ವಿಫ್ ಉಲ್ಲಂಘನೆ ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಸೇರಿ ನಾಲ್ವರು ಬಿಜೆಪಿ ಸದಸ್ಯರು ಅನರ್ಹ

By Gowthami K  |  First Published Sep 4, 2022, 7:51 PM IST

ಪಕ್ಷದ ವಿಫ್ ಉಲ್ಲಂಘನೆ ಹಿನ್ನೆಲೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿ ನಾಲ್ವರು ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.


ವರದಿ: ಟಿ. ಮಂಜುನಾಥ್ ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಸೆ.4): ಪಕ್ಷದ ವಿಫ್ ಉಲ್ಲಂಘನೆ ಹಿನ್ನೆಲೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿ ನಾಲ್ವರು ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ನಾಲ್ವರು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆ ಹಿನ್ನೆಲೆ ವಜಾಗೊಳಿಸಿದ್ದು, ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ಬೊಮ್ಮಸಂದ್ರ ಪುರಸಭೆಯ ನಾಲ್ವರು ಬಿಜೆಪಿ ಪುರಸಭೆ ಸದಸ್ಯರನ್ನು ಜಿಲ್ಲಾಧಿಕಾರಿಗಳು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅ ನರದ ಹೇ. ಮಾರ್ಚ್ 14, 2022 ರಂದು ನಡೆದಿದ್ದ ಬೊಮ್ಮಸಂದ್ರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪುರಸಭೆ ಸದಸ್ಯರಾದ ಎ ಪ್ರಸಾದ್, ಗೋಪಾಲ್, ವಸಂತ್ ಕುಮಾರ್ ಮತ್ತು ವೆಂಕಟಾಚಲಪತಿ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿದ್ದರು. ಮಾತ್ರವಲ್ಲದೆ ಗೋಪಾಲ್ ಮತ್ತು ವಸಂತ್ ಕುಮಾರ್ ರವರು ಪಕ್ಷದ ಅಧಿಕೃತ ಅಭ್ಯರ್ಥಿ ಮಂಜುಳಾ ಮತ್ತು ನಾರಾಯಣಸ್ವಾಮಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದರಿಂದ ಜಿಲ್ಲಾಧಿಕಾರಿಗಳ ಬಳಿ ದೂರು ನೀಡಲಾಗಿದ್ದು, ದೂರು ಆಧರಿಸಿ ನಾಲ್ವರನ್ನು ಅನರ್ಹಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡ‌ ಬಿಬಿಐ ರಾಜು ಉರುಪ್ ಮುನಿರೆಡ್ಡಿ ತಿಳಿಸಿದ್ದಾರೆ. 

Latest Videos

undefined

BJP Janotsav: ಸೆ.8ಕ್ಕೆ ಬಿಜೆಪಿ ಜನೋತ್ಸವ, ಸರ್ಕಾರದ ಸಾಧನೆ ಅನಾವರಣ: ಕಟೀಲ್‌

ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಆಂತರಿಕ ಕಾನೂನಿಗೆ ಎಲ್ಲರೂ ಬದ್ಧರಾಗಿರಬೇಕು. ಆದ್ರೆ ಬೊಮ್ಮಸಂದ್ರ ಪುರಸಭೆಯ ನಾಲ್ವರು ಸದಸ್ಯರು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ಸದಸ್ಯರೊಂದಿಗೆ ಶಾಮೀಲಾಗಿ ಅಧಿಕಾರದ ಗದ್ದುಗೆ ಏರಿದ್ದರು. ಈ ಬಗ್ಗೆ ಪಕ್ಷ ಮತ್ತು ಮುಖಂಡರು ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರು. ಹಾಗಾಗಿ ಇಂದು ನಾಲ್ವರು ಬಿಜೆಪಿ ಪುರಸಭೆ ಸದಸ್ಯರನ್ನು ಅನರ್ಹ ಮಾಡಲಾಗಿದೆ. ಇದು ಪಕ್ಷದ ನೀತಿ ನಿಯಮಗಳನ್ನು ಗಾಳಿಗೆ ತೂರುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಬಿಜೆಪಿ ಮುಖಂಡರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ನಿಶ್ಚಿತ: ಸಚಿವ ಸುಧಾಕರ್‌

ಒಟ್ನಲ್ಲಿ 23 ಸದಸ್ಯ ಬಲದ ಬೊಮ್ಮಸಂದ್ರ ಪುರಸಭೆಯಲ್ಲಿ 16 ಬಿಜೆಪಿ ಸದಸ್ಯರು ಗೆಲುವು ಸಾಧಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೊತೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಕೂಡ ಬಿಜೆಪಿಗೆ ಎಂದು ಭಾವಿಸಲಾಗಿತ್ತು. ಆದ್ರೆ ಕಾಂಗ್ರೆಸ್ ಮುಖಂಡರು ಬಿಜೆಪಿ ಪಾಳಯದ ಒಡಕನ್ನು ಬಳಸಿಕೊಂಡು ಬಿಜೆಪಿ ಸದಸ್ಯರಿಂದಲೇ ಬಂಡಾಯದ ಬಾವುಟ ಹಾರಿಸಿ ಬಿಜೆಪಿಗರಿಗೆ ಅಧಿಕಾರ ಸಿಗದಂತೆ ಮಾಡಿದ್ದರು. ಇದೀಗ ಬಿಜೆಪಿಗರು ಬಂಡಾಯದ ನಾಲ್ವರಿಗೆ ಅನರ್ಹತೆಯ ಶಾಕ್ ನೀಡಿದ್ದು, ಮುಂದಿನ ಕಾನೂನು ಹೋರಾಟ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

click me!