ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸೋಮವಾರ(ಜೂ.15)ರಂದು ಹೊಸದಾಗಿ 03 ಕೊರೋನಾ ಕೇಸ್ ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.16): ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಮವಾರ ಜಿಲ್ಲೆಯಲ್ಲಿ ಮೂವರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆ ಕಂಡಿದೆ.
ಸೋಮವಾರ ಪತ್ತೆಯಾದ ಮೂವರು ಈ ಹಿಂದೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಪಿ-7211 (45 ವರ್ಷದ ಪುರುಷ) ಪಿ-5823 ಸಂಪರ್ಕದಿಂದ ಸೋಂಕು ತಗುಲಿದ್ದರೆ, ಪಿ-7212 (50 ವರ್ಷದ ಪುರುಷ) ಪಿ-2824ರ ಸಂಪರ್ಕದಿಂದ ಹಾಗೂ ಪಿ-7213 (26 ವರ್ಷದ ಪುರುಷ) ಪಿ-2830ರ ಸಂಪರ್ಕದಿಂದ ಸೋಂಕು ತಗುಲಿದೆ.
ದಕ್ಷಿಣ ಕನ್ನಡದಲ್ಲಿ ಮೂವರು ಗರ್ಭಿಣಿಯರು ಸಹಿತ 23 ಮಂದಿಗೆ ಪಾಸಿಟಿವ್
ಮೂರು ಮಂದಿ ಸೋಂಕಿತರಿಗೆ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದಿನ ಮೂರು ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆ ಕಂಡಿದೆ. ಸೋಂಕಿತರಲ್ಲಿ 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದಾರೆ. ಉಳಿದ 40 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
100 ಕೊರೋನಾ ಸೋಂಕಿತರನ್ನು ಹೊಂದಿದ್ದ ಜಿಲ್ಲೆ ಎನ್ನುವ ಕುಖ್ಯಾತಿಗೆ ಒಳಗಾಗಲು ಶಿವಮೊಗ್ಗ ಜಿಲ್ಲೆಗೆ ಇನ್ನು ಕೇವಲ 6 ಪ್ರಕರಣಗಳು ಬೇಕಾಗಿವೆ. ಮುಂಬೈ ಸೋಂಕು ಮಲೆನಾಡಿನ ಮಂದಿಗೆ ಬಿಟ್ಟೂಬಿಡದಂತೆ ಕಾಡಲಾರಂಭಿಸಿದೆ.