ದಾವಣಗೆರೆ: ಸಂತೆಬೆನ್ನೂರಿನ ಪುಷ್ಕರಣಿ ಆವರಣದಲ್ಲಿ ಯೋಗ ದಿನಾಚರಣೆ

By Girish Goudar  |  First Published Jun 21, 2022, 3:28 PM IST

*   ಆರೋಗ್ಯವೇ ದೇವರು ಯೋಗದಿಂದ ಆರೋಗ್ಯ ಸಾಧ್ಯ
*   ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ವೈಭವ ಹಣದಿಂದ ಸಿಗುವುದಿಲ್ಲ ಇದು ಯೋಗದಿಂದ ಮಾತ್ರ ಸಾಧ್ಯ
*   ಧರ್ಮ ಧ್ವಜ ನೀಡುವ ಬದಲು ಕಾಯಕ ಧ್ವಜ ನೀಡಿ
 


ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್, ದಾವಣಗೆರೆ

ದಾವಣಗೆರೆ(ಜೂ.21):  ಭವ್ಯಭಾರತದ ನಿರ್ಮಾಣಕ್ಕೆ ಯೋಗದಿನ ಪ್ರೇರಣೆಯಾಗಲಿದೆ ಎಂದು ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Tap to resize

Latest Videos

ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಐತಿಹಾಸಿಕ ಸ್ಥಳವಾದ ಪುಷ್ಕರಣಿಯಲ್ಲಿ ಜಿಲ್ಲಾಡಳಿತ, ಜಿ.ಪಂ,ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾನವೀಯತೆಗಾಗಿ ಯೋಗ ಘೋಷವಾಕ್ಯದಡಿ ಆಯೋಜಿಸಿದ್ದ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸನಾತನ ಕಾಲದಿಂದಲೂ ದೇಶದಲ್ಲಿ ಯೋಗ ಇತ್ತು ಆ ದಿನಗಳು ಮತ್ತೆ ಮರುಕಳಿಸುತ್ತಿದೆ.ಆರೋಗ್ಯವೇ ದೇವರು ಯೋಗದಿಂದ ಆರೋಗ್ಯ ಸಾಧ್ಯ. ಇಂತಹ ಪುಣ್ಯನೆಲದಲ್ಲಿ ಜನ್ಮತಳೆದ ನಾವು ಇಂದು ತ್ಯಾಗ ಬಲಿದಾನಕ್ಕೆ ಹೆಸರಾಗಿರುವ ಚನ್ನಗಿರಿಯ ಐತಿಹಾಸಿಕ ಸ್ಥಳದಲ್ಲಿ ಯೋಗದಿನ ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ.ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ವೈಭವ ಹಣದಿಂದ ಸಿಗುವುದಿಲ್ಕ ಇದು ಯೋಗದಿಂದ ಮಾತ್ರ ಸಾಧ್ಯ. 

ದಾವಣಗೆರೆ: ಅಪಘಾತ ಪರಿಹಾರ ನೀಡದ್ದಕ್ಕೆ 4 ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ

