ನಾಳೆ ಚಾಮರಾಜಪೇಟೆ ಶಾಸಕ‌ ಜಮೀರ್ ಕಚೇರಿಯಲ್ಲಿ ಗಣೇಶೋತ್ಸವ

By Gowthami KFirst Published Sep 4, 2022, 7:11 PM IST
Highlights

ಚಾಮರಾಜಪೇಟೆ ಈದ್ಗಾ ಮೈದಾನ ಸದಾ ಒಂದಿಲ್ಲೊಂದು ಸುದ್ದಿಯಿಂದ ಸದ್ದಾಗ್ತಿದೆ. ಈ ಬಾರಿ ಮೈದಾನದಲ್ಲಿ ಗಣೇಶ ಕೂರಿಸಲಾಗಲಿಲ್ಲ. ಅದಕ್ಕಾಗಿ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಗಣೇಶೋತ್ಸವ ಮಾಡಲು ಜಮೀರ್ ಮುಂದಾಗಿದ್ದಾರೆ.

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು( ಸೆ.4): ಚಾಮರಾಜಪೇಟೆ ಈದ್ಗಾ ಮೈದಾನ ಸದಾ ಒಂದಿಲ್ಲೊಂದು ಸುದ್ದಿಯಿಂದ ಸದ್ದಾಗ್ತಿದೆ. ಈ ಬಾರಿ ಮೈದಾನದಲ್ಲಿ ಗಣೇಶ ಕೂರಿಸಲಾಗಲಿಲ್ಲ. ಅದಕ್ಕಾಗಿ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಗಣೇಶೋತ್ಸವ ಮಾಡಲು ಜಮೀರ್ ಮುಂದಾಗಿದ್ದಾರೆ. ಇದಕ್ಕೆ ಹೋರಾಟ ಈದ್ಗಾ ಹೋರಾಟ ಸಮಿತಿ ವಿರೋಧಿಸುತ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಕಚೇರಿಯಲ್ಲಿ ನಾಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಹಿಂದೂ ಸಂಘಟನೆಗಳ ಟೀಕೆ ಬಳಿಕ ಜಮೀರ್ ಗಣೇಶೋತ್ಸವಕ್ಕೆ ಮುಂದಾಗಿದ್ದು, ಈದ್ಗಾ ಮೈದಾನದ ವಿವಾದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಜಮೀರ್ ಗುರಿಯಾಗಿದ್ದರು. ಇದೀಗ ಪ್ಯಾಚಪ್ ಮಾಡಿಕೊಳ್ಳಲು ಹಿಂದೂ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ. ನಾಳೆ ಒಂದು ದಿನದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ ಮಾಡಲಾಗಿದ್ದು, ಚಾಮರಾಜಪೇಟೆಯ ವರ್ತಕರ ಬೀದಿ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ನಾಳೆ ಬೆಳಗ್ಗೆ 9:15 ರಿಂದ 10 ಗಂಟೆಯೊಳಗೆ ವಿದ್ಯಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.

ಸಂಜೆ 4 ಗಂಟೆಗೆ ಬಾಣಬಿರುಸುಗಳೊಂದಿಗೆ ಅದ್ದೂರಿ ಮರವಣಿಗೆ ನೆರವೇರಿಸುವ ಅಖಿಲ ಕರ್ನಾಟಕ ಜಿ.ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟದಿಂದ ಮುಂದಾಗಿದೆ. ಈ ಬಗ್ಗೆ ಶಾಸಕರಾಗಲಿ,‌ಅವರ ಬೆಂಬಲಿಗರಾಗಲಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಇನ್ನೂ ಶಾಸಕ ಕಚೇರಿಯಲ್ಲಿ 3 ಅಡಿ ಎತ್ತರದ ಮಣ್ಣಿನ ಗಣಪನ ಪ್ರತಿಷ್ಠಾಪನೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗ್ತಿದೆ. 

Gadag; ಭಾವೈಕ್ಯತೆಯ ಗಣೇಶೋತ್ಸವಕ್ಕೆ ಸಾಕ್ಷಿಯಾದ ಕಳಸಾಪುರ

ಶಾಸಕರ ಕಚೇರಿಯ ಬೇಸ್ಮೆಂಟ್ ನಲ್ಲಿ ವಿದ್ಯುತ್ ದೀಪ ಮತ್ತು ಬ್ಯಾನರ್ ಗಳನ್ನ ಅಳವಡಿಸಿ ಸರ್ವರಿಗೂ ಸ್ವಾಗತಿಸಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ಯಾಚಪ್ ಮಾಡಿಕೊಳ್ಳುವ ತಂತ್ರ ಅಂತ ಕಿಡಿ ಕಾರಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹಿಂದೂಗಳ ಮತಬೇಟೆಗೆ ಮುಂದಾಗಿದ್ದಾರೆ. ಕಳೆದ 4 ಬಾರಿಯೂ ಗೆದ್ದಾಗ ಆಚರಣೆ ಮಾಡದಿದ್ದವರು ಈಗ ಗಣೇಶೋತ್ಸವ ಮಾಡ್ತಿರೋದು ಸರಿಯಲ್ಲ. ಜನ ಜಮೀರ್ ಗೆ ತಕ್ಕ ಪಾಠ ಕಲಿಸ್ತಾರೆ ಅಂತ ಸ್ಥಳೀಯರು ಹೇಳಿದ್ದಾರೆ.

ತಗಡಿನ ಶೆಡ್‌ನಲ್ಲಿ ಸಂತ್ರಸ್ತರ ಗಣೇಶೋತ್ಸವ; ಸರ್ಕಾರಕ್ಕೆ ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ

ಆಲ್ಲದೆ ಇಂದು ಚಾಮರಾಜಪೇಟೆ ಗಣೇಶೋತ್ಸವ ಸಮಿತಿಯಿಂದ ಈದ್ಗಾ ಮೈದಾನದ ಪಕ್ಕ ವಿಘ್ನೇಶ್ವರನ ಪ್ರತಿಷ್ಠಾಪನೆ ಆಗಿದೆ. ನಾಳೆ ಜಮೀರ್ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲಿದ್ದು, ಈಗಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಾಳೆ ಚಾಮರಾಜಪೇಟೆ ಹೈಡ್ರಾಮಾ ಶುರುವಾಗುವ ಸಾಧ್ಯತೆ ಹೆಚ್ಚಾಗಿದೆ.

click me!