World Yoga Day: ಐತಿಹಾಸಿಕ ಹಂಪಿಯಲ್ಲಿ ಯೋಗೋತ್ಸವ..!

By Girish Goudar  |  First Published Jun 21, 2022, 2:38 PM IST

*  ವಿಜಯನಗರ ಜಿಲ್ಲೆಯಾದ ಬಳಿಕ‌ ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
*  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಆನಂದ ಸಿಂಗ್, ಶಶಿಕಲಾ ಜೊಲ್ಲೆರಿಂದ ಚಾಲನೆ
*  79 ದೇಶದಲ್ಲಿ ಯೋಗ ದಿನಾಚರಣೆ 
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ/ವಿಜಯನಗರ

ಬಳ್ಳಾರಿ/ವಿಜಯನಗರ(ಜೂ.21):  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇದೇ  ಮೊದಲ ಬಾರಿಗೆ ಐತಿಹಾಸಿಕ ಹಂಪಿಯಲ್ಲಿ ಆಯೋಜನೆ ಮಾಡಲಾಗಿತ್ತು. ಎದುರು ಬಸವಣ್ಣ ಮಂಟಪದ ಮುಂಭಾಗದಿಂದ ಶ್ರೀ ವಿರೂಪಾಕ್ಷೇಶ್ವರ ದೇಗುಲದವರೆಗೆ ರಾಜಬೀದಿಯಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡೋ ಮೂಲಕ ಹಂಪಿಯ ಇತಿಹಾಸದ ಪುಟಗಳಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. 

Tap to resize

Latest Videos

undefined

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರೆ, ಸತತ ಒಂದು ಗಂಟೆಗಳ ಕಾಲ ಶ್ವಾಸಗುರು ವಚನನಾನಂದ ಸ್ವಾಮೀಜಿ ಮಂತ್ರಿಗಳಿಗೂ ಸೇರಿದಂತೆ ನೆರೆದಿದ್ದ ಸಾವಿರಾರು ಜನರಿಗೆ ಯೋಗಾಭ್ಯಾಸ ಮಾಡಿಸೋದ್ರ ಜೊತೆ ಯೋಗ ಮಹತ್ವವನ್ನು ಹೇಳಿದ್ರು.  

ವಿಜಯನಗರದಲ್ಲಿ ಗಮನಸೆಳೆದ ಯೋಗರಥಯಾತ್ರೆ..!

ಯೋಗದ ಮಹತ್ವದ ತಿಳಿಸಿದ ಜೋಶಿ

ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಲು ಯೋಗ ಸಹಕಾರಿಯಾಗಿದೆ.ಯೋಗ ಒಂದು ದಿನದ ಪ್ರಕ್ರಿಯೆ ಆಗಬಾರದು.. ಯೋಗ ಜೀವನದ ಒಂದು ಭಾಗ ಆಗಬೇಕು ಅಲ್ಲದೇ ಯೋಗವು ಜೀವನದ ಒಂದು ಭಾಗ ಆದಾಗ ನಮ್ಮ ಆರೋಗ್ಯ ಜೊತೆ ಮನಸ್ಥಿತಿಯೂ ಸುಧಾರಣೆಯಾಗಲಿದೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ರು. ಭಾರತದಲ್ಲಿ ಅತಿಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹದ ಜೊತೆ ಅನಗತ್ಯ ಒತ್ತಡದ ಹಲವು ರೋಗಕ್ಕೆ ಯೋಗ ರಾಮಬಾಣವಾಗಿದೆ. ಫಿಟ್ ಇಂಡಿಯಾ ಅನ್ನೋ ಘೋಷಣೆಯನ್ನು ನಮ್ಮ ಪ್ರಧಾನಿ ನೀಡಿದ್ದಾರೆ ಅದನ್ನು ಪ್ರತಿಯೊಬ್ಬರು ಪರಿಪಾಲಿಸಬೇಕು ಇನ್ನೂ 21ನೇ ಶತಮಾನ ಭಾರತದ ಶತಮಾನವಾಗಬೇಕು ಎಂದು ಹೇಳಿದ್ರು.

