ಎತ್ತಿನಹೊಳೆ ಜಿ.ಎಸ್‌.ಪರಮಶಿವಯ್ಯರ ಕನಸು: ಮಾಧವ

By Kannadaprabha News  |  First Published Feb 15, 2023, 5:15 AM IST

ಎತ್ತಿನಹೊಳೆ ಯೋಜನೆ ನೀರಾವರಿ ತಜ್ಞ ಜಿ.ಎಸ್‌. ಪರಮಶಿವಯ್ಯನವರ ಕನಸಿನ ಕೂಸು ಎಂದು ಜಲ ಸಂಪನ್ಮೂಲ ಇಲಾಖೆಯ ಎತ್ತಿನಹೊಳೆ ಯೋಜನೆ ವಲಯದ ಮುಖ್ಯಅಭಿಯಂತರ ಮಾಧವ ಅಭಿಪ್ರಾಯಪಟ್ಟರು.


 ತುಮಕೂರು :  ಎತ್ತಿನಹೊಳೆ ಯೋಜನೆ ನೀರಾವರಿ ತಜ್ಞ ಜಿ.ಎಸ್‌. ಪರಮಶಿವಯ್ಯನವರ ಕನಸಿನ ಕೂಸು ಎಂದು ಜಲ ಸಂಪನ್ಮೂಲ ಇಲಾಖೆಯ ಎತ್ತಿನಹೊಳೆ ಯೋಜನೆ ವಲಯದ ಮುಖ್ಯಅಭಿಯಂತರ ಮಾಧವ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಜಿ. ಎಸ್‌. ಪರಮಶಿವಯ್ಯ ಅಧ್ಯಯನ ಪೀಠ ಮತ್ತು ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು- ಅವಕಾಶಗಳು ಮತ್ತು ಸವಾಲುಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Latest Videos

undefined

ರಾಜ್ಯದಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದು ಜಿ. ಎಸ್‌. ಪÜರಮಶಿವಯ್ಯ ಅವರ ಕನಸಾಗಿತ್ತು. ಎಲ್ಲರ ಒಳಿತಿಗಾಗಿ ಸಿದ್ಧವಾದ ಯೋಜನೆಯಿದು. ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರನು ್ನಒದಗಿಸುವ ಉದ್ದೇಶದಿಂದ ಈ ಎತ್ತಿನಹೊಳೆ ಯೋಜನೆಯನ್ನು ನಿರ್ಮಿಸಿದ್ದೇವೆ. ಇದರಲ್ಲಿ ಕಲುಷಿತ ನೀರನ್ನು ಶುದ್ಧೀಕರಿಸಿ ಬಳಸಲು ಮತ್ತು ನೀರನ್ನು ನೀರಾವರಿಯಲ್ಲಿ ಹನಿ ನೀರಾವರಿ ಮೂಲಕ ಬಳಸಲು ಸೌಲಭ್ಯಒದಗಿಸುತ್ತಿದ್ದೇವೆ. ನೀರಾವರಿ ವ್ಯವಸ್ಥೆಯಲ್ಲಿ ಸ್ಟ್ರಿಂಕ್ಲರ್‌ ನೀರಾವರಿ ವ್ಯವಸ್ಥೆ, ಡ್ರಿಪ್‌ ನೀರಾವರಿ ವ್ಯವಸ್ಥೆ, ಟ್ಯಾಂಕ್‌ ವ್ಯವಸ್ಥೆ, ನೀರಿನ ಮರುಬಳಕೆ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ ಎಂದರು.

ಮರುಬಳಕೆ ವ್ಯವಸ್ಥೆ:

ಈ ಯೋಜನೆಯಲ್ಲಿ ಸಾಕಷ್ಟುಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾನವನ ಅತಿಯಾದ ಆಸೆಯಿಂದ ಬೋರ್‌ವೆಲ್‌ಗಳನ್ನು ಕೊರೆಯುತ್ತಾ ಬಂದಿರುವುದರಿಂದ ಭೂಮಿ ಮೇಲೆ ಶುದ್ಧ ನೀರಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಆದ್ದರಿಂದ ಹೆಚ್ಚು ಬೋರ್ವೆಲ್‌ಗಳನ್ನು ಕೊರೆಯದೆ ನೀರನ್ನು ಮಿತವಾಗಿ ಬಳಸಬೇಕು. ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ವ್ಯವಸ್ಥೆಯನ್ನು ಎತ್ತಿನಹೊಳೆ ಯೋಜನೆಯಲ್ಲಿ ನಾವು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಜಿ. ಎಸ್‌. ಪರಮಶಿವಯ್ಯ ಅಧ್ಯಯನ ಪೀಠದ ನಿರ್ದೇಶಕಿ ಡಾ.ಪಲ್ಲವಿ ಎಸ್‌. ಕುಸುಗಲ್ಲ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ವಿಲಾಸ್‌ ಎಂ.ಕಾದ್ರೋಳಕರ, ಪೊ›. ಬಿ.ರವೀಂದ್ರಕುಮಾರ್‌, ಸಹಾಯಕ ಪ್ರಾಧ್ಯಾಪಕ ಡಾ. ಟಿ.ಎನ್‌. ನೀಲಕಂಠ ಪಾಲ್ಗೊಂಡಿದ್ದರು.