ಭಾರತೀಯತೆಯನ್ನು ಸಂಭ್ರಮಿಸಬೇಕಾದ ದಿನ ಇದಾಗಿದೆ. ಯೋಗವನ್ನು ಭಾರತೀಯರು ಹೊಸದಾಗಿ ನೀಡುತ್ತಿಲ್ಲ ನಮ್ಮ ಸನಾತನ ಪರಂಪರೆಯಲ್ಲಿ ಯೋಗವಿತ್ತು ಎಂದರು. ವಿಶ್ವದಲ್ಲೇ ಸುಮಾರು 200 ರಾಷ್ಟ್ರಗಳಲ್ಲಿ ಯೋಗದಿನ ಆಚರಿಸಲಾಗುತ್ತಿದೆ. ಜಗತ್ತಿಗೆ ಯೊಗದ ರಾಯಬಾರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಂಸ್ಕೃತಿಯನ್ನು ಸಾರಿದ್ದಾರೆ. ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ ಉಳಿಸಿಬೆಳೆಸಿಕೊಂಡು ಅದೇ ನಾವು ನೀಡುವ ದೊಡ್ಡ ಕೊಡುಗೆ ಎಂದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಆರುಸಾವಿರ ವರ್ಷದ ಹಿಂದೆಯೇ ಯೋಗ ಭಾರತದಲ್ಲಿ ಹುಟ್ಟಿತ್ತು ಅಂದಿನವರು ಶತಾಯುಷಿಗಳಾಗಿದ್ದರು ಖುಷಿಮುನಿಗಳು ಯೋಗದ ಮೂಲಕ ಆರೋಗ್ಯವಂತರಾಗಿದ್ದರು. ಪ್ರಧಾನಿ ಮೋದಿಯವರು ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದರು. ಯೋಗದ ಮೂಲಕ ನಾವೆ ಆರೋಗ್ಯ ಪಡೆಯೋಣ.ಪಾರಂಪರಿಕ ಸ್ಥಳವಾದ ಸಂತೇಬೆನ್ನೂರು ಪುಷ್ಕರಣಿಯಲ್ಲಿ ಯೋಗದಿನಾಚರಣೆ ಹಮ್ಮಿಕೊಂಡಿರುವುದು ಹಾಗೂ ಇಂತಹ ಸ್ಥಳಗಳ ಇತಿಹಾಸ ಪರಿಚಯ ಮಾಡಿರುವುದು ಉತ್ತಮ‌ಕಾರ್ಯ ಎಂದರು.

ಜಿ.ಪಂ ಸಿಇಒ ಡಾ.ಎ.ಚನ್ನಪ್ಪ ಮಾತನಾಡಿ, ಯೋಗಯುಕ್ತ ರೋಗ ಮುಕ್ತ ಕಾರ್ಯಕ್ರಮ ಇದಾಗಿದೆ. ಯೋಗದ ಮೂಲಕ ನಾವು ಬದುಕೋಣ ಬದುಕಲು ಕಲಿಸೋಣ ಎಂದರು.

ಈ ವೇಳೆ ಯೋಗಗುರು ಶ್ರೀ ಚೆನ್ನಬಸವಣ್ಣ ಸ್ವಾಮಿ ಯೋಗದ ಮಹತ್ವ ಸಾರುವ ಮೂಲಕ ಯೋಗಾಸನಗಳನ್ನು ಹೇಳಿಕೊಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಚನ್ನಬಸವಣ್ಣ ಸ್ವಾಮೀಜಿ, ಭಾರತ ಉಳಿಯಬೇಕೆಂದರೆ ನಮ್ಮ ಸನಾತನ  ಸಂಸ್ಕೃತಿಯ ಭಾಗವಾದ ಯೋಗ, ಆಯುರ್ವೇದ ಹಾಗೂ ಆಧ್ಯಾತ್ಮಿಕತೆಯನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಯೋಗ ಗುರು ವೈದ್ಯಶ್ರೀ ಚೆನ್ನಬಸವಣ್ಣ ಸ್ವಾಮಿಗಳು ಕರೆ ನೀಡಿದರು.