79 ದೇಶದಲ್ಲಿ ಯೋಗ ದಿನಾಚರಣೆ 

ವಿಶ್ವ ಸಂಸ್ಥೆ ಸೇರಿದಂತೆ ಜನಗತ್ತಿನ 79 ದೇಶಗಳಲ್ಲಿಂದು ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಇಂದಿನ ಸುದೀರ್ಘ 24 ಗಂಟೆಗಳ ಕಾಲವೂ ಒಂದಿಲ್ಲ ಒಂದು ದೇಶದಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ಹೀಗಾಗಿ ಇಂದಿನ ದಿನವೇ ವಿಶ್ವದಾಖಲೆಯ ದಿನ  ಎಂದು ಬಣ್ಣಿಸಿದ್ರು. ಭಾರತದ ಒಟ್ಟು ಪದ್ದತಿಗಳಲ್ಲಿ ಯೋಗಾಸನ ಒಂದಾಗಿದೆ. ನಮ್ಮ ಭಾಷೆ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ನಮ್ಮ ಜೀವನ ಪದ್ದತಿ,ಕಲೆ ಸಂಗೀತ ಹಲವು ದೇಶಗಳಿಗೆ ಮಾದರಿಯಾಗಿದೆ. ಸಾವಿರ ವರ್ಷಗಳ ಹಿಂದೆ ನಡೆದ ನೂರಾರು ಅತಿಕ್ರಮಣ, ಅಕ್ರಮಣದ ನಂತರವೂ ಭಾರತದ ಸಂಸ್ಕೃತಿ ಇಂದಿಗೂ ಉಳಿದಿದೆ. ಅದ್ರಲ್ಲಿ ಯೋಗ ಕೂಡಾ ಒಂದಾಗಿರೋದು ನಮ್ಮ ಹೆಮ್ಮೆಯಾಗಿದೆ. ನಮ್ಮಲ್ಲಿ ಒಂದು ಮೋಹ ಇದೆ‌. ಭಾರತೀಯರು ಹೇಳಿದ್ರೆ ಕೆಲವರು ನಂಬಲ್ಲ. ಆದ್ರೇ ಅದು ಇಂಗ್ಲಿಷ್ ನವರು ಪಾಶ್ಚಿಮಾತ್ಯರು ಬಂದು ಹೇಳಿದಾಗ ನಾವು ನಂಬುತ್ತೇವೆ. ಹೀಗಾಗಿ ಭಾರತೀಯರ ಪದ್ಧಿತಿ ಕೆಲವೊಮ್ಮೆ ವಿದೇಶಕ್ಕೆ ಹೋಗಿ ಬಂದ ಮೇಲೆ ಅದರ ಮಹತ್ವ ಹೆಚ್ಚಾಗುತ್ತದೆ ಎಂದು ಜೋಷಿ ಹೇಳಿದ್ರು. ಇನ್ನೂ ಇದೇ ವೇಳೆ ಮಾತನಾಡಿದ ಸಚಿವ ಆನಂದ ಸಿಂಗ್ ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಿರೋದು ಹೆಮ್ಮೆಯ ವಿಷವಾಗಿದೆ ಎಂದ್ರು.

ಹಂಪಿಯಲ್ಲಿ ನಡೆದಿದ್ದ ಯೋಗೋತ್ಸವ ಕಾರ್ಯಕ್ರಮ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮುನ್ನ ಕಳೆದೊಂದು ತಿಂಗಳಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ನಿತ್ಯ ಒಂದಲ್ಲೊಂದು ಗ್ರಾಮದಲ್ಲಿ ಯೋಗಾಭ್ಯಾಸದ ಜೊತೆ ಯೋಗದ ಮಹತ್ವದ ಕುರಿತು ಜನ ಜಾಗೃತಿಯನ್ನು ವಚನಾನಂದ ಗುರುಗಳು ಮಾಡುತ್ತಿದ್ರು. ಅಲ್ಲದೇ ಪ್ರತಿ ಭಾನುವಾರ ಹಂಪಿಯ ಒಂದೊಂದು ಸ್ಮಾರಕದ ಮುಂದೆ ಸಾವಿರಾರು ಜನರನ್ನು ಒಗ್ಗೂಡಿಸಿಕೊಂಡು ಯೋಗಾಭ್ಯಾಸ ಮಾಡಿಸುತ್ತಿದ್ರು. ಸಮಾರೋಪದ ಕಾರ್ಯಕ್ರಮದಂತಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿದ್ರೇ ಇದು ಮತ್ತೊಂದು ಹಂಪಿ ಉತ್ಸವವೇ ಎನ್ನುವಂತೆ ಭಾಸವಾಗುತ್ತಿತ್ತು.  

ಹಂಪೀಲಿ ಕುಡಿವ ನೀರಿಗೆ ಬರ: ಪ್ರವಾಸಿಗರ ಪರದಾಟ..!

