ಮೈಸೂರು : ಕೋವಿಡ್ ಮಹಿಳಾ ಸ್ನೇಹಿತೆ ಮೂಲಕ ಸ್ತ್ರೀಯರಿಗೆ ನೆರವು

By Kannadaprabha NewsFirst Published May 26, 2021, 2:22 PM IST
Highlights
  •  ಕೋವಿಡ್‌ ಮಹಿಳಾ ಸ್ನೇಹಿತೆ ಎಂಬ ಹೆಸರಿನಲ್ಲಿ ಸಹಾಯವಾಣಿ ಆರಂಭ
  • ಮೈಸೂರಿನ ಮಹಿಳಾ ಕಾಂಗ್ರೆಸ್ ಘಟಕದಿಂದ ಮಹಿಳೆಯರ ನೆರವಿಗೆ ಸಹಾಯವಾಣಿ
  • ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌  ಚಾಲನೆ

 ಮೈಸೂರು (ಮೇ.26):  ಕೋವಿಡ್‌ ಮಹಿಳಾ ಸ್ನೇಹಿತೆ ಎಂಬ ಹೆಸರಿನಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕವು ಆರಂಭಿಸಿರುವು ಕೋವಿಡ್‌ ಸಹಾಯವಾಣಿ ಕೇಂದ್ರವನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಅವರು ಕಾಂಗ್ರೆಸ್‌ ಭವನದಲ್ಲಿ  ಚಾಲನೆ ನೀಡಿದರು.

ಈ ವೇಳೆ ಡಾ. ಪುಷ್ಪಾ ಅಮರನಾಥ್‌ ಮಾತನಾಡಿ, ಮಹಿಳೆಯರು ಕೆಲ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಮಹಿಳೆಯರಿಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದಿಂದ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಈ ಕಾಂಗ್ರೆಸ್‌ ಮಹಿಳಾ ಪಡೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲಿದೆ ಎಂದರು.

ಮೈಸೂರು : ಕೋವಿಡ್‌ ಮುಕ್ತ ಗ್ರಾಮಕ್ಕೆ ಪುರಸ್ಕಾರ

ಸಂಕಷ್ಟದಲ್ಲಿರುವ ಮಹಿಳೆಯರು ನಮ್ಮ ಸಹಾಯವಾಣಿಗೆ ಕರೆ ಮಾಡಿದರೆ, ಮಹಿಳಾ ಐಸೋಲೇಷನ್‌ ಕಿಟ್‌ಗಳನ್ನು ನಮ್ಮ ಕಾರ್ಯಕರ್ತರಿಂದ ಮನೆಗಳಿಗೆ ನೀಡಲಾಗುತ್ತದೆ. ವೈದ್ಯರು ಸೂಚಿಸಿರುವ 5 ರೀತಿಯ ಔಷಧಿ, ಮಾಸ್ಕ್‌, ಸೋಪ್‌ ಹಾಗೂ 3 ಸ್ಯಾನಿಟರಿ ಪ್ಯಾಡ್‌ಗಳು ಸೇರಿದಂತೆ ಹಲವು ವಸ್ತುಗಳು ಇರಲಿದೆ. ಸದ್ಯ ಮೈಸೂರಿನಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೀಡಲು ಒಂದು ಸಾವಿರ ಕಿಟ್‌ ತಯಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಬರುವುದರಿಂದ ಮಕ್ಕಳ ಆರೋಗ್ಯಕ್ಕೆ ಅಗತ್ಯವಿರುವ ವಸ್ತುಗಳನ್ನ ಸಿದ್ಧಪಡಿಸಲಾಗುವುದು ಎಂದು ಅವರು ವಿವರಿಸಿದರು.

ಗ್ರಾಮೀಣ ಭಾಗದ ಮಹಿಳೆಯರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ತಿಳಿದಿರುವುದಿಲ್ಲ, ಅಂತಹ ಮಹಿಳೆಯರು ಕೋವಿಡ್‌ ಮಹಿಳಾ ಸ್ನೇಹಿತೆ ದೂರವಾಣಿಗೆ ಕರೆ ಮಾಡಿದರೆ, ನಮ್ಮ ಸ್ವಯಂ ಸೇವಕರು ಆ ಮಹಿಳೆಗೆ ಲಸಿಕೆ ನೋಂದಣಿ ಮಾಡಿಸಲಿದ್ದಾರೆ ಎಂದರು.

ಕೋವಿಡ್‌ ಮಹಿಳಾ ಸ್ನೇಹಿತೆ- ಕೋವಿಡ್‌ ಸಹಾಯವಾಣಿ ಕೇಂದ್ರದ ಸಹಾಯ ಪಡೆಯಲಿಚ್ಚಿಸುವ ಮಹಿಳೆಯರು ಮೊ. 94498 41024, 93433 05375, 97402 95648 ಸಂಪರ್ಕಿಸಬಹುದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!