ಶಿವಮೊಗ್ಗ : ಸಿಗರೇಟ್ - ಬೀಡಿ ಮೂಲ - ಯುವಕನ ಕೊಲೆಯಲ್ಲಿ ಗಲಾಟೆ ಅಂತ್ಯ

By Suvarna News  |  First Published May 26, 2021, 3:22 PM IST
  • ಬೀಡಿ-ಸಿಗರೇಟ್ ಮೂಲದಿಂದ ಆರಂಭವಾದ ಜಗಳ
  • ಯುವಕನ ಕೊಲೆಯಲ್ಲಿ ಅಂತ್ಯವಾಯ್ತು ಎರಡು ಗುಂಪುಗಳ ಗಲಾಟೆ
  • ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆಯಿತು ಘಟನೆ

ಬೆಂಗಳೂರು (ಮೇ.26):  ಭದ್ರಾವತಿಯಲ್ಲಿ 2 ಗುಂಪಿನ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಇನ್ನೊರ್ವನ ಸ್ಥಿತಿ ಚಿಂತಾಜನಕವಾಗಿದೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಓಲ್ಡ್ ಟೌನ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ  ಈ ಘಟನೆ ನಡೆದಿದ್ದು, ಪೌರ ಕಾರ್ಮಿಕ ಸುನಿಲ್ ಎಂಬಾತನ ಕೊಲೆಯಾಗಿದೆ.  ಶ್ರೀಕಾಂತ್ ಎಂಬುವನ ಸ್ಥಿತಿ ಗಂಭೀರವಾಗಿದೆ.

Tap to resize

Latest Videos

 ತಸ್ರೇಜ್ ಎನ್ನುವವನ ಹುಟ್ಟುಹಬ್ಬ ಆಚರಣೆಗೆ ಶಿವಮೊಗ್ಗದ ಆರ್‌ಎಂಎಲ್ ನಗರದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಭದ್ರಾವತಿಗೆ ಬಂದಿದ್ದರು . ಇವರೆಲ್ಲರೂ ಸೇರಿ  ಅನ್ವರ್ ಕಾಲೋನಿಯಲ್ಲಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸಿಗರೇಟ್ ಹಾಗೂ ಬೀಡಿ ತರಲು ಕೆಲವರು ಲಾಕ್‌ಡೌನ್ ನಡುವೆಯೂ ಭೀಮ್ ನಗರದಲ್ಲಿ ಓಡಾಡಿದ್ದಾರೆ . ಈ ವೇಳೆ ಅಲ್ಲಿದ್ದ ಯುವಕರು (ಕೊಲೆಯಾದ ಸುನಿಲ್-ಶ್ರೀಕಾಂತ್) ಲಾಕ್‌ಡೌನ್ ನಡುವೆ ಹೀಗ್ಯಾಕೆ ಓಡಾಡುತ್ತಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.

ಮಹಿಳೆಯ ವಿಚಾರ : ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿ PSI ವಿರುದ್ಧವೇ FIR ..
 
ಮೊದಲೇ ನಶೆಯಲ್ಲಿದ್ದ ಯುವಕರ ಗುಂಪು ತಮ್ಮನ್ನ ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಮುಂದಾಗಿದೆ . ಈ ವೇಳೆ ಸಣ್ಣ ಸಂಘರ್ಷ ನಡೆದು ಅಲ್ಲಿಂದ ಯುವಕರು ತೆರಳಿದ್ದಾರೆ.ಬಳಿಕ ಮತ್ತೆ ಗುಂಪು ಗೂಡಿ ಹೊಡೆದಾಟ ನಡೆಸಿದ್ದು,  ಸಂಘರ್ಷ ತಾರಕಕ್ಕೇರಿ ಶಿವಮೊಗ್ಗದಿಂದ ಬಂದಿದ್ದ ಗುಂಪು ಸುನೀಲ್ ಹಾಗೂ ಶ್ರೀಕಾಂತ್ ಗೆ ಚಾಕುವಿನಿಂದ ಇರಿದು ಪರಾರಿಯಾಗಿದೆ 

ಈ ಸಂಬಂಧ  ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೌಸೀಫ್  ಹಾಗೂ ನಾಲ್ವರನ್ನು ಬಂದಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.  

click me!