ಮದುವೆ ಫೋಟೊ ಕೊಡದ ಫೋಟೊಗ್ರ್ರಾಫರ್‌ಗೆ ₹30 ಸಾವಿರ ದಂಡ ಮತ್ತು ಪರಿಹಾರ!

By Ravi Janekal  |  First Published Jul 20, 2023, 10:17 AM IST

ಡಿಸೆಂಬರ್ 2022 ರಲ್ಲಿ ನಡೆದ ಮದುವೆಯ ಪೋಟೊಗಳನ್ನು ಪೋಟೋಗ್ರಾಫರರವರು ತೆಗೆದಿದ್ದರು ಆದರೆ ಅವುಗಳ ಫೋಟೊಗಳನ್ನು ದೂರುದಾರರಿಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ಫೋಟೊಗ್ರಾಫರ ಫೋಟೊ ಕೊಟ್ಟಿಲ್ಲವಾದ್ದರಿಂದ ಅವನು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾನೆ ಎಂದು 30 ಸಾವಿರ ದಂಡ ಮತ್ತು ಪರಿಹಾರ ವಿಧಿಸಿದೆ.


 ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಜು.20): ಧಾರವಾಡ ಆಕಾಶವಾಣಿ ಹತ್ತಿರದ ಶೇಕ್ ಕಂಪೌಂಡ, ನಿವಾಸಿ ಶಹಬಾಜ ಹೆಬಸೂರ ಎಂಬುವವರು ತನ್ನ ಮದುವೆಗೆ ಫೋಟೊ ತೆಗೆಯಲು ಸತ್ತೂರ ಕೆ.ಎಚ್.ಬಿ. ಲೇಔಟ್‍ನಲ್ಲಿರುವ ರವಿ ದೊಡ್ಡಮನಿಯವರಿಗೆ ರೂ.25 ಸಾವಿರ ಗೆ ಗುತ್ತಿಗೆ ಕೊಟ್ಟಿದ್ದರು ಆ ಪೈಕಿ ದೂರುದಾರ ಎದುರುದಾರರಿಗೆ ರೂ.15 ಸಾವಿರ ಅಡವಾನ್ಸ್ ಹಣವನ್ನು ಕೊಟ್ಟಿದ್ದರು ಆದರೆ ಆತ ಪೋಟೋವನ್ನು ಕೊಡದೆ ಸತಾಯಿಸುತ್ತಿದ್ದ ಆದರೆ ಇದಕ್ಕೆ‌ಬೇಸತ್ತು ದೂರುದಾರರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. 

Tap to resize

Latest Videos

ಡಿಸೆಂಬರ್ 2022 ರಲ್ಲಿ ನಡೆದ ಮದುವೆಯ ಪೋಟೊಗಳನ್ನು ಪೋಟೋಗ್ರಾಫರರವರು ತೆಗೆದಿದ್ದರು ಆದರೆ ಅವುಗಳ ಫೋಟೊಗಳನ್ನು ದೂರುದಾರರಿಗೆ ಕೊಟ್ಟಿರಲಿಲ್ಲ. ಈ ಬಗ್ಗೆ ಹಲವು ಬಾರಿ ವಿನಂತಿಸಿದರೂ ಫೋಟೊಗ್ರಾಫರ ಫೋಟೊ ಕೊಟ್ಟಿಲ್ಲವಾದ್ದರಿಂದ ಅವನು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾನೆ ಅಂತಾ ಹೇಳಿ ದೂರುದಾರ ಫೋಟೊಗ್ರಾಫರ್ ರವಿಯ ಮೇಲೆ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.  

 

ಮಾತು ತಪ್ಪಿದ ಗೋಲ್ಡನ್‌ ಹೋಮ್ಸ್‌ ಬಿಲ್ಡ​ರ್‌ಗೆ ಕ್ರಯ ಪತ್ರ ಬರೆದು ಕೊಡಲು ಆಯೋಗದ ಆದೇಶ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ. ಹಿರೇಮಠ ಅವರು ಡಿಸೆಂಬರ್ 2022ರಲ್ಲಿ ದೂರುದಾರನಿಂದ ರೂ.15 ಸಾವಿರ ಪಡೆದು ಮದುವೆಯ ಸವಿನೆನಪಿಗಾಗಿ ಮದುವೆ ಸಮಾರಂಭದಲ್ಲಿ ತೆಗೆದ ಫೋಟೊಗಳನ್ನು ದೂರುದಾರರಿಗೆ ನೀಡದೆ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ ದೂರುದಾರ ಸಂದಾಯ ಮಾಡಿದ ಅಡವಾನ್ಸ್ ಹಣ ರೂ.15 ಸಾವಿರ ಜೊತೆಗೆ ದೂರುದಾರ ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.5,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರ ಫೋಟೊಗ್ರಾಫರ್‍ಗೆ ಆದೇಶಿಸಿದೆ.

ಪ್ರಿಂಟರ್‌ ಬುಕ್‌ ಮಾಡಿದ ವ್ಯಕ್ತಿಗೆ ಸ್ಪೀಕರ್‌ ಡೆಲಿವರಿ: ಅಮೆಜಾನ್‌ಗೆ 30,000 ದಂಡ..!

click me!