23ರಂದು ದುಬೈನಲ್ಲಿ ಸಿಲುಕಿದ 200 ಮಂದಿ ಕನ್ನಡಿಗರು ತವರಿಗೆ..!

By Kannadaprabha News  |  First Published Jun 16, 2020, 9:29 AM IST

ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿರುವ ಮತ್ತಷ್ಟು ಜನರನ್ನು ಜೂ. 23ರಂದು ಭಟ್ಕಳಕ್ಕೆ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಕರೆತರಲಾಗುತ್ತಿದೆ.


ಉತ್ತರ ಕನ್ನಡ(ಜೂ.16): ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿರುವ ಮತ್ತಷ್ಟು ಜನರನ್ನು ಜೂ. 23ರಂದು ಭಟ್ಕಳಕ್ಕೆ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಕರೆತರಲಾಗುತ್ತಿದೆ.

ಉದ್ಯಮಿ ಹಾಗೂ ತಂಝೀಮ್‌ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್‌ ಮುನಿರಿ ಅವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ಮಂದಿಯನ್ನು ಚಾರ್ಟರ್ಡ್‌ ವಿಮಾನದ ಮೂಲಕ ಸುರಕ್ಷಿತವಾಗಿ ಭಟ್ಕಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಜೂ. 23ರಂದು ರಾಸ್‌-ಅಲ್‌-ಖೈಮಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾರಲು ಮತ್ತೊಂದು ಚಾರ್ಟರ್ಡ್‌ ವಿಮಾನ ಸಿದ್ಧಗೊಂಡಿದೆ.

Latest Videos

undefined

ಪಾಸಿಟಿವ್ ಪ್ರಕರಣ ಹೆಚ್ಚಿರುವ ಉಡುಪಿಯಲ್ಲಿ 51 ಪರೀಕ್ಷಾ ಕೇಂದ್ರ, 14,034 ಪರೀಕ್ಷಾರ್ಥಿಗಳು

ಕೊರೋನಾ ಲಾಕ್‌ಡೌನ್‌ನಿಂದಾಗಿ ಭಟ್ಕಳ ಮತ್ತು ಸುತ್ತಮುತ್ತಲಿನ 600ಕ್ಕೂ ಅಧಿಕ ಜನರು ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದುಬೈಯ ನೂಹಾ ಜನರಲ್‌ ಟ್ರೆಡಿಂಗ್ಸ್‌ನ ಮಾಲೀಕ, ಉದ್ಯಮಿ ಅತಿಕುರ್ರಹ್ಮಾನ್‌ ಮುನಿರಿ, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ತಾಯ್ನಾಡಿಗೆ ಮರಳು ಬಯಸಿದ್ದಾರೆ. ಇವರನ್ನು ಭಾರತಕ್ಕೆ ಕಳುಹಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಮೊದಲ ಚಾರ್ಟರ್ಡ್‌ ವಿಮಾನ 184 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ ನಂತರ ನಮ್ಮಲ್ಲಿ ಭರವಸೆ ಮೂಡಿದ್ದು, ದುಬೈನಲ್ಲಿ ಬಾಕಿಯಾಗಿರುವ ಇನ್ನುಳಿದ ಜನರನ್ನೂ ಭಟ್ಕಳಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ಜೂ. 23ರಂದು 210 ಪ್ರಯಾಣಿಕರನ್ನು ಬಾಡಿಗೆ ವಿಮಾನದ ಮೂಲಕ ಭಟ್ಕಳ ತಲುಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವ ತಮ್ಮ ತಾಯ್ನಾಡಿಗೆ ಮರಳಲು ಇಚ್ಛಿರುವವರು ್ಞಜಠಿaಜ್ಟ್ಝಿಜ್ಞಿಛಿಃhಟಠಿಞaಜ್ಝಿ.್ಚಟಞ, ಞaಜ್ಝಿಠಿಟ:್ಞಜಠಿaಜ್ಟ್ಝಿಜ್ಞಿಛಿಃhಟಠಿಞaಜ್ಝಿ.್ಚಟಞ ಈ ಮೇಲ್‌ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ (ಪಾಸ್‌ಪೋರ್ಟ್‌ ಪ್ರತಿಯ ಮೊದಲ ಮತ್ತು ಕೊನೆಯ ಪುಟದ ನಕಲು ಪ್ರತಿ, ದುಬೈಯ ಮೊಬೈಲ್‌ ಸಂಖ್ಯೆ, ಭಾರತದ ಮೊಬೈಲ್‌ ಸಂಖ್ಯೆ, ವಿಸಾ ವಿವರ ಹಾಗೂ ಪ್ರಯಾಣಕ್ಕೆ ಕಾರಣ) ರವಾನಿಸಬೇಕೆಂದು ಕೋರಲಾಗಿದೆ.

click me!