ಯೋಗದ ಮೂಲ ಪುರುಷ ಶಿವ ಎಂದು ಅವರು, ಎಲ್ಲಾ ಯೋಗಗಳು ಹಿಮಾಲಯದಲ್ಲಿ ಹುಟ್ಟಿದರೆ ಶಿವಯೋಗ ಅಂದ್ರೆ ಇಷ್ಟಲಿಂಗ ಯೋಗ  ಮಾತ್ರ ಕರ್ನಾಟಕದಲ್ಲಿ ಹುಟ್ಟಿದೆ. ಯೋಗ ಕಾಯಕದ ಪೂಜೆಯ ಸಂಕಲ್ಪವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಭಾರತವನ್ನು ವಿಶ್ವಗುರು ಮಾಡಬೇಕೆಂದರೆ ಮೊದಲು ನಾವುಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಬೇಕು. ಕರ್ನಾಟಕದಲ್ಲಿ ಸುಮಾರು ಮೂರು ಕೋಟಿಗಿತತಲೂ ಹೆಚ್ಚು ಜನರು ಬಿಪಿ, ಶುಗರ್ ಕಾಯಿಲೆಗೆ ಔಷಧಿ ಸೇವಿಸುತ್ತಿದ್ದಾರೆ. ಔಷಧಿಗೆ ಹಾಕುವ ಹಣ ನಿಂತರೆ ಸಾಕು. ನಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಈ ನಿಟ್ಟಿನಲ್ಲಿ ನಾವುಗಳು ನಿರೋಗಿಗಳಾಗಲು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಿಎಂ ಬಂದೋಬಸ್ತ್‌ನಲ್ಲಿದ್ದ PSIಗೆ ಹೃದಯಾಘಾತ, SP ಪ್ರಜ್ಞೆಯಿಂದ ಉಳಿಯಿತು ಜೀವ

ಮನಸ್ಸು, ಶರೀರ ದೃಢವಾಗಿರಿಸುವ ವೃಕ್ಷಾಸನ, ಹೊಟ್ಟೆಯ ಬೊಜ್ಜು ಕರಗಿಸುವ ಪಾದ ಹಸ್ತಾಸನ, ಬೆನ್ನು ನೋವು, ಸಯಾಟಿಕಲ್ ಸಮಸ್ಯೆ ನೀಗಿಸುವ ತ್ರಿಕೋನಾಸನ, ಕಿಡ್ನಿ ಸಮಸ್ಯೆ ಗರ್ಭಕೋಶದ ತೊಂದರೆಗಳನ್ನು ಹೋಗಲಾಡಿಸುವ ಭದ್ರಾಸನ, ಜೀರ್ಣಾಂಗ ವ್ಯವಸ್ಥೆ, ಶುಗರ್, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಡೆದೋಡಿಸುವ ಅರ್ಧ ಉಷ್ಟ್ರಾಸನ, ಭುಜಂಗಾಸನ, ಶಿವಾಸನ ಹೀಗೆ ಅನೇಕ ಆಸನಗಳ ಲಾಭವನ್ನು ಹೇಳುವ ಹಾಗೂ ತಿಳಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಧರ್ಮ ಧ್ವಜ ನೀಡುವ ಬದಲು ಕಾಯಕ ಧ್ವಜ ನೀಡಿ

ಧರ್ಮ ಎಂದರೆ ದಯೆಯಾಗಿರಬೇಕು. ದೇಶದಲ್ಲಿ ಧರ್ಮ ಒಡೆಯುವವರನ್ನು ನಂಬಬೇಡಿ. ಯುವ ಜನಾಂಗದ ಕೈಗೆ ಧರ್ಮ ಧ್ವಜ ನೀಡುವ ಬದಲು ಕಾಯಕ ಧ್ವಜವನ್ನು ನೀಡಬೇಕಿದೆ. ಜಗತ್ತಿನ ಯಾವುದೇ ದೇಶ ಹಾಳಾದರೆ ಮತ್ತೆ ಕಟ್ಟಬಹುದು ಆದರೆ ಹೂ ಭಾರತ ಹಾಳಾದರೆ ಇನ್ನೊಂದು ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ಕಾರಣ ನಮ್ಮದು ಭೌತಿಕ ಭಾರತಿ ಮಾತ್ರವಲ್ಲ. ನಮ್ಮ ಪೂರ್ವಜರಾದ ಋಷಿ ಮುನಿಗಳು ನಿರ್ಮಿಸಿದ ಸಂಸ್ಕಾರ ಭಾರತವಾಗಿದೆ ಎಂದು ಈ ನೆಲದ ಮಹತ್ವವನ್ನು ಸಾರಿದರು.
 

click me!