ಜಾತ್ಯತೀತತæಯ ಮನಸ್ಸನ್ನು ಒಗ್ಗೂಡಿಸುವ ಸಲುವಾಗಿ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಲು ಲಿಂಗವನ್ನು ಪೂಜಿಸುವಂತಾಗಬೇಕೆಂದು ಕಲ್ಬುರ್ಗಿ ಕಾಳಗಿಯ ಸುಗೂರು ಹಿರೇಮಠದ ರುದ್ರೇಶ್ವರ ಸಂಸ್ಥಾನ ಮಠಾಧೀಶ ಡಾ. ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.
ತುಮಕೂರು : ಜಾತ್ಯತೀತತæಯ ಮನಸ್ಸನ್ನು ಒಗ್ಗೂಡಿಸುವ ಸಲುವಾಗಿ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಲು ಲಿಂಗವನ್ನು ಪೂಜಿಸುವಂತಾಗಬೇಕೆಂದು ಕಲ್ಬುರ್ಗಿ ಕಾಳಗಿಯ ಸುಗೂರು ಹಿರೇಮಠದ ರುದ್ರೇಶ್ವರ ಸಂಸ್ಥಾನ ಮಠಾಧೀಶ ಡಾ. ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.
ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಹತ್ತು ದಿನಗಳ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ-2023ರಲ್ಲಿ ಶರಣರ ಜೀವನ ದರ್ಶನ-ಪ್ರವಚನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳಲ್ಲಿ ಶ್ರೀ ಉದ್ಧಾನೇಶ್ವರ ವೇದಿಕೆಯಲ್ಲಿ ಎರಡನೇ ದಿನದ ಪ್ರವಚನದಲ್ಲಿ ಶ್ರೀಗಳು ಮಾತನಾಡಿದರು.
ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಬೆಂಗಳೂರಿನ ಶ್ರೀಸಾಯಿ ಪಬ್ಲಿಕೇಷನ್ಸ್ ಹೊರತಂದಿರುವ ಸಾಹಿತಿ, ಲೇಖಕ ಎನ್.ಜಿ.ಗೋಪಾಲ್ ರಚಿಸಿರುವ ಇವರು ಯಾರು ಬಲ್ಲಿರೇನು ನೈಜ ಘಟನಾವಳಿಗಳ ಕಥಾಸಂಕಲನ(ಕಾದಂಬರಿ)ವನ್ನು ಲೋಕಾರ್ಪಣೆಗೊಳಿಸಿ ಲೇಖಕರನ್ನು ಗೌರವಿಸಿ ಆಶೀರ್ವಚಿಸಿದರು.
ಪುಸ್ತಕ ಕುರಿತು ಹಿರಿಯ ಸಾಹಿತಿ ಚಿಂತಕ ಕೋ.ರ.ಬಸವರಾಜು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಘಟಿಸುತ್ತಿರುವ ಘಟನೆಗಳು ಹೆತ್ತವರನ್ನು ಖುದ್ದು ಹೊರದಬ್ಬುವ ಮೂಲಕ ಅಂತಹವರುಗಳ ಕೊನೆಯ ದಿನಗಳಲ್ಲಿನ ಬದುಕನ್ನು ಕ್ಲಿಷ್ಟಕರ ಕ್ಷಣಗಳನ್ನು ಅನಾಥಾಶ್ರಮಗಳಲ್ಲಿ ಸವೆಸುವ ಅನುಭವಿಸುವುದನ್ನು ಕಂಡು ಅವರ ಬಗೆಗೆ ಮಮಕಾರವಿರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ನಿಜ ಸಂಗತಿಗಳನ್ನು ಪುಸ್ತಕದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕ ನಿಜಕ್ಕೂ ಎಲ್ಲರೂ ಓದಲೇಬೇಕಾದ ಅಂಶಗಳುಳ್ಳ ಕಾದಂಬರಿಯಾಗಿದೆ ಎಂದು ಬಣ್ಣಸಿದರು.
ಕುಣಿಗಲ್ ಹಿರೇಮಠದ ಶಿವಕುಮಾರ ಶಿವಾಚಾರ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಸಾಯೀಶ ಪಬ್ಲಿಕೇಷನ್ಸ್ ಮಾಲೀಕ ಪುಷ್ಪಾ ಬಸವರಾಜು, ಶಾರದಾಗೋಪಾಲ್, ಎನ್.ಜಿ.ನಾಗೇಶ್ವರನ್, ಪಿ.ಗಿರಿಧರ್, ಮೋಹನ್ ಕುಮಾರ್, ದಿವ್ಯಶ್ರೀ, ಮಿಥುನ್, ಕವನನಿರ್ಮಲಾ, ರಘು ಸೇರಿದಂತೆ ಮಠದ ಸಹಸ್ರಾರು ಮಠದ ಭಕ್ತರು, ವಿದ್ಯಾರ್ಥಿ ಸಮುದಾಯ ಶಿಕ್ಷಕರು ಹಲವರಿದ್ದರು.