ಜಿ. ಎಸ್‌. ಪರಮಶಿವಯ್ಯ ಅವರು ನೀರಾವರಿ ಯೋಜನೆಗಳ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸು ಕಂಡವರು. ನೀರನ್ನು ಮಿತವಾಗಿ ಬಳಕೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಜಲ ಸಂಪನ್ಮೂಲ ಖಾಲಿಯಾಗಬಹುದು. ಹಾಗಾಗಿ, ನೀರನ್ನು ಸದ್ಬಳಕೆ ಮಾಡಿಕೊಳ್ಳೋಣ.

ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ, ತುಮಕೂರು ವಿಶ್ವವಿದ್ಯಾನಿಲಯ 

ನೀರಾವರಿ ಯೋಜನೆಗಾಗಿ ರಾಜೀನಾಮೆ ಕೊಟ್ಟಿದ್ದ ಗೌಡರು

 ಕೆ.ಆರ್‌.ಪೇಟೆ :  ರೈತಮುಖಿ ಚಿಂತನೆಗಳಲ್ಲಿ ತೊಡಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಮಂಜು ತಿಳಿಸಿದರು.

ತಾಲೂಕಿನ ಬೂಕನಕೆರೆ ಹೋಬಳಿಯ ಬಿ.ಜಿ.ಹೊಸಕೊಪ್ಪಲು ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿಕ್ಕೆ ಕುಮಾರಣ್ಣ, ಕೆ.ಆರ್‌ .ಪೇಟೆಗೆ ಮಂಜಣ್ಣ ಘೋಷಣೆಯೊಂದಿಗೆ ಪಂಚರತ್ನ ಯೋಜನೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರ ಬದುಕನ್ನು ಹಸನುಗೊಳಿಸಲು 90 ವರ್ಷವಾದರೂ ಸದಾ ಚಿಂತಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಲು ದೇವೇಗೌಡ ಅಪ್ಪಾಜಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೇಮಾವತಿ ನದಿ ನೀರು ಈ ಭಾಗಕ್ಕೆ ಹರಿಯಲು ಪ್ರಮುಖ ಕಾರಣಕರ್ತರೇ ನೀರಾವರಿ ಪಿತಾಮಹ ದೇವೇಗೌಡರು. ಅವರು ದೂರದೃಷ್ಟಿಯುಳ್ಳ ರಾಜಕಾರಣಿ ಎಂದು ಬಣ್ಣಿಸಿದರು.

ಮಾಜಿ ಸಿಎಂ.ಕುಮಾರಣ್ಣ ರೈತರ ಸಾಲಮನ್ನಾ ಮಾಡಿ ಮಾದರಿಯಾದರು. ರೈತರ ಆತ್ಮಹತ್ಯೆ ತಡೆಯಲು ದಿಟ್ಟಕ್ರಮಗಳನ್ನು ಕೈಗೊಂಡರು. ವಿಧವೆಯರಿಗೆ, ವೃದ್ದರಿಗೆ, ಅಂಗವಿಕಲರಿಗೆ ಮಾಶಾಸನ ಜಾರಿಗೊಳಿಸಿದರು. ಶಾಲಾ ಕಟ್ಟಡಗಳ ನಿರ್ಮಾಣ, ತಾಂತ್ರಿಕ ಕಾಲೇಜುಗಳು, ವಿದ್ಯುತ… ಉಪವಿದ್ಯುತ್‌ ಕೇಂದ್ರಗಳು, ಗ್ರಾಮ ವಾಸ್ತವ್ಯ ಸೇರಿದಂತೆ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ ಕುಮಾರಣ್ಣ ಮತ್ತೆ ನಮ್ಮ ನಾಡಿಗೆ ಮುಖ್ಯಮಂತ್ರಿಯಾಗಲು ನಿಮ್ಮೆಲ್ಲರ ಸಹಕಾರಬೇಕು ಎಂದು ಮನವಿ ಮಾಡಿದರು.

click me!