ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಜನಪರ ಯೋಜನೆಗಳೇ ಸಹಕಾರಿ. ರಾಜ್ಯ ಸರ್ಕಾರದ ಹತ್ತಾರು ಯೋಜನೆಗಳು ಜನರಿಗೆ ತಲುಪಿಸುವ ಕೆಲಸವು ಗ್ರಾಪಂಗಳಿಂದ ಮಾತ್ರ ಸಾಧ್ಯ. ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆಯು ವರದಾನ ಆಗಿದೆ ಎಂದು ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್ ತಿಳಿಸಿದರು.
ಹೊಳವನಹಳ್ಳಿ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಜನಪರ ಯೋಜನೆಗಳೇ ಸಹಕಾರಿ. ರಾಜ್ಯ ಸರ್ಕಾರದ ಹತ್ತಾರು ಯೋಜನೆಗಳು ಜನರಿಗೆ ತಲುಪಿಸುವ ಕೆಲಸವು ಗ್ರಾಪಂಗಳಿಂದ ಮಾತ್ರ ಸಾಧ್ಯ. ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆಯು ವರದಾನ ಆಗಿದೆ ಎಂದು ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್ ತಿಳಿಸಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂಗೆ 30 ತಿಂಗಳ ಎರಡನೇ ಅವಧಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಯ ಪ್ರಕ್ರಿಯೆಯ ನಂತರ ಮಾತನಾಡಿದರು.
ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗೃಹಸಚಿವ ಡಾ.ಜಿ. ಪರಮೇಶ್ವರ್ ಈಗಾಗಲೇ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದಲ್ಲಿ ನಮ್ಮ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಬರಲಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಅಧಿಕಾರಿಗಳ ಪಾತ್ರ ಬಹುಮುಖ್ಯ ಆಗಿದೆ ಎಂದು ಹೇಳಿದರು.
ಕ್ಯಾಮೇನಹಳ್ಳಿ ಗ್ರಾಪಂಯ ನೂತನ ಅಧ್ಯಕ್ಷ ಡಿ.ನಾಗರಾಜು ಮಾತನಾಡಿ, ಸಚಿವ ಡಾ.ಜಿ. ಪರಮೇಶ್ವರ ಆಶೀರ್ವಾದವೇ ನನ್ನ ಗೆಲುವಿಗೆ ಮುಖ್ಯ ಕಾರಣ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಮ್ಮ ಶಾಸಕರ ಮಾರ್ಗದರ್ಶನ ಮತ್ತು ಗ್ರಾಪಂ ಸರ್ವ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.
ಚುನಾವಣೆ ವೇಳೆ ಚುನಾವಣೆ ಅಧಿಕಾರಿ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷೆ ಸುನಂದ, ಸದಸ್ಯರಾದ ವೀರಯ್ಯ, ಸೌಮ್ಯ, ರಾಮಕ್ಕ, ಹರೀಶ, ಶಿವಣ್ಣ, ವೆಂಕಟಾಲಕ್ಷ್ಮಮ್ಮ, ಸಿದ್ದಗಂಗಮ್ಮ, ಹನುಮಂತರಾಜು, ಲಕ್ಷ್ಮೇನರಸಿಂಹಮೂರ್ತಿ, ನಾಗಮಣಿ, ಅನುರಾಧ, ಪುಟ್ಟರಾಜು, ಸೌಮ್ಯ.ಬಿ, ರತ್ನಮ್ಮ, ಮುಖಂಡರಾದ ಉಮಾಶಂಕರ್, ಪ್ರಸಾದ್, ಶ್ರೀನಿವಾಸ, ಗೋಪಾಲಕೃಷ್ಣರೆಡ್ಡಿ, ತ್ರಿಯಾಂಬಕರಾಧ್ಯ, ಪುಟ್ಟಕಾಮಣ್ಣ, ಶಶಿಕುಮಾರ್, ಬಾಲರಾಜು, ಸಿದ್ದಾರ್ಥ ಮತ್ತಿತರರು ಇದ್ದರು.
8 ಗ್ರಾಪಂಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ
ಕ್ಯಾಮೇನಹಳ್ಳಿ ಗ್ರಾಪಂಗೆ ಅಧ್ಯಕ್ಷರಾಗಿ ಡಿ.ನಾಗರಾಜಯ್ಯ, ಉಪಾಧ್ಯಕ್ಷೆ ನಾಗಮಣಿ, ವಡ್ಡಗೆರೆಗೆ ಅಧ್ಯಕ್ಷೆ ರಕ್ಷಿತಾ.ಎಂ.ಬಿ, ಉಪಾಧ್ಯಕ್ಷ ನರೇಂದ್ರಬಾಬು, ಜೆಟ್ಟಿಅಗ್ರಹಾರಕ್ಕೆ ಅಧ್ಯಕ್ಷೆ ಕೆ.ಸಿ.ಗೀತಾ, ಉಪಾಧ್ಯಕ್ಷೆ ಸರಸ್ಪತಮ್ಮ, ಬಿ.ಡಿ.ಪುರಗೆ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ಭಾರತಿ.ಬಿ.ಆರ್, ಎಲೆರಾಂಪುರಕ್ಕೆ ಅಧ್ಯಕ್ಷ ಚಂದ್ರಶೇಖರಯ್ಯ, ಉಪಾಧ್ಯಕ್ಷೆ ಗಂಗಾದೇವಿ, ಅಕ್ಕಿರಾಂಪುರಕ್ಕೆ ಅಧ್ಯಕ್ಷೆ ಅಂಜಿನಮ್ಮ, ಉಪಾಧ್ಯಕ್ಷೆ ಗಂಗಮ್ಮ, ಕೋಳಾಲ ಅಧ್ಯಕ್ಷ ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಕೆ.ಆರ್. ಮಹೇಶ್, ಕುರಂಕೋಟೆ ಅಧ್ಯಕ್ಷೆ ತಿಮ್ಮಕ್ಕ, ಉಪಾಧ್ಯಕ್ಷ ದೊಡ್ಡಯ್ಯ ನೂತನವಾಗಿ ಆಯ್ಕೆಯಾಗಿದ್ದಾರೆ.