Wildlife: ಒಂದು ಕಡೆ ಚಿರತೆ, ಇನ್ನೊಂದಡೆ ಕಾಡಾನೆ ದಾಳಿ: ಆತಂಕದಲ್ಲಿ ಕಾಡಂಚಿನ ಗ್ರಾಮಗಳು

By Ravi Janekal  |  First Published Mar 12, 2023, 1:07 PM IST

ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನವಗ್ರಾಮದಲ್ಲಿ ಆನೆಯೊಂದು ಶನಿವಾರ ಸಂಜೆ ಕಾಣಿಸಿಕೊಂಡು ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.


ದಾಂಡೇಲಿ (ಮಾ.12) : ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನವಗ್ರಾಮದಲ್ಲಿ ಆನೆಯೊಂದು ಶನಿವಾರ ಸಂಜೆ ಕಾಣಿಸಿಕೊಂಡು ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಆನೆಯು ನವಗ್ರಾಮದ ಜನವಸತಿ ಪ್ರದೇಶದ ಹತ್ತಿರದಲ್ಲಿರುವ ಹೊಲಕ್ಕೆ ಆಹಾರ ಅರಸಿ ಬಂದಿದ್ದು ಹೊಲದಲ್ಲಿನ ಬೆಳೆಗಳನ್ನು ನಾಶ ಪಡಿಸಿದೆ. ಈ ಸಂದರ್ಭದಲ್ಲಿ ಭಯಭಿತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆ ಇರುವ ಪ್ರದೇಶದಲ್ಲಿ ದೊಡ್ಡ ಶಬ್ದ ಮಾಡುವ ಮೂಲಕ ಆನೆಯನ್ನು ಅರಣ್ಯದೊಳಗೆ ಓಡಿಸುವಲ್ಲಿ ಸಫಲರಾಗಿದ್ದಾರೆ.

Latest Videos

undefined

ಬೆಳಗಿನ ಜಾವ ಜನವಸತಿ ಜಾಗಕ್ಕೆ ನುಗ್ಗಿರುವ ಒಂಟ ಸಲಗ ರೇವಣಕರ ಎಂಬ ರೈತನ ಮನೆ ಹತ್ತಿರವೇ ಕಾಣಿಸಿಕೊಂಡಿದೆ. ಬಾಳೆ, ಅಡಿಕೆ ತೋಟಕ್ಕೆ ನುಗ್ಗಿ ಬೆಳೆ ತಿಂದಿರುವ ಆನೆ. ಕಾಡಂಚಿನ ಗ್ರಾಮವಾಗಿರುವುದರಿಂದ ಕಾಡುಪ್ರಾಣಿಗಳ ಹಾವಳಿಗೆ ಗ್ರಾಮಸ್ಥರು ಆತಂಕದಲ್ಲಿ ಇರುವಂತಾಗಿದೆ. ಕೃಷಿ ಚಟುವಟಿಕೆ ಕೈಗೊಳ್ಳು ಹೆದರುವಂತಾಗಿ ಹಠಾತ್ತನೇ ದಾಳಿ ಮಾಡುವ ಕಾಡಾನೆಗಳು ಬೆಳೆದ ಬೆಳೆಯನ್ನೆಲ್ಲ ಕ್ಷಣಾರ್ಧಲ್ಲಿ ನಾಶ ಮಾಡುತ್ತಿವೆ. 

 

ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎಸಿಎಫ್‌ ಜಿ.ಕೆ. ಶೆಟ್‌, ಆರ್‌.ಎಫ್‌.ಓ ಅಪ್ಪಾಜಿರಾವ ಕಲಶೆಟ್ಟಿ, ಡಿಆರ್‌ಎಫ್‌ಓ ಲೊಕೇಶ, ಸಂದೀಪ ಗೌಡಾ, ವೀರೇಶ, ಹುಸೇನ, ಕೆಟಿಆರ್‌ ವನಜೀವಿ ಸಂಶೋಧನಾ ಕೇಂದ್ರದ ಇಮ್ರಾನ, ಪೊಲೀಸ ಇಲಾಖೆಯ ಸಿಪಿಐ ಬಿ.ಎಸ್‌. ಲೊಕಾಪುರ, ಗ್ರಾಮೀಣ ಠಾಣೆಯ ಪಿಎಸ್‌ಐ ಗಳಾದ ಕೃಷ್ಣಗೌಡ ಅರಿಕೆರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.

ಆರು ಜಾನುವಾರು ಬಲಿ ಪಡೆದ ಚಿರತೆ:

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಚಿರತೆ ಕಾಟ ವಿಪರೀತವಾಗಿದೆ. ಎರಡು ದಿನದಲ್ಲಿ ಆರು ಜಾನುವಾರುಗಳನ್ನು ಬಲಿ ಪಡೆದಿರುವ ಚಿರತೆ. ಕಳೆದೊಂದು ವಾರದಿಂದ‌ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ತಿರುಗಾಡುತ್ತಿರುವ ಚಿರತೆ. ಇದರಿಂದ ಗ್ರಾಮಸ್ಥರು ಹೊರಬರಲು ಹೆದರುತ್ತಿದ್ದಾರೆ.

ವನ್ಯಸಂಪತ್ತು ಅರಣ್ಯ ಇಲಾಖೆಯದ್ದೆಂಬ ಮನೋಭಾವ ಬಿಡಿ: ರಿಷಬ್‌ ಶೆಟ್ಟಿ

ಚಿರತೆ ದಾಳಿಗೆ ಗಣಪ ಗೌಡ ಹಾಗೂ ಬೆಳ್ಳಗೌಡರ ತಲಾ 1 ಕರು,  ಸುನೀಲ್ ಆಚಾರಿ ಹಾಗೂ ಬಾಬು ಹಳ್ಳೇರ್ ಅವರ ತಲಾ 2 ಜಾನುವಾರು ಚಿರತೆಗೆ ಬಲಿಯಾಗಿವೆ. ಜಾನುವಾರುಗಳನ್ನು ಬಲಿ ಪಡೆಯುವ ಮುನ್ನ ಮೊನ್ನೆಯಷ್ಟೇ ಎರಡು ಜಿಂಕೆಗಳನ್ನು ಕೊಂದಿದ್ದ ಚಿರತೆ. ಕಾಡಂಚಿನ ಗ್ರಾಮಗಳಿಗೆ ವನ್ಯಜೀವಿಗಳು ದಾಳಿ ಮಾಡುತ್ತಿದ್ದರು ಸೈಲೆಂಟ್ ಆಗಿರುವ ಅರಣ್ಯ ಇಲಾಖೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!