ದನಗಳ ಪರಿಷೆ ರದ್ದು
ತುಮಕೂರು (ಫೆ.04): ರಾಜ್ಯದ ಕೃಷಿ ಪ್ರಧಾನ ಪ್ರದೇಶವಾಗಿರುವ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಐತಿಹಾಸಿಕ ರಾಸು ಜಾತ್ರೆಗಳಲ್ಲಿ ಒಂದಾಗಿರುವ ಸಿದ್ದಗಂಗಾ ಮಠದ ದನಗಳ ಪರಿಷೆಯನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಪ್ರತಿವರ್ಷ ಸಂಕ್ರಾಂತಿ ಹಬ್ಬದ ನಂತರ ನಡೆಯುತ್ತಿದ್ದ ಐತಿಹಾಸಿಕ ಜಾನುವಾರುಗಳ ಜಾತ್ರೆಯಲ್ಲಿ ಸಿದ್ಧಗಂಗಾ ಮಠದ ಜಾನುವಾರು ಜಾತ್ರೆಯೂ ಒಂದಾಗಿತ್ತು. ಕೃಷಿ ಪ್ರಧಾನವಾದ ಪ್ರದೇಶಗಳಲ್ಲಿ ರೈತರು ಹಾಗೂ ಪಶು ಸಂಗೋಪನೆ ಮಾಡುವವರಿಗೆ ಈ ದನಗಳ ಪರಿಷೆ ಅತ್ಯಂತ ಪ್ರಮುಖ ಜಾತ್ರೆಯಾಗಿತ್ತು. ಆದರೆ, ಈ ವರ್ಷ ರಾಜ್ಯದಾದ್ಯಂತ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ದನಗಳಿಗೆ ಇದು ಅಂಟು ರೋಗವಾಗಿ ಕಾಡುತ್ತಿದೆ. ಹೀಗಾಗಿ, ಒಂದು ದನಕ್ಕೆ ಚರ್ಮಗಂಟು ರೋಗವಿದ್ದರೂ ಅದರಿಂದ ನೂರಾರು ರಾಸುಗಳಿಗೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ, ಈ ವರ್ಷದ ದನಗಳ ಪರಿಷೆಯನ್ನು ಮಾಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
Lumpy skin disease: ನಿಷೇಧದ ನಡುವೆಯೂ ಬೆಟ್ಟದಪುರದಲ್ಲಿ ಜಾನುವಾರ ಜಾತ್ರೆ!
ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ದನಗಳ ಪರಿಷೆ: ತುಮಕೂರಿನ ಕ್ಯಾತ್ಸಂದ್ರದ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ದನಗಳ ಜಾತ್ರೆಯನ್ನೂ ನಡೆಸಲಾಗುತ್ತಿತ್ತು. ಕಳೆದ 50 ವರ್ಷಗಳಿಂದಲೂ ದನಗಳ ಪರಿಷೆ ನಡೆದುಕೊಂಡು ಬಂದಿದೆ. ಈ ಬಾರಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹಿನ್ನೆಲೆ ಜಾತ್ರಾ ಮಹೋತ್ಸವದಲ್ಲಿ ದನಗಳ ಪರಿಷೆ ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಮಗಂಟು ರೋಗ ಹರಡುತ್ತಿರುವ ಕಾರಣ ಪಶು ಸಂಗೋಪನೆ ಇಲಾಖೆಯ ಸಲಹೆ ಕೇಳಲಾಗಿತ್ತು. ಆದರೆ, ಪಶು ಸಂಗೋಪನೆ ಇಲಾಖೆಯು ಈಗಾಗಲೇ ರಾಜ್ಯದ ಹಲವು ಸುಪ್ರಸಿದ್ಧ ಜಾನುವಾರು ಜಾತ್ರೆಗಳನ್ನು ರದ್ದುಗೊಳಿಸಿದ್ದು, ಈ ಬಾರಿ ಸಿದ್ದಗಂಗಾ ಮಠದಲ್ಲಿಯೂ ದನಗಳ ಪರಿಷೆ ಮಾಡದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ದನಗಳ ಜಾತ್ರೆಯನ್ನು ನಿರ್ಬಂಧಿಸಲಾಗಿದೆ ಎಂದು ಸಿದ್ದಲಿಂಗೇಶ್ವರ ಸ್ವಾಮೀಜಿ ಪ್ರಕಟಣೆ ಹೊರಡಿಸಿದ್ದಾರೆ.
ರಾಸುಗಳಿಗೆ ಬಹುಮಾನ ನೀಡಲಾಗುತ್ತಿತ್ತು: ಇನ್ನು ತುಮಕೂರಿನ ಸಿದ್ಧಗಂಗಾ ಮಠದ ರೈತರಿಗೆ ಅನುಕೂಲ ಆಗುವಂತೆ ಸಿದ್ಧಲಿಂಗೇಶ್ವರ ಜಾತ್ರೆಯ ಸಮಯದಲ್ಲಿ ರಾಸುಗಳ ಜಾತ್ರೆ ಮಾಡಲು ಲಿಂ. ಶಿವಕುಮಾರ ಸ್ವಾಮೀಜಿ ಅವರು ಚಾಲನೆ ನೀಡಿದ್ದರು. ರೈತರನ್ನು ಪ್ರೋತ್ಸಾಹಿಸಲು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಆಯೋಜನೆ ಮಾಡುತ್ತಿದ್ದ ದನಗಳ ಜಾತ್ರೆ ಇದಾಗಿದೆ. ಇನ್ನು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಉತ್ತಮ ರಾಸುಗಳಿಗೆ ವಿಶೇಷ ಬಹುಮಾನವನ್ನು ಮಠದ ಆಡಳಿತ ಮಂಡಳಿಯಿಂದ ನೀಡಲಾಗುತ್ತಿತ್ತು. ಈ ವರ್ಷ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಸರ್ಕಾರದಿಂದ ಅನುಮತಿ ಸಿಗಲಿಲ್ಲ