರು, ವಿಧಾನ ಪರಿಷತ್‌ ಸದಸ್ಯರು ತಮ್ಮ ತಮ್ಮ ಶಾಸಕರ ಅಭಿವೃದ್ಧಿ ನಿಧಿಯಲ್ಲಿ ಇರುವ ಹಣದಿಂದ ಇಂತಹದೊಂದು ಆಸ್ಪತೆಯನ್ನು ನಮ್ಮ ಇಲಾಖೆಯಿಂದ ಖರೀದಿ ಮಾಡಬೇಕು ಎಂದು ವಿನಂತಿಸಿಕೊಂಡರು.

ಎಲ್ಲಾನೂ ಸಿಎಂ ಮಾಡೋದಾದ್ರೆ ಬೆಳಗಾವಿಗೆ 4 ಮಂತ್ರಿಗಳೇಕೆ?: ಸತೀಶ್‌ ಜಾರಕಿಹೊಳಿ

1600 ಬ್ಲಾಕ್‌ ಫಂಗಸ್‌ ಸೋಂಕಿತರು:

ರಾಜ್ಯದಲ್ಲಿ ಒಟ್ಟು 1600 ಬ್ಲಾಕ್‌ ಫಂಗಸ್‌ ಸೋಂಕಿತರು ಇದ್ದಾರೆ. ಅವರಿಗೆ ಸರ್ಕಾರವೇ ತನ್ನ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ ಒಬ್ಬ ರೋಗಿಗೆ 6 ಇಂಜಕ್ಸನ್‌ ನೀಡಬೇಕಾಗುತ್ತದೆ. ಒಂದು ಇಂಜಕ್ಸನ್‌ ಬೆಲೆ ಸುಮಾರು .6000Ü ಇದೆ ಎಂದು ಹೇಳಿದರು.

ಶೀಘ್ರ ಆಕ್ಸಿಜನ್‌ ಉತ್ಪಾದನೆ ಘಟಕ ಆರಂಭ:

ಈಗಾಗಲೇ ಸೋಂಕು ಕಡಿಮೆಯಾಗಿದೆ. ಅಂದರೂ ವಿದೇಶದಲ್ಲಿ ಈಗಾಗಲೇ 3ನೇ ಅಲೆ ಪ್ರಾರಂಭವಾಗಿದೆ. ಅದನ್ನು ಎದುರಿಸುವುದಕ್ಕೆ ಎಲ್ಲವನ್ನು ಸರ್ಕಾರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಥಣಿ ಪಟ್ಟಣದಲ್ಲಿ ಈಗಾಗಲೇ 300 ಬೆಡ್‌ಗಳಿಗೆ ಬೇಕಾಗುವಷ್ಟು ಆಕ್ಸಿಜನ್‌ ಉತ್ಪಾದನೆ ಘಟಕವನ್ನು ಅತೀ ಶೀಘ್ರದಲ್ಲಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ತಜ್ಣರ ವರದಿ ಆಧರಿಸಿ ಇನ್ನೂ 15 ದಿನಗಳ ಕಾಲ ಲಾಕ್‌ಡೌನ್‌ ಮುಂದುವರಿಸಲಾಗಿದೆ. ಇದರಿಂದ ಸೋಂಕು ಹರಡುವುದು ಕಡಿಮೆಯಾಗುವುದು ಎಂದು ಹೇಳಿದರು.

ಈ ವೇಳೆ ಬಿಜೆಪಿ ಮುಖಂಡರಾದ ಪ್ರದೀಪ ನಂದಗಾಂವ, ಶಿವು ದಿವಾನಮಳ, ದತ್ತಾ ವಾಸ್ಟರ, ದಿಲೀಪ ಲೋನಾರೆ, ರಾಮನಗೌಡ ಪಾಟೀಲ(ಶಿವನೂರ) ಎಸ್‌.ಆರ್‌.ಗೂಳಪ್ಪನವರ, ತಾಲೂಕು ವೈದ್ಯಾಧಿಕಾರಿ ಡಾ. ಬಸವಗೌಡ ಕಾಗೆ, ಅಥಣಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಹಣಮಂತ ಕನಮಡಿ, ಡಿವೈಎಸ್ಪಿ ಎಸ್‌.ವಿ.ಗಿರೀಶ, ತಹಸೀಲ್ದಾರ್‌ ದುಂಡಪ್ಪ ಕೋಮಾರ, ತಾಪಂ ಅಧಿಕಾರಿ ರವೀಂದ್ರ ಬಂಗಾರೆಪ್ಪ, ಸಿಪಿಐ ಶಂಕರಗೌಡ, ಪಿಎಸ್‌ಐ ಕುಮಾರ ಹಾಡಕರ ಇತರರು ಇದ್ದರು.
 

click me!