ಅಗ್ನಿಪಥ್ ಯೋಜನೆ ವಿಚಾರದಲ್ಲಿ ಜೋಶಿ ಆಕ್ರೋಶ

ಅಗ್ನಿಪಥ ಯೋಜನೆ ಸಾಕಷ್ಟು ಯುಕವರಿಗೆ ಸ್ಪೂರ್ತಿಯಾಗಿದೆ. ಹಲವರು ಜೀವನವನ್ನು ಕಟ್ಟಿಕೊಳ್ಳಬಹುದಾಗಿದೆ. ಆದ್ರೇ ಕೆಲವು ಪಟ್ಟ ಬದ್ಧ ಹಿತಾಸಕ್ತಿಗಳು ವಿನಾಕಾರಣ ಗಲಾಟೆಗೆ ಪ್ರಚೋದನೆ ಮಾಡಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ರು. 

ಯೋಗಾಭ್ಯಾಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇನೆಯಲ್ಲಿ ನಿವೃತ್ತಿ ಹೊಂದುವವರ ಸಂಖ್ಯೆ ಇದೀಗ ಹೆಚ್ಚಾಗಿದೆ. ಅದರಲ್ಲೂ ಅವಧಿಗೂ ಮುನ್ನ ನಿವೃತ್ತಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.  ಹೀಗಾಗಿ ಸೇನೆ ಹೆಚ್ಚಿನ ಬಲ ತುಂಬಲು ಈ  ಯೋಜನೆ ಸಹಕಾರಿಯಾಗಿದೆ. ಸೇನೆಗೆ ಸೇರೋರಿಗೆ ಉತ್ತಮ ಪ್ಯಾಕೇಜ್ ಇದೆ. ಈ‌ ಬಗ್ಗೆ ಎಲ್ಲರಿಗೂ ಮನವರಿಕೆ ‌ಮಾಡಲಾಗಿದೆ .ನಂತರದ ದಿನಗಳಲ್ಲಿ ಅವರಿಗೆ ಸರ್ಕಾರದ ಉದ್ಯೋಗ ಸೇರಿದಂತೆ ವಿವಿಧ ಕಡೆ ಹುದ್ದೆ ಸಿಕ್ತದೆ..ಸೇನೆಯಿಂದ ಬಂದು ಬಹುದೊಡ್ಡ ಹುದ್ದೆ ಅಲಂಕರಿಸಬಹುದು. ಈ ಕುರಿತು 1989 ರಿಂದ ಚರ್ಚೆ ನಡೆಯುತ್ತಿದೆ.  ಆದ್ರೇ, ದುರ್ದೈವ ಏನಂದ್ರೇ, ನಮ್ಮಲ್ಲಿ ಏನಾದರೂ ಇಂಪ್ಲಿಮೆಂಟ್ ಮಾಡುವಾಗ ಗಲಾಟೆ ಮಾಡಿಸೋ ಕೆಲ ಶಕ್ತಿ ಇವೆ ..ಕಾಂಗ್ರೆಸ್ ಸೇರಿದಂತೆ ಕೆಲವರು ವಿರೋಧ ಮಾಡೋಬೇಕಂತಲೇ ಇದ್ದಾರೆ. ಈ ಗಲಭೆಗೆ ಕೆಲ ಸಮಾಜ ವಿರೋಧಿಗಳು ಸೇರಿಕೊಳ್ಳುತ್ತಿದ್ದಾರೆ ಎಂದ್ರು. ಇನ್ನೂ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆ‌ ಗಲಾಟೆ ಮಾಡಿದವರು ಸೈನ್ಯಕ್ಕೆ ಸೇರೋರಾ-?  ಸೈನ್ಯಕ್ಕೆ ಸೇರೋರು ರೈಲಿಗೆ, ಬಸ್ ಗೆ ಬೆಂಕಿ ಹಚ್ಚುತ್ತಾರಾ..? ಈ ಪ್ರವೃತ್ತಿ ಒಳ್ಳೆಯದಲ್ಲ.. ಎಲ್ಲದಕ್ಕೂ ವಿರೋಧ ಮಾಡೋದು ಉತ್ತಮ ಬೆಳೆವಣಿಗೆ ಅಲ್ಲ ವಿರೋಧಿಗಳ ವಿರದ್ಧ ಆಕ್ರೋಶ ಭರಿತವಾಗಿ ಮಾತನಾಡಿದ್ರು. 

click me!